ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ : ಬಾಬಾ ರಾಮ್ ದೇವ್ ತೀವ್ರ ವಿಚಾರಣೆ

By Mahesh
|
Google Oneindia Kannada News

ಲಂಡನ್, ಸೆ.21: ಯೋಗ ಗುರು ಬಾಬಾ ರಾಮದೇವ್ ಅವರನ್ನು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಬ್ರಿಟನ್ನಿನ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ.

ಬಿಸಿನೆಸ್ ವೀಸಾದ ಬದಲು ವಿಸಿಟರ್ಸ್ ವೀಸಾದ ಮೂಲಕ ಬ್ರಿಟನ್ ಗೆ ಬಾಬಾ ರಾಮದೇವ್ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವೀಸಾ ಬದಲಾವಣೆ ಏಕೆ? ಎಂದು ಪ್ರಶ್ನಿಸಿ ಸುಮಾರು 6 ಗಂಟೆಗಳ ಕಾಲ ರಾಮದೇವ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

ರಾಮದೇವ್ ತಮ್ಮ ಜತೆ ಕೊಂಡೊಯ್ಯುತ್ತಿರುವ ಔಷಧದ ಕುರಿತಾಗಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ರಾಮದೇವ್ ಅವರ ವಕ್ತಾರ ತೇಜರ್ ವಾಲಾ ಈ ವರದಿಗಳನ್ನು ಅಲ್ಲಗಳೆದಿದ್ದಾರೆ.

Yoga Guru Baba Ramdev detained for six hours at Heathrow

ರಾಮ್ ದೇವ್ ಅವರು ಆಯುರ್ವೇದ ಔಷಧಿಗಳ ದೊಡ್ಡ ಮಳಿಗೆಗಳನ್ನು ದೇಶದಾದ್ಯಂತ ಹೊಂದಿದ್ದು, ವಿದೇಶದಲ್ಲೂ ಇದಕ್ಕೆ ಭಾರಿ ಬೇಡಿಕೆ ಇದೆ. ರಾಮದೇವ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಗುರುವಾಗಿ ಜನಪ್ರಿಯತೆ ಗಳಿಸಿದ್ದಾರೆ. ವಿಮಾನದಲ್ಲಿ ಔಷಧ ತೆಗೆದುಕೊಂಡು ಹೋಗಲು ಬೇಕಾದ ಅನುಮತಿ ಪತ್ರ ಪಡೆದು ಪ್ರಯಾಣಿಸಿದ್ದಾರೆ. ಎಲ್ಲೋ ತಪ್ಪು ಮಾಹಿತಿಯಿಂದ ಬಾಬಾ ರಾಮದೇವ್ ಅವರ ವಿಚಾರಣೆ ನಡೆದಿದೆ ಎಂದು ತೇಜರ್ ವಾಲಾ ಹೇಳಿದ್ದಾರೆ.

ತೀವ್ರ ವಿಚಾರಣೆ ನಂತರ ಬಾಬಾ ರಾಮದೇವ್ ಅವರು ಯಾವುದೇ ಅನಧಿಕೃತ ವಸ್ತುಗಳನ್ನು ಸಾಗಿಸುತ್ತಿಲ್ಲ ಎಂಬುದು ಬ್ರಿಟಿಷ್ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ವಿಚಾರಣೆಗೆ ಒಳಪಟ್ಟಾಗ ರಾಮದೇವ್ ಬಳಿ ಕೇವಲ ಒಂದು ಸಣ್ಣ ಚೀಲ ಇತ್ತು ಅದರಲ್ಲಿ ಕೆಲ ಬಟ್ಟೆಗಳು ಹಾಗೂ ಔಷಧಗಳು ಇದ್ದವು. ಬಾಬಾ ಬಳಿ ಇದ್ದ ಪುಸ್ತಕದ ಮೇಲೆ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹಿಂದಿ ಹಾಗೂ ಸಂಸ್ಕೃತದಲ್ಲಿದ್ದ ಪುಸ್ತಕದ ಬಗ್ಗೆ ಅಧಿಕಾರಿಗಳು ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಚಾರಣೆ ಮುಗಿದ ಬಳಿಕ ರಾಮದೇವ್ ಅವರು ಲಂಡನ್ ನಗರ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಪತಂಜಲಿ ಯೋಗಪೀಠ ಆಯೋಜಿಸಿರುವ ಸ್ವಾಮಿ ವಿವೇಕಾನಂದ ಅವರ 120ನೇ ವಾರ್ಷಿಕದಿನಾಚರಣೆ ಸಮಾರಂಭದಲ್ಲಿ ಬಾಬಾ ರಾಮದೇವ್ ಪಾಲ್ಗೊಳ್ಳಲಿದ್ದಾರೆ. (ಪಿಟಿಐ)

English summary
London : Yoga guru Baba Ramdev was on Sept 20 detained and questioned at Heathrow airport for over six hours by British customs officials.Ramdev was being questioned by customs officials as he came here on a visitor visa instead of a business visa, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X