ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯ

By Sachhidananda Acharya
|
Google Oneindia Kannada News

ಹರಾರೆ (ಜಿಂಬಾಬ್ವೆ), ನವೆಂಬರ್ 16: ಬುಧವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಜಿಂಬಾಬ್ವೆಯ ಆಡಳಿತವನ್ನು ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ಮೂಲಕ ಅಧ್ಯಕ್ಷ ರಾಬರ್ಟ್‌ ಮುಗಾಬೆ 37 ವರ್ಷಗಳ ಸುದೀರ್ಘ ಆಡಳಿತ ಅಂತ್ಯವಾಗಿದೆ.

ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಗಾಬೆಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಗಾಬೆ

ಇದು ಕ್ಷಿಪ್ರ ಕ್ರಾಂತಿ ಅಲ್ಲ ಎಂದು ಮೇಜರ್ ಜನರನ್ ಸಿಬುಸಿಸೊ ಮೊಯೊ ತಿಳಿಸಿದ್ದು, 'ಅಧ್ಯಕ್ಷ ಮುಗಾಬೆ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆ ಮುಂದುವರಿಸಲಾಗಿದೆ. ಅವರೆಲ್ಲಾ ಸುರಕ್ಷಿತವಾಗಿದ್ದು ಆತಂಕಪಡುವ ಅಗತ್ಯವಿಲ್ಲ," ಎಂದು ಹೇಳಿದ್ದಾರೆ.

ಮುಗಾಬೆ ಗೃಹಬಂಧನದಲ್ಲಿರುವುದನ್ನು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್‌ ಜುಮಾ ಖಚಿತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ದಕ್ಷಿಣ ಆಫ್ರಿಕಾ ಸರಕಾರ 'ಮುಗಾಬೆ ಜತೆ ಜುಮಾ ಮಾತುಕತೆ ನಡೆಸಿದ್ದಾರೆ. ಮುಗಾಬೆ ಸುರಕ್ಷಿತವಾಗಿದ್ದಾರೆ' ಎಂದು ತಿಳಿಸಿದೆ.

 ಸಂಸತ್ ಭವನದ ಹೊರಗೆ ಸೇನಾ

ಸಂಸತ್ ಭವನದ ಹೊರಗೆ ಸೇನಾ

ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿರುವ ಸಂಸತ್‌ ಭವನದ ಹೊರಗೆ ಸೇನಾ ಟ್ಯಾಂಕ್ ಗಳು ಜಮಾಯಿಸಿವೆ. ಪ್ರಮುಖ ರಸ್ತೆಗಳಲ್ಲಿ ಸೇನೆಯ ತುಕಡಿಗಳು ಕಾಣಿಸಿದ್ದು ಮುಗಾಬೆ ನಿವಾಸದ ಸುತ್ತ ಗುಂಡಿನ ಮೊರೆತವೂ ಕೇಳಿಸಿದೆ.

"ಸೇನೆಯೇ ಆಡಳಿತ ನಡೆಸುವುದಿಲ್ಲ. ಗುರಿಯನ್ನು ತಲುಪಿದ ಬಳಿಕ ದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಲಿದೆ," ಎಂದು ಜನರನ್ ಸಿಬುಸಿಸೊ ಮೊಯೊ ಹೇಳಿದ್ದಾರೆ.

'ಇದು ಸೇನಾ ಮುಖ್ಯಸ್ಥ ಜನರಲ್‌ ಕಾನ್‌ಸ್ಟಂಟಿನೊ ಚಿವೆಂಗಾ ಅವರ ದೇಶದ್ರೋಹದ ನಡವಳಿಕೆ' ಎಂದು ಆಡಳಿತರೂಢ ಜಿಂಬಾಬ್ವೆ ಆಫ್ರಿಕನ್‌ ನ್ಯಾಷನಲ್‌ ಯೂನಿಯನ್‌-ಪೆಟ್ರಿಯಾಟಿಕ್‌ ಫ್ರಂಟ್‌ (ಝಎಎನ್‌ಯು-ಪಿಎಫ್‌) ಆಕ್ರೋಶ ವ್ಯಕ್ತಪಡಿಸಿದೆ.

 37 ವರ್ಷಗಳ ಸರ್ವಾಧಿಕಾರಿ

37 ವರ್ಷಗಳ ಸರ್ವಾಧಿಕಾರಿ

ಬ್ರಿಟನ್‌ನಿಂದ 1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಅದಾದ ನಂತರ ಈ ದೇಶವನ್ನು ಆಳುತ್ತಾ ಬಂದ ಏಕಮೇವ ನಾಯಕ ಅಂದರೆ ಅದು ರಾಬರ್ಟ್ ಮುಗಾಬೆ.

ಸೇನಾ ಕ್ರಾಂತಿಗೂ ಮುನ್ನ 37 ವರ್ಷಗಳ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು ಮುಗಾಬೆ. ಸದ್ಯ ಅವರಿಗೀಗ 93 ವರ್ಷ ವಯಸ್ಸು.

ಹಾಗೆ ನೋಡಿದರೆ ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು. ದೇಶದಲ್ಲಿ ಸಾಮೂಹಿಕ ವಲಸೆ, ಅಕ್ರಮ ಮತದಾನ, ಹಳ್ಳ ಹಿಡಿದ ಆರ್ಥಿಕತೆಗಳು ಪ್ರಮುಖ ಸಮಸ್ಯೆಗಳಾಗಿ ಗುರುತಿಸಿಕೊಂಡಿದ್ದವು.

 ಸೇನೆ - ಸರಕಾರ ಭಿನ್ನಾಭಿಪ್ರಾಯ

ಸೇನೆ - ಸರಕಾರ ಭಿನ್ನಾಭಿಪ್ರಾಯ

ಮುಗಾಬೆ ದೀರ್ಘ ಕಾಲ ಅಧಿಕಾರದಲ್ಲಿರಲು ಸೇನೆಯ ಪಾತ್ರ ಪ್ರಮುಖವಾಗಿತ್ತು. ಮುಗಾಬೆ ಅವರ ಸರ್ವಾಧಿಕಾರ ಆಡಳಿತಕ್ಕೆ ಸೇನೆ ಭರಪೂರ ನೆರವು ನೀಡಿತ್ತು. ಆದರೆ ಇತ್ತೀಚೆಗೆ ಸೇನೆ ಅಧ್ಯಕ್ಷರ ವಿರುದ್ಧ ಮುನಿಸಿಕೊಂಡಿತ್ತು.

ಇದಕ್ಕೆ ಕಾರಣ ಮುಗಾಬೆಯವರ ಕುಟುಂಬ ರಾಜಕಾರಣ.

 ಅಧ್ಯಕ್ಷಗಿರಿಗೆ ಪತ್ನಿ ಕರೆತರುವ ಯತ್ನ

ಅಧ್ಯಕ್ಷಗಿರಿಗೆ ಪತ್ನಿ ಕರೆತರುವ ಯತ್ನ

ಇತ್ತೀಚೆಗೆ ಮುಗಾಬೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನಲೆಯಲ್ಲಿ ತಮ್ಮ ಪತ್ನಿ 52 ವರ್ಷದ ಗ್ರೇಸ್ ಮುಗಾಬೆ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿಸಲು ಪ್ರಯತ್ನ ನಡೆಸಿದ್ದರು. ಇದು ಸೇನೆಯ ಹಿರಿಯ ಅಧಿಕಾರಿಗಳಿಗೆ ಇಷ್ಟವಿರಲಿಲ್ಲ.

ಜತೆಗೆ ಉಪಪಾಧ್ಯಕ್ಷ ಎಮ್ಮರ್ಸನ್‌ ನಂಗಾಗ್ವಾರನ್ನು ಮುಗಾಬೆ ವಜಾ ಮಾಡಿದ್ದು ಸೇನಾ ಮುಖ್ಯಸ್ಥ ಕಾನ್‌ಸ್ಟಂಟಿನೊ ಚಿವೆಂಗಾ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸೇನೆ ಆಡವಳಿತವನ್ನು ಕೈಗೆ ತೆಗೆದುಕೊಂಡಿದೆ.

ಸದ್ಯಕ್ಕೆ 'ಮುಗಾಬೆ ಆಡಳಿತದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ' ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

English summary
Three explosions were heard in Zimbabwe's capital Harare on Wednesday as military vehicles were seen in streets. The explosion comes after an army commander threatened to step in to calm political tensions over 93-year-old President Robert Mugabe's possible successor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X