ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!

|
Google Oneindia Kannada News

ಬೀಜಿಂಗ್, ಮೇ 12: ಮಾರಣಾಂತಿಕ ಕೊರೊನಾ ವೈರಸ್ ಕಪಿಮುಷ್ಟಿಯಲ್ಲಿ ಮೊದಲು ಸಿಲುಕಿದ್ದು ಚೀನಾದ ವುಹಾನ್ ನಗರ.! ಸೀ ಫುಡ್ ಮಾರ್ಕೆಟ್ ನಿಂದ ಕೊರೊನಾ ವೈರಸ್ ಹಬ್ಬಿತ್ತೋ ಅಥವಾ ವೈರಾಲಜಿ ಲ್ಯಾಬ್ ನಿಂದ ಲೀಕ್ ಆಯ್ತೋ ಎಂಬುದು ನಿಖರವಾಗಿ ಗೊತ್ತಿಲ್ಲ. ಆದರೆ, ಕೊರೊನಾ ಆರ್ಭಟದಿಂದ ವುಹಾನ್ ಮಾತ್ರ ಹಿಂಡಿ ಹಿಪ್ಪೆ ಆಗಿತ್ತು.

Recommended Video

ದೇಶದ ಜನರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ದೊಡ್ಡ ಸಂದೇಶ ಕೊಟ್ಟ ಮೋದಿ | Narendra Modi

ಡೆಡ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಸತತ 76 ದಿನಗಳ ಕಠಿಣ ಲಾಕ್ ಡೌನ್ ಗೆ ವುಹಾನ್ ಒಳಗಾಯ್ತು. ಎರಡು ತಿಂಗಳ ಕಾಲ ಸ್ಮಶಾನ ಮೌನ ಆವರಿಸಿದ್ದ ವುಹಾನ್ ನಲ್ಲಿ ಏಪ್ರಿಲ್ 8 ರ ಬಳಿಕ ಲಾಕ್ ಡೌನ್ ಸಡಿಲಗೊಂಡಿತು. ಮನೆಯಿಂದ ಜನ ಹೊರ ಬರಲು ಆರಂಭಿಸಿದರು. ವುಹಾನ್ ನಲ್ಲಿ ಮತ್ತೆ ಆರ್ಥಿಕ ಚಟುವಟಿಕೆ ಶುರುವಾಯ್ತು. ಸಾರಿಗೆ ವ್ಯವಸ್ಥೆ, ಶಾಲೆಗಳು ಪುನರಾರಂಭಗೊಂಡವು.

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

ಅಲ್ಲಿಗೆ, ಕೊರೊನಾ ಕರಿನೆರಳಿನಿಂದ 'ವುಹಾನ್' ತಪ್ಪಿಸಿಕೊಂಡಿದೆ ಎಂದು ಭಾವಿಸುವಾಗಲೇ ಮತ್ತೊಂದು ಆಘಾತ ಎದುರಾಗಿದೆ. ವುಹಾನ್ ಗೆ ಕೊರೊನಾ ವೈರಸ್ 'ಎರಡನೇ ಅಲೆ' ಅಪ್ಪಳಿಸಿದೆ. ಲಾಕ್ ಡೌನ್ ಬಳಿಕ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.

ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

ವುಹಾನ್ ನಗರದಲ್ಲಿ ರೋಗ ಲಕ್ಷಣ ಇಲ್ಲದವರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡುಬಂದ ಮೇಲೆ ಚೀನಾ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇನಪ್ಪಾ ಅಂದ್ರೆ, ವುಹಾನ್ ನಗರದಲ್ಲಿ ವಾಸಿಸುವ ಪ್ರತಿಯೊಬ್ಬರನ್ನೂ ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ.

11 ಮಿಲಿಯನ್ ಮಂದಿಗೆ ಕೋವಿಡ್-19 ಪರೀಕ್ಷೆ

11 ಮಿಲಿಯನ್ ಮಂದಿಗೆ ಕೋವಿಡ್-19 ಪರೀಕ್ಷೆ

ವುಹಾನ್ ನಗರದಲ್ಲಿ ವಾಸಿಸುತ್ತಿರುವ ಸುಮಾರು 11 ಮಿಲಿಯನ್ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಂಪೂರ್ಣ ವ್ಯವಸ್ಥೆ ಮಾಡುವಂತೆ ಮತ್ತು 10 ದಿನಗಳ ಅವಧಿಯಲ್ಲಿ ತಮ್ಮ ಸುಪರ್ದಿಗೆ ಬರುವ ನಿವಾಸಿಗಳನ್ನು ನ್ಯೂಕ್ಲಿಕ್ ಆಸಿಡ್ ಟೆಸ್ಟ್ ಗೆ ಒಳಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಗೊತ್ತಿಲ್ಲ ಅಂತಿದ್ದಾರೆ ಅಧಿಕಾರಿಗಳು

ಗೊತ್ತಿಲ್ಲ ಅಂತಿದ್ದಾರೆ ಅಧಿಕಾರಿಗಳು

ವುಹಾನ್ ನಲ್ಲಿ ವಾಸಿಸುವ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಸುದ್ದಿಯಾಗುತ್ತಿದ್ದರೂ, ಅಲ್ಲಿನ ಅಧಿಕಾರಿಗಳು ಮಾತ್ರ ''ಅಂತಹ ಯಾವುದೇ ನೋಟೀಸ್ ಬಂದಿಲ್ಲ'' ಎನ್ನುತ್ತಿದ್ದಾರೆ. ಹಾಗೇ, ವುಹಾನ್ ನಿವಾಸಿಗಳ ಕೋವಿಡ್-19 ಪರೀಕ್ಷೆ ಯಾವಾಗಿನಿಂದ ಶುರುವಾಗುತ್ತದೆ ಎಂಬುದೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

ರೋಗದ ಲಕ್ಷಣಗಳು ಕಂಡುಬಂದಿಲ್ಲ

ರೋಗದ ಲಕ್ಷಣಗಳು ಕಂಡುಬಂದಿಲ್ಲ

ವುಹಾನ್ ನಲ್ಲಿನ ಒಂದೇ ರೆಸಿಡೆನ್ಷಿಯಲ್ ಕಾಂಪೌಂಡ್ ನಲ್ಲಿ ವಾಸಿಸುವ ಐವರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವುದು ಇತ್ತೀಚೆಗೆಷ್ಟೇ ವರದಿ ಆಗಿತ್ತು. ಹೊಸ ಸೋಂಕಿತರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಹಾಗ್ನೋಡಿದ್ರೆ, ವುಹಾನ್ ನಗರದಲ್ಲಿ ರೋಗ ಲಕ್ಷಣ ಹೊಂದಿಲ್ಲದ Asymptomatic ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ವುಹಾನ್ ನಲ್ಲಿ ವಾಸಿಸುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ವುಹಾನ್ ನಲ್ಲಿ ಸತ್ತವರ ಸಂಖ್ಯೆ ಎಷ್ಟು?

ವುಹಾನ್ ನಲ್ಲಿ ಸತ್ತವರ ಸಂಖ್ಯೆ ಎಷ್ಟು?

ಚೀನಾ ತೋರಿಸಿರುವ ಅಂಕಿ-ಅಂಶಗಳ ಪ್ರಕಾರ, ವುಹಾನ್ ನಲ್ಲಿ ಇಲ್ಲಿಯವರೆಗೂ ಕೋವಿಡ್-19 ನಿಂದ 3,869 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ, ಕೊರೊನಾ ವೈರಸ್ ನಿಂದ ವುಹಾನ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 'ಅಧಿಕೃತ' ಲೆಕ್ಕಕ್ಕಿಂತ ಜಾಸ್ತಿ ಇದೆ ಅಂತಾರೆ ಅಲ್ಲಿನ ನಿವಾಸಿಗಳು.

English summary
Wuhan to test Entire Population of 11 Million after new cases reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X