ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದೆ, ಭಾರತದಲ್ಲಿ ಅಲ್ಲ' : ಪ್ರಧಾನಿ ಓಲಿ

|
Google Oneindia Kannada News

ಕಠ್ಮಂಡು, ಜೂ.22: ''ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿದೆ,'' ಎಂದು ನೇಪಾಳದ ಉಸ್ತುವಾರಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸೋಮವಾರ ಹೇಳಿದ್ದಾರೆ. ''ಜಗತ್ತಿನಲ್ಲಿ ಯೋಗ ಪ್ರಾರಂಭವಾದಾಗ ಭಾರತವು ಹುಟ್ಟಿಕೊಂಡಿರಲಿಲ್ಲ,'' ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

Recommended Video

Yoga ಭಾರತದಲ್ಲಿ ಹುಟ್ಟಿಲ್ಲ , ಯೋಗ ನೇಪಾಲದ್ದು ಎಂದ ಪ್ರಧಾನಿ | K P Sharma Oli | Oneindia Kannada

ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ತಮ್ಮ ನಿವಾಸ ಬಾಲುವತಾರ್‌ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಓಲಿ ಈ ಹೇಳಿಕೆ ನೀಡಿದ್ದಾರೆ. "ಭಾರತೀಯ ತಜ್ಞರು ಯೋಗದ ವಿಚಾರದಲ್ಲಿನ ಸತ್ಯವನ್ನು ಮರೆಮಾಚುತ್ತಿದ್ದಾರೆ," ಎಂದು ಆರೋಪಿಸಿದ್ದಾರೆ.

ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ? ಹಿಂದೂ ದೇವರು ಶ್ರೀರಾಮನ ಮೂಲ ಭಾರತವೋ ನೇಪಾಳವೋ?

"ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತು, ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಭಾರತ ಅಸ್ತಿತ್ವದಲ್ಲಿ ಇರಲಿಲ್ಲ. ಬಳಿಕ ಬಣಗಳಾಗಿ ವಿಂಗಡಿಸಲಾಗಿದೆ," ಎಂದು ಉಸ್ತುವಾರಿ ಪ್ರಧಾನಿ ಓಲಿ ಹೇಳಿದರು.

Yoga Originated In Nepal, Not India says Prime Minister KP Sharma Oli

"ಈಗ ಇರುವ ಭಾರತವು ಹಿಂದೆ ಇರಲಿಲ್ಲ.ಆ ಸಮಯದಲ್ಲಿ ಭಾರತವನ್ನು ವಿವಿಧ ಬಣಗಳಾಗಿ ವಿಂಗಡಿಸಲಾಗಿದೆ. ಆ ಸಮಯದಲ್ಲಿ ಭಾರತವು ಖಂಡ ಅಥವಾ ಉಪಖಂಡದಂತೆಯೇ ಇತ್ತು," ಎಂದಿದ್ದಾರೆ.

2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ರಾರಂಭವಾದ ನಂತರ, 2015 ರಿಂದ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಯುಎನ್ ಭಾಷಣದಲ್ಲಿ ಜೂನ್ 21 ರ ದಿನಾಂಕವನ್ನು ಸೂಚಿಸಿದ್ದಾರೆ.

ಇನ್ನು ಭಾರತದ ಪ್ರದೇಶ, ಸಂಸ್ಕೃತಿ, ನಂಬಿಕೆಗಳನ್ನು ನೇಪಾಳದ್ದು ಎಂದು ನೇಪಾಳ ಪ್ರಧಾನಿ ಓಲಿ ಹೇಳಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಭಾರತದ ಭೂ ಪ್ರದೇಶವನ್ನು ತಮ್ಮ ನಕ್ಷೆಯಲ್ಲಿ ಗುರುತಿಸುವ ಮೂಲಕ ನೇಪಾಳ ವಿವಾದವನ್ನು ಹುಟ್ಟುಹಾಕಿತ್ತು.

ಆ ಬಳಿಕ ಭಗವಂತ ಶ್ರೀ ರಾಮನ ಬಗ್ಗೆ ಮಾತನಾಡಿದ ಓಲಿ, ''ಶ್ರೀ ರಾಮ ಭಾರತದಲ್ಲಿ ಹುಟ್ಟಿಲ್ಲ, ನೇಪಾಳದಲ್ಲಿ ಹುಟ್ಟಿದ್ದು. ರಾಮ ನೇಪಾಳಿ, '' ಎಂದು ಹೇಳಿಕೊಂಡಿದ್ದರು.

"ನಿಜವಾದ ಅಯೋಧ್ಯೆ ಬಿರ್ಗುಜ್‌ನ ಪಶ್ಚಿಮದಲ್ಲಿರುವ ಥೋರಿ ಎಂಬ ನಗರದಲ್ಲಿದೆ. ಭಗವಾನ್ ರಾಮನು ಭಾರತದ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎಂದು ಭಾರತ ಹೇಳಿಕೊಂಡಿದೆ. ವಾಸ್ತವದಲ್ಲಿ, ಅಯೋಧ್ಯೆ ಬಿರ್ಗುಂಜ್‌ನ ಪಶ್ಚಿಮಕ್ಕೆ ಇರುವ ಹಳ್ಳಿಯಾಗಿದೆ," ಎಂದು ಕಠ್ಮಂಡುವಿನ ಪ್ರಧಾನ ಮಂತ್ರಿಯ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಹಾಗೆಯೇ "ಭಾರತ ನಕಲಿ ಅಯೋಧ್ಯೆಯನ್ನು ಸೃಷ್ಟಿಸುವ ಮೂಲಕ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ" ಎಂದೂ ಆರೋಪಿಸಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Nepal caretaker Prime Minister KP Sharma Oli on Monday claimed that Yoga originated in Nepal, adding that India wasn't around when Yoga started in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X