ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೊರೊನಾ’ ಬಗ್ಗೆ ಬಾಯಿಗೆ ಬಂದಂತೆ ವಿಡಿಯೋ ಮಾಡ್ತೀರಾ? ಹುಷಾರ್!

|
Google Oneindia Kannada News

ಕೊರೊನಾ ಬಗ್ಗೆ ತಲೆ, ಬುಡ ಗೊತ್ತಿಲ್ಲದೆ ವಿವರಣೆ ಕೊಡ್ತೀರಾ..? ಇಲ್ಲ ಕೊರೊನಾ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತೀರಾ..? ಹಾಗಾದ್ರೆ ಹುಷಾರ್. ಅಕಸ್ಮಾತ್ ಹೀಗೆ ಮಾತನಾಡಿದ್ರೂ ಅದನ್ನೆಲ್ಲಾ ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಬೇಡಿ..! ಅಕಸ್ಮಾತ್ ಅಪ್ಲೋಡ್ ಮಾಡಿದ್ರೆ ಆ ವಿಡಿಯೋ ಜೊತೆ ನಿಮ್ಮ ಮಾನವೂ ಹೋಗುತ್ತೆ. ಹೆಚ್ಚು ಕಮ್ಮಿಯಾದ್ರೆ ಯೂಟ್ಯೂಬ್‌ ಚಾನೆಲ್ ಕೂಡ ಹೊಗೆ ಹಾಕಿಸಿಕೊಳ್ಳಬಹುದು. ಹೌದು, ಇಂತಹದ್ದೊಂದು ಕಠಿಣ ನಿರ್ಧಾರವನ್ನ ಯೂಟ್ಯೂಬ್‌ ತೆಗೆದುಕೊಂಡಿದೆ.

ಕೊರೊನಾ' ಸೇರಿದಂತೆ ವಿವಿಧ ರೋಗಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಅಪ್ಲೋಡ್ ಮಾಡಿರುವ ವಿಡಿಯೋಗಳನ್ನು ಹುಡುಕಿ ಹುಡುಕಿ ಡಿಲೀಟ್ ಮಾಡುತ್ತಿದೆ ಯೂಟ್ಯೂಬ್‌. ಬ್ರೆಜಿಲ್ ಅಧ್ಯಕ್ಷರನ್ನೂ ಬಿಡದೆ ಕೊರೊನಾ ಕುರಿತು ಹೇಳಿಕೆ ನೀಡಿದ್ದ ವಿವಾದಾತ್ಮಕ ವಿಡಿಯೋಗಳನ್ನ ಡಿಲೀಟ್ ಮಾಡಲಾಗಿದೆ. ಜೈರ್ ಬೋಲ್ಸೊನಾರೋಗೆ ಸಂಬಂಧಪಟ್ಟ ಒಟ್ಟು 15 ವಿಡಿಯೋಗಳನ್ನು ಹುಡುಕಿ ಹುಡುಕಿ ಡಿಲೀಟ್ ಮಾಡಲಾಗಿದೆ. ಮಾಸ್ಕ್, ಕೊರೊನಾ, ಲಸಿಕೆ ಬಗ್ಗೆ ಜೈರ್ ಬೋಲ್ಸೊನಾರೋ ಮಾತನಾಡಿದ್ದ ವಿವಾದಾತ್ಮಕ ವಿಡಿಯೋಗಳು ಈ ಮೂಲಕ ಡಿಲೀಟ್ ಆಗಿವೆ. ಈ ಮೂಲಕ ಯೂಟ್ಯೂಬ್‌ ಖಡಕ್ ಸಂದೇಶ ರವಾನಿಸಿದ್ದು ವಿಜ್ಞಾನಿಗಳಿಗೆ ಮತ್ತು ತಜ್ಞರಿಗೆ ಸಂತಸ ತಂದಿದೆ.

ಇವರೆಲ್ಲರಿಗೂ ಗುರು ಟ್ರಂಪ್..!

ಇವರೆಲ್ಲರಿಗೂ ಗುರು ಟ್ರಂಪ್..!

ಬ್ರೆಜಿಲ್ ಪಾಲಿನ 'ಟ್ರಂಪ್' ಈ ಜೈರ್ ಬೋಲ್ಸೊನಾರೋ ಎನ್ನಬಹುದು. ಏಕೆಂದರೆ ಅಮೆರಿಕದಲ್ಲಿ ಏನೇನು ಅವಾಂತರ ಮಾಡಿದ್ದನೋ ಟ್ರಂಪ್ ಮಹಾಶಯ, ಅದನ್ನೆಲ್ಲಾ ತಪ್ಪದೇ ಪಾಲಿಸುತ್ತಿದ್ದಾರೆ ಬೋಲ್ಸೊನಾರೋ. ಜೈರ್ ಬೋಲ್ಸೊನಾರೋ ಹೀಗೆ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಇದೀಗ ಆಸ್ಪತ್ರೆಯಲ್ಲಿ ಬಿಕ್ಕಳಿಕೆ ನಿಲ್ಲಲು ಚಿಕಿತ್ಸೆ ಪಡೆಯುತ್ತಿರುವ ಬೋಲ್ಸೊನಾರೋ ಬ್ರೆಜಿಲ್ ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದಿಂದಲೂ ಬಾಯಿಗೆ ಬಂದಂತೆ ಮಾಡನಾಡಿದ್ದರು. ಅದರಲ್ಲೂ ಮಹಿಳೆಯರ ಬಗ್ಗೆ ಮಾತನಾಡುವ ಸಂದಂರ್ಭದಲ್ಲಿ ಜೈರ್ ಮಾತುಗಳು ಹಿಡಿತ ತಪ್ಪುತ್ತಿದ್ದವು. ಇನ್ನು ತಮ್ಮ ಆಡಳಿತ ವೈಖರಿ ಬಗ್ಗೆ ಪ್ರಶ್ನೆ ಮಾಡಿದರೆ ಬಾಯಿಗೆ ಬಂದಂತೆ ಉತ್ತರ ನೀಡುತ್ತಿದ್ದರು. ಈ ನಡುವೆ ಕೊರೊನಾ ಅಪ್ಪಳಿಸಿದ ಬಳಿಕ ಜೈರ್ ಬೋಲ್ಸೊನಾರೋ ಮಾತು ಅತಿರೇಕ ಎನಿಸುತ್ತಿತ್ತು. ಇದಕ್ಕೆಲ್ಲಾ ಯೂಟ್ಯೂಬ್‌ ಸರಿಯಾಗೇ ಉತ್ತರ ಕೊಟ್ಟಿದೆ.

ಬೋಲ್ಸೊನಾರೋ ವಿರುದ್ಧ ಆಕ್ರೋಶ

ಬೋಲ್ಸೊನಾರೋ ವಿರುದ್ಧ ಆಕ್ರೋಶ

ಬ್ರೆಜಿಲ್‌ನಲ್ಲಿ ಬೋಲ್ಸೊನಾರೋ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ವಿವಾದ ಸೃಷ್ಟಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದ ವಿಚಾರದಲ್ಲಿ ಈಗಾಗಲೇ ಬ್ರೆಜಿಲ್‌ ಸಂಸತ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಅಮೆಜಾನ್ ಮೂಲ ನಿವಾಸಿಗಳು ಜೈರ್ ಬೋಲ್ಸೊನಾರೋ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಹೋರಾಟ ಆರಂಭಿಸಿದ್ದಾರೆ. ಇದರ ನಡುವೆ ಪರಿಸರ ಸಂರಕ್ಷಣೆ ವಿಚಾರದಲ್ಲೂ ಬೋಲ್ಸೊನಾರೋ ಸರ್ಕಾರದ ಈ ಅಸಡ್ಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದಕ್ಕೂ ಜೈರ್ ಬೋಲ್ಸೊನಾರೋ ಕೇರ್ ಮಾಡುವ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟೆಲ್ಲದರ ನಡುವೆ ಸ್ವತಃ ಬ್ರೆಜಿಲ್ ಅಧ್ಯಕ್ಷರೇ ಆಸ್ಪತ್ರೆ ಸೇರಿದ್ದಾರೆ.

ಆಸ್ಪತ್ರೆಯಲ್ಲಿ ವಿವಾದಗಳ ಸರದಾರ..!

ಆಸ್ಪತ್ರೆಯಲ್ಲಿ ವಿವಾದಗಳ ಸರದಾರ..!

ಜುಲೈ 3ರಂದು ಹಲ್ಲಿನ ಕಸಿ ಮಾಡಿಸಿದ್ದ 66 ವರ್ಷ ವಯಸ್ಸಿನ ಬೋಲ್ಸೊನಾರೋಗೆ ಬಿಕ್ಕಳಿಕೆ ಕಾಣಿಸಿತ್ತು. ಬಿಕ್ಕಳಿಕೆ ಪ್ರಭಾವ ಎಷ್ಟಿತ್ತು ಅಂದರೆ, 10 ದಿನಗಳಿಂದಲೂ ಇದೇ ಪರಿಸ್ಥಿತಿಯಲ್ಲಿ ಜೈರ್ ಬೋಲ್ಸೊನಾರೋ ನರಳುತ್ತಿದ್ದರು. ಹೊರಗೆ ಬಂದಾಗ ಕೂಡ ಬೋಲ್ಸೊನಾರೋ ಬಿಕ್ಕಳಿಸುತ್ತಿದ್ರು. ಪರಿಸ್ಥಿತಿಯ ಗಂಭೀರತೆ ಅರಿತು ಬೋಲ್ಸೊನಾರೋ ಅವರನ್ನ ಮೊದಲು ಬ್ರೆಸಿಲಿಯಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಅಲ್ಲಿ ಸರಿಯಾದ ವ್ಯವಸ್ಥೆ ಸಿಗದ ಹಿನ್ನೆಲೆ 'ಸಾವೊ ಪಾಲೊ' ನಗರದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈಗ ಸುಮಾರು 10 ದಿನದಿಂದ ಆಸ್ಪತ್ರೆಯಲ್ಲೇ ಬೋಲ್ಸೊನಾರೋಗೆ ಚಿಕಿತ್ಸೆ ಮುಂದುವರಿದಿದೆ.

ಇದು 7ನೇ ಸರ್ಜರಿ..!

ಇದು 7ನೇ ಸರ್ಜರಿ..!

ಒಂದಲ್ಲ, ಎರಡಲ್ಲ ಈವರೆಗೂ ಬರೋಬ್ಬರಿ 6 ಬಾರಿ ಸರ್ಜರಿಗೆ ಒಳಗಾಗಿದ್ದಾರೆ ಬ್ರೆಜಿಲ್ ಹಾಲಿ ಅಧ್ಯಕ್ಷ ಜೈರ್ ಬೋಲ್ಸೊನಾರೋ. 2018ರ ಎಲೆಕ್ಷನ್ ಕ್ಯಾಂಪೇನ್ ಸಂದರ್ಭ ಬೋಲ್ಸೊನಾರೋ ಹೊಟ್ಟೆಗೆ ಇರಿಯಲಾಗಿತ್ತು. ಇದಾದ ಬಳಿಕ ವೈದ್ಯ ಆಂಟೋನಿಯೊ ಮ್ಯಾಸಿಡೊ ಹಲವು ಬಾರಿ ಬೋಲ್ಸೊನಾರೋಗೆ ಸರ್ಜರಿ ಮಾಡಿದ್ದಾರೆ. ಇದೇ ಮಂಗಳವಾರ ರಾತ್ರಿಯಿಂದ ಆರೋಗ್ಯ ಹದಗೆಟ್ಟಿತ್ತು. ಸಮಸ್ಯೆ ಕುರಿತು ಆಪ್ತರ ಬಳಿ ಬೋಲ್ಸೊನಾರೋ ಹೇಳಿಕೊಂಡಿದ್ದರು. ಮಾತಾಡಿದರೆ ಸಾಕು ಬಿಕ್ಕಳಿಕೆ ಹೆಚ್ಚಾಗುತ್ತಿತ್ತಂತೆ. ಹೀಗಾಗಿ ಬೋಲ್ಸೊನಾರೋ ಅವರನ್ನ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದು, ಸರ್ಜರಿಗೆ ಸಿದ್ಧತೆ ನಡೆದಿದೆ.

English summary
YouTube removes the controversial Covid-19 videos of Brazil president Jair Bolsonaro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X