ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಬೆಂಬಲಿತ ಭಯೋತ್ಪಾದಕರಿಂದ ಡ್ರೋನ್ ದಾಳಿ: 100 ಸಾವು

|
Google Oneindia Kannada News

ಯೆಮನ್, ಜನವರಿ 20: ಇರಾನ್ ಬೆಂಬಲಿತ ಹೌದಿ ಬಂಡುಕೋರರಿಂದ ಯೆಮನ್‌ ಮೇಲೆ ಡ್ರೋನ್ ಭಯೋತ್ಪಾದಕ ದಾಳಿ ನಡೆದಿದ್ದು, 100 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಅಮೆರಿಕ ನಡುವಿನ ಸಮರ ಛಾಯೆಯ ಮುಂದುವರೆದ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಯೆಮನ್‌ನಲ್ಲಿ ಸೌದಿ ಅರೇಬಿಯಾ ಬೆಂಬಲಿತ ಸರ್ಕಾರವಿದ್ದು, ಇದಕ್ಕೆ ಅಮೆರಿಕದ ಬೆಂಬಲವೂ ಇದೆ.

ಅಮೆರಿಕ, ಇರಾನ್ ಯುದ್ಧ ಸನ್ನಿವೇಶ; ರಾಜ್ಯದ ರೈತರಿಗೆ ಸಂಕಷ್ಟಅಮೆರಿಕ, ಇರಾನ್ ಯುದ್ಧ ಸನ್ನಿವೇಶ; ರಾಜ್ಯದ ರೈತರಿಗೆ ಸಂಕಷ್ಟ

ಈ ಹಿನ್ನೆಲೆಯಲ್ಲಿ ಯೆಮನ್‌ನ ಕೇಂದ್ರವಾದ ಮಾರಿಬ್‌ ಮೇಲೆ ಇರಾನ್ ಬೆಂಬಲಿತ ಹೌದಿ ಸಂಘಟನೆಯ ಡ್ರೋನ್ ದಾಳಿ ನಡೆಸಿದೆ. ಇದರಿಂದ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ಸುದ್ದಿವಾಹಿನಿ ವರದಿ ಮಾಡಿದೆ.

Yemen Missile Drone Attack Toll Rises To More Than 100 Dead

ಯೆಮನ್ ರಾಜಧಾನಿ ಸನಾದಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ಮರೀಬ್ ನ ಸೇನಾ ಶಿಬಿರವೊಂದರಲ್ಲಿರುವ ಮಸೀದಿ ಮೇಲೆ ಶಿನಿವಾರ ಸಂಜೆಯ ಪ್ರಾರ್ಥನೆ ವೇಳೆ ಹೌದಿಗಳು ದಾಳಿ ನಡೆಸಿದ್ದಾರೆ.

ಯೆಮನ್‌ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರ್ಕಾರವು ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ 2014ರಿಂದ ಹೋರಾಡುತ್ತಿದೆ. 2014ರಲ್ಲಿಬಂಡುಕೋರರು ಉತ್ತರದ ರಾಜಧಾನಿ ಸನಾವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

English summary
More than 100 people were killed and dozens wounded in a missile and drone attack blamed on Huthi rebels in central Yemen, officials said Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X