ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ಸೋಂಕು ಹೆಚ್ಚಳ, ನಾಲ್ಕು ದಿನಗಳಲ್ಲಿ 150 ಮಕ್ಕಳ ದುರ್ಮರಣ

|
Google Oneindia Kannada News

ಹರಾರೆ, ಆಗಸ್ಟ್ 17: ದೇಶದೆಲ್ಲೆಡೆ ದಡಾರ ಸೋಂಕು ಹೆಚ್ಚಳವಾಗುತ್ತಿದ್ದು, ಆತಂಕ ಮೂಡಿಸಿದೆ. ಕಳೆದ ಒಂದು ವಾರದಲ್ಲೇ ಸೋಂಕಿತರು ಹಾಗೂ ಮೃತರ ಸಂಖ್ಯೆ ದ್ವಿಗುಣಗೊಂಡಿದೆ. 157ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಸರ್ಕಾರ ಅಧಿಕೃತ ಅಂಕಿ ಅಂಶ ನೀಡಿದೆ.

ದಡಾರ ಸೋಂಕಿಗೆ ಒಳಗಾಗಿರುವ ಶಂಕಿತ ರೋಗಿಗಳ ಸಂಖ್ಯೆ 1036 ರಿಂದ 2056ಕ್ಕೇರಿದೆ. ಅದು ಕೂಡಾ ನಾಲ್ಕೇ ದಿನಗಳ ಅಂತರದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿರುವುದು ಆತಂಕ ಹೆಚ್ಚಿಸಿದೆ ಎಂದು ಮಾಹಿತಿ ಸಂಪರ್ಕ ಸಚಿವೆ ಮೋನಿಕಾ ಮುಸ್ವಾಂಗ್ವಾ ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಸಾರ್ವಜನಿಕವಾಗಿ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ತೊಡಗಿಕೊಳ್ಳದಂತೆ ಜನರಿಗೆ ಸೂಚನೆ ನೀಡಲಾಗಿತ್ತು. ಆದರೆ, ಹೆಚ್ಚು ಹೆಚ್ಚು ಸಭೆ, ಸಮಾರಂಭ ಆಯೋಜನೆಯಿಂದ ಸಾಂಕ್ರಾಮಿಕ ವೇಗವಾಗಿ ಹರಡಿರುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇದೇ ತಿಂಗಳ ಆರಂಭದಲ್ಲಿ ಮೊದಲ ಸೋಂಕಿತನನ್ನು ಗುರುತಿಸಿದ್ದ ಇಲಾಖೆ, ಚಿಕಿತ್ಸೆ ಆರಂಭಿಸಿತ್ತು. ಹೆಚ್ಚಾಗಿ ಆರು ತಿಂಗಳ ಮಗುವಿನಿಂದ ಹಿಡಿದು 15 ವರ್ಷದೊಳಗಿನ ಮಕ್ಕಳಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ದಡಾರ ಬಗ್ಗೆ ಜನಜಾಗೃತಿ ಮೂಡಿಸಿ, ಲಸಿಕೆ ಅಭಿಯಾನ ನಡೆಸಿದರೂ ಒಂದು ವರ್ಗದ ಸಮುದಾಯ ಇಲ್ಲಿ ತನಕ ಲಸಿಕೆ ಪಡೆದುಕೊಂಡಿಲ್ಲ, ಸೋಂಕಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮುಂದಾಗುತ್ತಿಲ್ಲ ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೊವಿಡ್-19 ಅಲ್ಲ: ಭಾರತದಲ್ಲಿ ಈ ಲಸಿಕೆ ಪಡೆಯದೇ 12 ಲಕ್ಷ ಮಕ್ಕಳು ಸಾವು!ಕೊವಿಡ್-19 ಅಲ್ಲ: ಭಾರತದಲ್ಲಿ ಈ ಲಸಿಕೆ ಪಡೆಯದೇ 12 ಲಕ್ಷ ಮಕ್ಕಳು ಸಾವು!

"ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತರು ದಡಾರದಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆದಿಲ್ಲ ಎಂಬುದು ತಿಳಿದು ಬಂದಿದೆ. ಈ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸರ್ಕಾರವು ನಾಗರಿಕ ಸಂರಕ್ಷಣಾ ಘಟಕದ ಕಾಯಿದೆಯನ್ನು ಜಾರಿಗೆ ತರಲಿದೆ" ಎಂದು ಸಚಿವೆ ಮೋನಿಕಾ ಹೇಳಿದರು.

Zimbabwe: More than 150 children dead in measles outbreak

ಲಸಿಕಾ ಅಭಿಯಾನ ತೀವ್ರಗೊಳಿಸಿದ ಜಿಂಬಾಬ್ವೆ

ಸಚಿವೆ ಮೋನಿಕಾ ಲಸಿಕಾ ಲಸಿಕಾ ಅಭಿಯಾನ ತೀವ್ರಗೊಳಿಸುವ ಬಗ್ಗೆ ಮಾಹಿತಿ ನೀಡಿ, ಜಿಂಬಾಬ್ವೆ ಸರ್ಕಾರವು ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರನ್ನು ಕರೆ ತರಲು ಎಲ್ಲಾ ರೀತಿಯಿಂದ ಯತ್ನಿಸಲಿದೆ. ಸಾಂಪ್ರದಾಯಿಕ ಮತ್ತು ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿ, ಲಸಿಕೆ ಬಗ್ಗೆ ಇರುವ ಭಯ, ಆತಂಕ ದೂರಾಗಿಸುವ ಪ್ರಯತ್ನ ಜಾರಿಯಲ್ಲಿದೆ.

ಸರ್ಕಾರವು ಲಸಿಕೆಗಳನ್ನು ಹೆಚ್ಚಿಸಲು ಅಗತ್ಯವಾದ ಹಣವನ್ನು ಒದಗಿಸಲು ಸರ್ಕಾರ ಮುಂದಾಗಿದೆ. "ತುರ್ತು ಪರಿಸ್ಥಿತಿಯನ್ನು ಎದುರಿಸಲು" ರಾಷ್ಟ್ರೀಯ ವಿಪತ್ತು ನಿಧಿಯಿಂದ ಹಣವನ್ನು ಮಂಜೂರು ಮಾಡಲಾಗುತ್ತಿದೆ ಎಂದರು.

Zimbabwe: More than 150 children dead in measles outbreak

ದಡಾರ ವೈರಸ್ ಸೋಂಕಿನಿಂದ ಕುರುಡುತನ, ಮೆದುಳಿನ ಊತ, ಅತಿಸಾರ ಮತ್ತು ತೀವ್ರವಾದ ಉಸಿರಾಟದ ಸೋಂಕುಗಳು ಸೇರಿದಂತೆ ಕೆಲವು ಗಂಭೀರ ತೊಡಕುಗಳೊಂದಿಗೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ವೈರಸ್ ಅನ್ನು ಈಗ ಲಸಿಕೆಯಿಂದ ತಡೆಯಬಹುದು.

ಏಪ್ರಿಲ್‌ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ದಡಾರ ಪ್ರಕರಣಗಳು 400% ಹೆಚ್ಚಾಗುತ್ತಿರುವ ಎಚ್ಚರಿಕೆಯನ್ನು ನೀಡಿತ್ತು. ಮಕ್ಕಳಿಗೆ ಲಸಿಕೆ ಹಾಕುವಲ್ಲಿ ವಿಳಂಬದಿಂದಾಗಿ ತಡೆಗಟ್ಟಬಹುದಾದ ರೋಗಗಳು ಆಫ್ರಿಕಾದಲ್ಲಿ ಸ್ಫೋಟವಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.(AFP, ರಾಯಿಟರ್ಸ್)

English summary
Government says 157 children have died as the total number of suspected cases nationwide has doubled in four days. All of those who died had not been vaccinated against measles according to officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X