ಯೆಮನ್ ನಲ್ಲಿ ಪಾದ್ರಿ ಟಾಮ್ ರಕ್ಷಣೆ: ಸುಷ್ಮಾ ಸ್ವರಾಜ್ ಟ್ವೀಟ್

Posted By:
Subscribe to Oneindia Kannada

ನವದೆಹಲಿ, ಸೆ. 12: ಯೆಮನ್‌ ನ ಏಡೆನ್‌ ನಲ್ಲಿ ಅಪಹರಣಕ್ಕೊಳಗಾಗಿದ್ದ ಕೇರಳ ಮೂಲದ ಕ್ಯಾಥೋಲಿಕ್‌ ಧರ್ಮಗುರು ಟಾಮ್ ಉಳುನ್ನಾಲಿಲ್ ಅವರನ್ನು ರಕ್ಷಿಸಲಾಗಿದೆ. ಈ ಕುರಿತಂತೆ ಮಂಗಳವಾರದಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

2016ರ ಮಾರ್ಚ್ ತಿಂಗಳಿನಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಪಾದ್ರಿ ಟಾಮ್ ಉಳುನ್ನಾಲಿಲ್ ಅವರ ಅಪಹರಣವಾಗಿತ್ತು.

Yemen : Abducted priest Tom Uzhunnalil rescued- Sushma Tweets

ಕ್ರೈಸ್ತ ಧರ್ಮ ಪ್ರಚಾರಕ ಸಮಿತಿಗೆ ಸೇರಿದ ಶಾಲೆ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿ ಪಾದ್ರಿ ಟಾಮ್‌ ಉಜುನಾಲಿಲ್‌(56) ಅವರನ್ನು ಅಪಹರಿಸಿದ್ದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮವೊಂದರ ಮೇಲೆ ನಡೆಸಿ 16 ಮಂದಿಯನ್ನು ಕೊಂದಿದ್ದರು.

ಯೆಮೆನ್ ನಲ್ಲಿ 300 ವಲಸಿಗರನ್ನು ಸಮುದ್ರಕ್ಕೆ ತಳ್ಳಿದ ಕಳ್ಳ ಸಾಗಣೆದಾರರು

ಟಾಮ್ ಅವರು 'ಸಲೆಸಿಯನ್ಸ್‌ ಆಫ್‌ ಡಾನ್‌ಬಾಸ್ಕೊ' ಸಂಸ್ಥೆಯ ಬೆಂಗಳೂರು ಪ್ರಾಂತ್ಯಕ್ಕೆ ಸೇರಿದ್ದು, ಕಳೆದ ಆರು ವರ್ಷಗಳಿಂದ ಯೆಮನ್‌ನಲ್ಲಿದ್ದರು.

ನಂತರ ದಿನಗಳಲ್ಲಿ ಕೇರಳದ ಕೊಟ್ಟಾಯಂ ಮೂಲದ ಪಾದ್ರಿ ಫಾದರ್ ಟಾಮ್ ಉಳುನ್ನಾಲಿಲ್ ಅವರು ವಿಡಿಯೋ ಸಂದೇಶದ ಮೂಲಕ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಅವರಿಗೆ ರಕ್ಷಣೆಗಾಗಿ ಪ್ರಾರ್ಥಿಸಿದ್ದರು.

ಈ ಬಗ್ಗೆ ನಿರಂತರವಾಗಿ ಮಾತುಕತೆ ನಡೆಸುತ್ತಾ ಬಂದ ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ಯೆಮನ್ ನ ಅಧಿಕಾರಿಗಳ ಮೂಲಕ ಅಪಹೃತ ಪಾದ್ರಿಯನ್ನು ಸಾವಿನ ದವಡೆಯಿಂದ ಪಾರು ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Catholic priest Father Tom Uzhunnalil, who was kidnapped in Yemen March 2016 has been released, External Affairs Minister Sushma Swaraj announced on Tuesday(Sept 12).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ