ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

37 ವರ್ಷಗಳ ಬಳಿಕ ಜಿಂಬಾಬ್ವೆಗೆ ಹೊಸ ಅಧ್ಯಕ್ಷರ ಆಯ್ಕೆ

By Mahesh
|
Google Oneindia Kannada News

ಹರಾರೆ, ಆಗಸ್ಟ್ 03: ರಾಬರ್ಟ್ ಮುಗಾಬೆ ಅವರ ಸತತ 37 ವರ್ಷಗಳ ಕಾಲದ ಅಧಿಕಾರ ಕಂಡಿದ್ದ ಜಿಂಬಾಬ್ವೆ ಈಗ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಮರ್‌ಸನ್ ನನ್‌ಗಾಗುವಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಸೋಮವಾರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಶುಕ್ರವಾರದಂದು ಜಿಂಬಾಬ್ವೆಯ ಚುನಾವಣೆ ಆಯೋಗ ಪ್ರಕಟಿಸಿದೆ. ಜಿಂಬಾಬ್ವೆ ಆಫ್ರಿಕನ್ ನ್ಯಾಶನಲ್ ಯೂನಿಯನ್-ಪೆಟ್ರಿಯಾಟಿಕ್ ಫ್ರಂಟ್ (ಜೆಎಎನ್‌ಯು-ಪಿಎಫ್) ಪಕ್ಷದ ಅಭ್ಯರ್ಥಿ ಎಮ್ಮರ್‌ಸನ್ ನನ್‌ಗಾಗುವಾ ಗೆಲುವು ಸಾಧಿಸಿದ್ದಾರೆ.

Emmerson Mnangagwa

ಎಮ್ಮರ್‌ಸನ್ ಶೇ 50.8 ಮತ(2.46 ಮಿಲಿಯನ್ ಮತ) ಪಡೆದರೆ, ಪ್ರಮುಖ ವಿರೋಧ ಪಕ್ಷದ ಅಭ್ಯರ್ಥಿ ನೆಲ್ಸನ್ ಚಾಮಿಸ ಶೇ 44.3 (2.14 ಮಿಲಿಯನ್ ಮತಗಳು) ಪಡೆದಿದ್ದಾರೆ. ಚುನಾವಣೆ ಫಲಿತಾಂಶದ ಬಗ್ಗೆ ಚಾಮಿಸ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ, ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಶೇ 50ಕ್ಕಿಂತ ಹೆಚ್ಚಿನ ಮತಗಳ ಗಳಿಕೆ ಇದ್ದರೆ ಮಾತ್ರ ಫಲಿತಾಂಶ ಹೊರ ಹಾಕುವ ಸಾಧ್ಯತೆಯಿತ್ತು.

ಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಗಾಬೆಜಿಂಬಾಬ್ವೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಗಾಬೆ

'ನಮ್ಮ ಪಕ್ಷ ಫಲಿತಾಂಶವನ್ನು ಎಮ್ಮರ್‌ಸನ್ ಅಧ್ಯಕ್ಷರನ್ನಾಗಿ ಘೋಷಿಸಿ, ಚುನಾವಣೆ ಆಯೋಗ ನೀಡುವ ಪತ್ರಗಳಿಗೆ ನಾವು ಸಹಿ ಹಾಕುವುದಿಲ್ಲ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ' ಎಂದು ಚಾಮಿಸಾ ಅವರ ವಕ್ತಾರರು ಹೇಳಿದ್ದಾರೆ.

ಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯಜಿಂಬಾಬ್ವೆಯಲ್ಲಿ ಕ್ಷಿಪ್ರ ಕ್ರಾಂತಿ, ಮುಗಾಬೆ 37 ವರ್ಷಗಳ ಆಡಳಿತ ಅಂತ್ಯ

ಬ್ರಿಟನ್‌ನಿಂದ 1980ರಲ್ಲಿ ಜಿಂಬಾಬ್ವೆ ಸ್ವಾತಂತ್ರ್ಯ ಪಡೆದುಕೊಂಡಿತ್ತು.ಸೇನಾ ಕ್ರಾಂತಿಗೂ ಮುನ್ನ 37 ವರ್ಷಗಳ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು ಮುಗಾಬೆ. ಸದ್ಯ ಅವರಿಗೀಗ 94 ವರ್ಷ ವಯಸ್ಸು. ಹಾಗೆ ನೋಡಿದರೆ ಮುಗಾಬೆ ಅವಧಿಯಲ್ಲಿ ಆಡಳಿತ ಹದಗೆಟ್ಟಿತ್ತು. ದೇಶದಲ್ಲಿ ಸಾಮೂಹಿಕ ವಲಸೆ, ಅಕ್ರಮ ಮತದಾನ, ಹಳ್ಳ ಹಿಡಿದ ಆರ್ಥಿಕತೆಗಳು ಪ್ರಮುಖ ಸಮಸ್ಯೆಗಳಾಗಿ ಗುರುತಿಸಿಕೊಂಡಿದ್ದವು.

ಮುಗಾಬೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನಲೆಯಲ್ಲಿ ತಮ್ಮ ಪತ್ನಿ 52 ವರ್ಷದ ಗ್ರೇಸ್ ಮುಗಾಬೆ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿಸಲು ಪ್ರಯತ್ನ ನಡೆಸಿದ್ದರು. ಇದು ಸೇನೆಯ ಹಿರಿಯ ಅಧಿಕಾರಿಗಳಿಗೆ ಇಷ್ಟವಿರಲಿಲ್ಲ.

English summary
Zimbabwe Electoral Commission(ZEC) announced that Emmerson Mnangagwa(75), Zimbabwe’s president and leader of the ruling Zanu-PF party, has won the country’s historic presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X