ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

37 ವರ್ಷ ಆಡಳಿತ ನಡೆಸಿದ ಜಿಂಬಾಬ್ವೆ ಮಾಜಿ ಅಧ್ಯಕ್ಷ ಮುಗಾಬೆ ನಿಧನ

|
Google Oneindia Kannada News

ಹರಾರೆ, ಸೆ.06: 'ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್-ಪೆಟ್ರಿಯಾಟಿಕ್ ಫ್ರಂಟ್' ಮುಖ್ಯಸ್ಥ, ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ. 37 ವರ್ಷಗಳ ಆಡಳಿತದ ನಂತರ ಕೊನೆಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 94 ವರ್ಷ ವಯಸ್ಸಿನ ಮುಗಾಬೆ, ಕಳೆದ ಕೆಲ ತಿಂಗಳಿನಿಂದ ಸಿಂಗಪುರದಲ್ಲಿ ವಯೋಸಹಜ ಅಸ್ವಸ್ಥ ಸ್ಥಿತಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಶುಕ್ರವಾರದಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

1924ರ ಫೆಬ್ರವರಿ 21ರಂದು ಕ್ಯಾಥೋಲಿಕ್ ಕುಟುಂಬದಲ್ಲಿ ಹರಾರೆಯ ನೈಋತ್ಯ ಕುಟಮಾ ಮಿಷನ್ ಎಂಬಲ್ಲಿ ಮುಗಾಬೆ ಜನಿಸಿದರು. ಚಿಕ್ಕಂದಿನಲ್ಲಿ ಕುರಿಗಾಹಿಯಾಗಿ ಅಲೆಯುವಾಗಲೂ ಪುಸ್ತಕ ಹಿಡಿದುಕೊಂಡು ಹೋಗುತ್ತಿದ್ದ ಮುಗಾಬೆ, ಬಾಲ್ಯದಲ್ಲೇ ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು.

ಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯ

ಕಾರ್ಪೆಂಟರ್ ವೃತ್ತಿಯಲ್ಲಿದ್ದ ತಂದೆ ಸಂಸಾರವನ್ನು ಬಿಟ್ಟು ಹೊರ ನಡೆದಾಗ ಮುಗಾಬೆಗಿನ್ನು 10 ವರ್ಷ. ಕಷ್ಟಪಟ್ಟು ಓದಿ 17ನೇ ವರ್ಷಕ್ಕೆ ಶಾಲಾ ಶಿಕ್ಷಕನಾಗಿ ಗುರುತಿಸಿಕೊಂಡರು. ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗ ನಾಯಕರೊಡನೆ ಸೇರಿ ಮಾರ್ಕ್ಸಿಸಂ ಬಗ್ಗೆ ಒಲವು ಬೆಳೆಸಿಕೊಂಡರು.

ಘಾನಾ ಜೊತೆ ಒಡನಾಟ

ಘಾನಾ ಜೊತೆ ಒಡನಾಟ

ಘಾನಾದಲ್ಲಿದ್ದಾಗ ಅಲ್ಲಿನ ಸ್ಥಾಪಕ ಅಧ್ಯಕ್ಷ ಕ್ವಾಮೆ ಎನ್ ಕ್ರುಮಾ ಪ್ರಭಾವಕ್ಕೆ ಒಳಗಾದರು. ರೋಡೇಶಿಯಾಕ್ಕೆ ಮರಳಿದ ಬಳಿಕ 1964ರಲ್ಲಿ ರಾಷ್ಟ್ರೀಯವಾದಿ ಚಟುವಟಿಕೆಗಳಿಗಾಗಿ ಬಂಧಿಸಲಾಯಿತು. 10 ವರ್ಷ ಜೈಲುವಾಸ ಅನುಭವಿಸಿದರು. ಈ ಅವಧಿಯಲ್ಲಿ ತಮ್ಮ ಮೊದಲ ಪತ್ನಿಯಿಂದ ಪಡೆದ ಮಗುವಿನ ಮರಣ ವಾರ್ತೆಯನ್ನು ಅರಗಿಸಿಕೊಂಡರು.

100 ವರ್ಷ ವಯಸ್ಸಿನ ತನಕ ಆಡಳಿತದ ಆಸೆ

100 ವರ್ಷ ವಯಸ್ಸಿನ ತನಕ ಆಡಳಿತದ ಆಸೆ

ಈ ಅವಧಿಯಲ್ಲಿ ದೂರ ಶಿಕ್ಷಣ ಮೂಲಕ ಮೂರು ಪದವಿಗಳನ್ನು ಪಡೆದುಕೊಂಡರು. 37 ವರ್ಷಗಳ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಮುಗಾಬೆಗೆ 100 ವರ್ಷ ವಯಸ್ಸಿನ ತನಕ ಆಡಳಿತ ನಡೆಸುವ ಮಹಾದಾಸೆಯಿತ್ತು. ಆದರೆ, 2017ರ ನವೆಂಬರ್ 21ರಂದು ಅಧಿಕಾರ ಕೈ ತಪ್ಪುತ್ತಿದ್ದಂತೆ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿದರು. ಮುಗಾಬೆ ಆಡಳಿತ ಕೊನೆಗೊಂಡಿದ್ದಕ್ಕೆ ಜಿಂಬಾಬ್ವೆ ಜನತೆ ಮಾತ್ರ ಸಂಭ್ರಮದಿಂದ ತೇಲಾಡಿದ್ದು ಸುಳ್ಳಲ್ಲ.

1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ

1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ

ಬ್ರಿಟನ್‌ನಿಂದ 1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಅದಾದ ನಂತರ ಈ ದೇಶವನ್ನು ಆಳುತ್ತಾ ಬಂದ ಏಕಮೇವ ನಾಯಕ ಅಂದರೆ ಅದು ರಾಬರ್ಟ್ ಮುಗಾಬೆ. ಸೇನಾ ಕ್ರಾಂತಿಗೂ ಮುನ್ನ 37 ವರ್ಷಗಳ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು.

ಪತ್ನಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕಾಣುವ ಕನಸು

ಪತ್ನಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕಾಣುವ ಕನಸು

ಪತ್ನಿ 52 ವರ್ಷದ ಗ್ರೇಸ್ ಮುಗಾಬೆ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿಸಲು ಪ್ರಯತ್ನ ನಡೆಸಿದ್ದರು. ಇದು ಸೇನೆಯ ಹಿರಿಯ ಅಧಿಕಾರಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ, ಕ್ಷಿಪ್ತ ಕ್ರಾಂತಿ ನಡೆಸಿದ ಸೇನೆ, ಮುಗಾಬೆ ಅವರನ್ನು ಗೃಹಬಂಧನದಲ್ಲಿರಿಸಿ, ಆಡಳಿತ ಯಂತ್ರವನ್ನು ಕೈಗೆ ತೆಗೆದುಕೊಂಡಿತ್ತು.

ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು

ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು

ಹಾಗೆ ನೋಡಿದರೆ ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು. ದೇಶದಲ್ಲಿ ಸಾಮೂಹಿಕ ವಲಸೆ, ಅಕ್ರಮ ಮತದಾನ, ಹಳ್ಳ ಹಿಡಿದ ಆರ್ಥಿಕತೆಗಳು ಪ್ರಮುಖ ಸಮಸ್ಯೆಗಳಾಗಿ ಗುರುತಿಸಿಕೊಂಡಿದ್ದವು. ಮುಗಾಬೆ ದೀರ್ಘ ಕಾಲ ಅಧಿಕಾರದಲ್ಲಿರಲು ಸೇನೆಯ ಪಾತ್ರ ಪ್ರಮುಖವಾಗಿತ್ತು. ಮುಗಾಬೆ ಅವರ ಸರ್ವಾಧಿಕಾರ ಆಡಳಿತಕ್ಕೆ ಸೇನೆ ಭರಪೂರ ನೆರವು ನೀಡಿತ್ತು. ಆದರೆ ಇತ್ತೀಚೆಗೆ ಸೇನೆ ಅಧ್ಯಕ್ಷರ ವಿರುದ್ಧ ಮುನಿಸಿಕೊಂಡಿತ್ತು. ಮುಗಾಬೆ ಕುಟುಂಬ ರಾಜಕೀಯದಿಂದ ಜನತೆ ಹಾಗೂ ಸೇನೆ ಬೇಸತ್ತುಹೋಗಿತ್ತು.

English summary
Zimbabwe ex-President Robert Mugabe dies aged 95, He was seeking treatment in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X