ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪಿಡುಗಿನಿಂದ ಪಾರಾದ ಚೀನಾದಲ್ಲಿ ಹೇಗಿದೆ ಪರಿಸ್ಥಿತಿ?

|
Google Oneindia Kannada News

ನವದೆಹಲಿ, ಏಪ್ರಿಲ್ 23: ಕೇರಳದಲ್ಲಿ ಮೊದಲ ಕೊರೊನಾವೈರಸ್ ಸೋಂಕಿತ ಪ್ರಕರಣ ವರದಿಯಾಗಿ ಒಂದು ವರ್ಷವೇ ಕಳೆದು ಹೋಗಿದೆ. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ಮಹಾಮಾರಿಗೆ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.

ಭಾರತದಲ್ಲಿ ಬೆಡ್ ಇಲ್ಲದೇ, ಆಕ್ಸಿಜನ್ ಇಲ್ಲದೇ, ಆಸ್ಪತ್ರೆ ಎದುರಿನಲ್ಲಿ ಸಾಲುಗಟ್ಟಿ ನಿಂತ ಆಂಬುಲೆನ್ಸ್‌ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವಂತಾ ದುಸ್ಥಿತಿಗೆ ಬಂದು ತಲುಪಿದ್ದೇವೆ. ಇನ್ನೊಂದು ಕಡೆಯಲ್ಲಿ ಪ್ರತಿನಿತ್ಯ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಅಂತ್ಯಕ್ರಿಯೆ ನೆರವೇರಿಸುವುದಕ್ಕೂ ಪರದಾಡುವಂಥ ಪರಿಸ್ಥಿತಿ ಎದುರಿಸುತ್ತಿದ್ದೇವೆ.

Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?

ಭಾರತದಲ್ಲಿ ಸೋಂಕಿನಿಂದ ಜನರು ವ್ಯಥೆ ಪಡುತ್ತಿದ್ದರೆ 2019ರಲ್ಲಿ ಮೊದಲ ಬಾರಿಗೆ ಕೊರೊನಾವೈರಸ್ ಕಾಣಿಸಿಕೊಂಡ 1.10 ಕೋಟಿ ಜನಸಂಖ್ಯೆಯ ಚೀನಾದ ವುಹಾನ್ ನಗರ ಮತ್ತು ಹುಬೈ ಪ್ರದೇಶದಲ್ಲಿ ಜನಜೀವ ಸಹಜ ಸ್ಥಿತಿಗೆ ಮರಳಿದೆ. ಚೀನಾದ ವುಹಾನ್ ನಗರಕ್ಕೆ ವಾಪಸ್ ಆಗಿರುವ ಕೇರಳದ ಡಾ. ಅನಿಲಾ ಪಿ ಅಜಯನ್ ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

Wuhan Returns to Normal While Most Countries Battle Waves of COVID-19 Pandemic

ಚೀನಾದ ವುಹಾನ್ ನಗರದಲ್ಲಿ ಜನರಿಗೆ ನಿರಾತಂಕ:

"ನಾವು ಈ ಮೊದಲು ಎದುರಿಸಿದ ಸಮಸ್ಯೆಗಳಲ್ಲೇ ಹೊರಟು ಹೋಗಿವೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಚೀನಾದ ವುಹಾನ್ ನಗರದ ರಸ್ತೆಗಳಲ್ಲಿ ಸಾರ್ವಜನಿಕರು ನಿರಾತಂಕವಾಗಿ ಓಡಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ವಾತಾವರಣ ಸೃಷ್ಟಿಯಾಗಿದೆ ಎಂದ ವಾರಾಂತ್ಯ ಮತ್ತು ಹಬ್ಬಗಳಲ್ಲಿ ಜನರು ಸೇರುವ ರೀತಿಯಲ್ಲಿ ಜನರು ಜಮಾಯಿಸುತ್ತಿದ್ದಾರೆ. ಇದರ ಮಧ್ಯೆಯೂ ಜನರು ಸರ್ಕಾರದ ನಿಯಮಗಳನ್ನು ಸರಿಯಾದ ರೀತಿ ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಾರೆ ಎಂದು ಡಾ. ಅನಿಲಾ ಪಿ ಅಜಯನ್ ಹೇಳಿದ್ದಾರೆ.

ಚೀನಾದ ಪ್ರಮುಖ ನಗರದಲ್ಲಿ ಎನ್-95 ಮತ್ತು ಸರ್ಜಿಕಲ್ ಮಾಸ್ಕ್‌ಗಳನ್ನು ಸಾರ್ವಜನಿಕರು ಧರಿಸುವುದ ಸಾಮಾನ್ಯವಾಗಿ ಕಂಡು ಬರುತ್ತದೆ. ಇದರ ಹೊರತಾಗಿ ಯಾವುದೇ ಬಟ್ಟೆ ಮಾಸ್ಕ್ ಗಳನ್ನು ಇಲ್ಲಿನ ಜನರು ಧರಿಸುವುದಿಲ್ಲ ಎಂದು ಹೇಳಿದ್ದಾರೆ.

ಚೀನಾ ನಗರಗಳ ಸ್ಥಿತಿ ಬಗ್ಗೆ ಅನಿಲಾ ವಿವರಣೆ:

ಬಾಸ್ಕೆಟ್ ಬಾಲ್ ಕೋರ್ಟ್, ಬ್ಯಾಡ್ಮಿಂಟನ್ ಹಾಲ್, ಜಿಮ್ನಾಯಿಸಮ್ಸ್ ಹಾಗೂ ಒಂದು ಕಾಲದಲ್ಲಿ ತುಂಬಿದ್ದ ಆಸ್ಪತ್ರೆಯ ಹಾಸಿಗೆಗಳು, ಪಿಪಿಇ ಕಿಟ್ ಧರಿಸಿ ಓಡಾಡುತ್ತಿದ್ದ ವೈದ್ಯಕೀಯ ಸಿಬ್ಬಂದಿ ಎಲ್ಲವೂ ಮೊದಲಿನ ಸ್ಥಿತಿಗೆ ಮರಳಿದೆ. ಮಾಸ್ಕ್ ಇಲ್ಲದೇ ಮೊದಲಿನಂತೆ ಆಟವಾಡುವಂತಾ ಸ್ಥಿತಿಗೆ ಇಲ್ಲಿನ ಜನರು ಬಂದಿದ್ದಾರೆ. ಆದರೆ ಬಹುತೇಕ ಸಾರ್ವಜನಿಕ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಗ್ರೀನ್ ಕೋಡ್ ಸ್ಕ್ಯಾನಿಂಗ್ ನಿಯಮವು ಮೊದಲಿನಂತೆ ಜಾರಿಯಲ್ಲಿದೆ.

"ಶಾಪಿಂಗ್ ಮಾಲ್‌ಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ರೆಸ್ಟೋರೆಂಟ್‌ಗಳು ಕಾರ್ಯನಿರತವಾಗಿವೆ, ಪಾದಚಾರಿಗಳು ತಮ್ಮ ಸಾಕುಪ್ರಾಣಿಗಳೊಂದಿಗೆ ರಸ್ತೆಗಳಲ್ಲಿ ಓಡಾಡುವುದು ಸಾಮಾನ್ಯವಾಗಿದೆ. ನಿವೃತ್ತರಾದ ಹಿರಿಯ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡುತ್ತಾ ಪಾರ್ಕ್ ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಕಾಲದಲ್ಲಿ ಜೀವನ ಹೇಗಿತ್ತು ಮತ್ತು ಸಾರ್ವಜನಿಕ ಸ್ಥಳಗಳು ಎಷ್ಟು ಖಾಲಿಯಾಗಿವೆ ಎಂಬುದನ್ನು ಈಗ ನೆನಪಿಸುತ್ತದೆ" ಎಂದಿದ್ದಾರೆ.

ಕಳೆದ ವರ್ಷದಿಂದ ವುಹಾನ್ ನಿರಂತರವಾಗಿ 'ಶೂನ್ಯ ಕೊವಿಡ್ ಪ್ರಕರಣಗಳನ್ನು' ದಾಖಲಿಸಿತು. ಅನಂತರವೇ ಚೀನಿಯರು ಹಬ್ಬಗಳು ಮತ್ತು ರಜಾದಿನಗಳನ್ನು ಆಚರಿಸಿದರು. "ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್ 14, 2021ರ ಅಂಕಿ-ಅಂಶಗಳ ಪ್ರಕಾರ ಹೋಟೆಲ್ ಬುಕಿಂಗ್‌ನಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಶೇ.23ರಷ್ಟು ಏರ್ ಬುಕ್ಕಿಂಗ್, ಶೇ.43ರಷ್ಟು ಹೋಟೆಲ್ ಬುಕ್ಕಿಂಗ್, ಶೇ.114ರಷ್ಟು ಬಾಡಿಗೆ ಕಾರು ಬುಕ್ಕಿಂಗ್, ಶೇ.126ರಷ್ಟು ಸ್ಕೈ ರಾಕೆಟ್ ಬುಕ್ಕಿಂಗ್ ನಲ್ಲಿ ಏರಿಕೆ ಕಂಡು ಬಂದಿದೆ. ಈ ಅಂಕಿ-ಅಂಶಗಳೇ ಚೀನಾದಲ್ಲಿ ಜನಜೀವನವು ಮೊದಲಿನಂತೆ ಸಹಜ ಸ್ಥಿತಿಗೆ ಬಂದಿದೆ ಎಂಬುದನ್ನು ಖಾತ್ರಿ ಪಡಿಸುತ್ತದೆ.

English summary
Wuhan Returns to Normal While Most Countries Battle Waves of COVID-19 Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X