ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನ ಮಗ ಸುಗಾ, ಮುಂದಿನ ಜಪಾನ್ ಪ್ರಧಾನಿ

|
Google Oneindia Kannada News

ರೈತನ ಮಗನೊಬ್ಬ ಜಪಾನ್‌ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜಪಾನ್‌ನ ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದು, ಜಪಾನ್ ಪ್ರಧಾನಿಯಾಗಿ ಆಯ್ಕೆಯಾಗಲು ಸುಗಾ ಹಾದಿ ಸುಗಮವಾದಂತಾಗಿದೆ.

ಕರುಳಿನ ಕ್ಯಾನ್ಸರ್ ಹಿನ್ನೆಲೆ ಆಗಸ್ಟ್‌ನಲ್ಲಿ ಶಿಂಜೋ ಅಬೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಬೆ ಅವರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಕೃಷಿಕನ ಮಗ ಯೋಶಿಹಿದೆ ಸುಗಾ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಯೋಶಿಹಿದೆ ಸುಗಾ ಈಗಾಗಲೇ ಚೀಫ್ ಕ್ಯಾಬಿನೆಟ್ ಸೆಕ್ರೆಟರಿ ರೀತಿಯ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ.

ಚೀನಾದ ವಿರುದ್ಧ ಯುದ್ಧದ ರಣ ತಂತ್ರಕ್ಕೆ ಭಾರತದ ಜತೆ ನಿಂತ ಜಪಾನ್ಚೀನಾದ ವಿರುದ್ಧ ಯುದ್ಧದ ರಣ ತಂತ್ರಕ್ಕೆ ಭಾರತದ ಜತೆ ನಿಂತ ಜಪಾನ್

ಅಲ್ಲದೆ ಹಿಂದಿನ ಪ್ರಧಾನಿ ಅಬೆ ಅವರ ಸರ್ಕಾರದಲ್ಲಿ ಸಾಕಷ್ಟು ಪಳಗಿದ್ದಾರೆ. ಹೀಗಾಗಿ ಜಪಾನ್ ಭವಿಷ್ಯದ ಬಗ್ಗೆ ಯೋಶಿಹಿದೆಗೆ ಸಾಕಷ್ಟು ಕನಸುಗಳಿವೆ. ಇದನ್ನೆಲ್ಲಾ ಈಡೇರಿಸಲು ಹಾಗೂ ಜಪಾನ್‌ಗೆ ಭದ್ರ ಭವಿಷ್ಯ ಒದಗಿಸಲು ಯೋಶಿಹಿದೆ ಬದ್ಧರಾಗಿದ್ದಾರೆ. ಹೀಗಾಗಿಯೇ ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಸದಸ್ಯರು ಒಗ್ಗಟ್ಟಾಗಿ ಯೋಶಿಹಿದೆ ಸುಗಾ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು

ಪ್ರಧಾನಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು

ಜಪಾನ್ ಪ್ರಧಾನಿ ಪಟ್ಟಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡುತ್ತಿದ್ದಂತೆ, ಜಗತ್ತಿನ 3ನೇ ಬಲಿಷ್ಠ ಆರ್ಥಿಕ ರಾಷ್ಟ್ರದ ರಾಜಕೀಯ ವಿದ್ಯಾಮಾನ ತೀವ್ರ ಕುತೂಹಲ ಕೆರಳಿಸಿತ್ತು. ಖಾಲಿ ಇದ್ದ ಪಿಎಂ ಪಟ್ಟಕ್ಕೆ ಜಪಾನ್‌ನಲ್ಲಿ ಭರ್ಜರಿ ಪೈಪೋಟಿ ಕೂಡ ಏರ್ಪಟ್ಟಿತ್ತು. ಆದರೆ ಮೊದಲಿನಿಂದಲೂ ಯೋಶಿಹಿದೆ ಸುಗಾ ಮುಂಚೂಣಿಯಲ್ಲಿದ್ದ ಹೆಸರು. ಸುಗಾ ಜೊತೆಯಲ್ಲೇ ಜಪಾನ್ ಉಪಪ್ರಧಾನಿ ತಾರೋ ಅಸೊ ಕೂಡ ಪಿಎಂ ಪಟ್ಟದ ರೇಸ್‌ನಲ್ಲಿ ಇದ್ದರು. ಅಂತಿಮವಾಗಿ ಯೋಶಿಹಿದೆ ಸುಗಾ ರೇಸ್‌ನಲ್ಲಿ ಗೆದ್ದು ಬೀಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಸುಗಾ 377 ಮತ ಪಡೆದರು. ಇತರ ಇಬ್ಬರು ಪ್ರತಿಸ್ಪರ್ಧಿಗಳು ಒಟ್ಟು 157 ಮತಗಳನ್ನು ಮಾತ್ರ ಪಡೆದಿದ್ದಾರೆ.

ಅಧಿಕೃತ ಘೋಷಣೆ ಮಾತ್ರ ಬಾಕಿ

ಅಧಿಕೃತ ಘೋಷಣೆ ಮಾತ್ರ ಬಾಕಿ

ಸೆಪ್ಟೆಂಬರ್ 16ರ ಬುಧವಾರ ಜಪನಾನ್ ಸಂಸತ್‌ನಲ್ಲಿ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಲಿಬರಲ್‌ ಡೆಮಾಕ್ರಟಿಕ್‌ ಪಕ್ಷ ಸಂಸತ್‌ನಲ್ಲಿ ಬಹುಮತ ಹೊಂದಿರುವ ಹಿನ್ನೆಲೆ ಸುಗಾ ಪ್ರಧಾನಿ ಆಗೋದು ಗ್ಯಾರಂಟಿ. ಹೀಗಾಗಿ ಯೋಶಿಹಿದೆ ಸುಗಾ ಆಯ್ಕೆ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಸದ್ಯದ ಮಟ್ಟಿಗೆ ಶಿಂಜೋ ಅಬೆ ಅವರೇ ಜಪಾನ್‌ನ ಹಂಗಾಮಿ ಪ್ರಧಾನಿಯಾಗಿದ್ದು, ಅಧಿಕೃತವಾಗಿ ಯೋಶಿಹಿದೆ ಸುಗಾ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾದ ಬಳಿಕ ಅಬೆ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.

ಸ್ಟ್ರಾಬೆರಿ ಕೃಷಿಕನ ಮಗ ಈ ‘ಸುಗಾ’..!

ಸ್ಟ್ರಾಬೆರಿ ಕೃಷಿಕನ ಮಗ ಈ ‘ಸುಗಾ’..!

1948ರ ಡಿಸೆಂಬರ್ 6ರಂದು ಹುಟ್ಟಿದ ಯೋಶಿಹಿದೆ ಸುಗಾ ಅವರಿಗೆ ಈಗ 71 ವರ್ಷ ವಯಸ್ಸು. ರೈತನ ಮಗ ಸುಗಾ ಸಾಕಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಗಾಚಿ ಎಂಬ ಜಪಾನ್‌ನ ಗ್ರಾಮೀಣ ಭಾಗದಲ್ಲಿ ಸುಗಾ ತಂದೆ ಸ್ಟ್ರಾಬೆರಿ ಕೃಷಿ ಮಾಡುತ್ತಿದ್ದರು. ಆದರೆ ತಮ್ಮ ಓದನ್ನು ಮುಂದುವರಿಸುವ ಕಾರಣಕ್ಕೆ ಟೋಕಿಯೋಗೆ ಶಿಫ್ಟ್ ಆಗಿದ್ದರು ಸುಗಾ.

ಜಪಾನ್‌ನ ಪ್ರಧಾನಿಯೆಂದು ಘೋಷಣೆ ಬಾಕಿ

ಜಪಾನ್‌ನ ಪ್ರಧಾನಿಯೆಂದು ಘೋಷಣೆ ಬಾಕಿ

ಹೀಗೆ ಕಷ್ಟಪಟ್ಟು ಪದವಿ ಮುಗಿಸಿದ್ದ ಸುಗಾ ಮುಂದೆ ಹೊಸೈ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನೂ ಪಡೆದಿದ್ದರು. ಜಪಾನ್‌ನ ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದಲ್ಲಿ ಹಂತ ಹಂತವಾಗಿ ಮೇಲೆ ಬಂದಿದ್ದ ಯೋಶಿಹಿದೆ ಸುಗಾ ಇದೀಗ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಜಪಾನ್‌ನ ಪ್ರಧಾನಿ ಆಗುವುದು ಕೂಡ ನಿಚ್ಚಳವಾಗಿದೆ.

English summary
Yoshihide Suga elected as the head of Japan’s ruling party. virtually guaranteeing him parliamentary election as the country’s next prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X