ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಿಳೆ ಯಾವುದೇ ಬಟ್ಟೆ ಧರಿಸಿದರೂ ಅತ್ಯಾಚಾರಕ್ಕೆ ಆರೋಪಿಯೇ ಹೊಣೆ': ಇಮ್ರಾನ್ ಯು ಟರ್ನ್

|
Google Oneindia Kannada News

ಇಸ್ಲಾಮಾಬಾದ್, ಜು.28: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅತ್ಯಾಚಾರಕ್ಕೆ ಕಾರಣದ ಬಗ್ಗೆ ತಾನು ನೀಡಿದ್ದ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಅತ್ಯಾಚಾರಕ್ಕೆ ಮಹಿಳೆಯ ಬಟ್ಟೆಯೇ ಕಾರಣ ಎಂದು ಹೇಳಿದ್ದ ಖಾನ್‌ ಇದೀಗ "ನಾನು ಅಂತಹ ಮೂರ್ಖತನ ಹೇಳಿಕೆ ಎಂದಿಗೂ ನೀಡುವುದಿಲ್ಲ" ಎಂದು ಹೇಳುವ ಮೂಲಕ ಯು ಟರ್ನ್ ಹೊಡೆದಿದ್ದಾರೆ.

"ಯಾರಾದರೂ ಅತ್ಯಾಚಾರ ಎಸಗಿದರೆ, ಆ ವ್ಯಕ್ತಿ ಮಾತ್ರ ಜವಾಬ್ದಾರನಾಗಿರುತ್ತಾನೆ. ಆದ್ದರಿಂದ ಆ ಬಗ್ಗೆ ಸ್ಪಷ್ಟವಾಗಿರಲಿ. ಮಹಿಳೆ ಎಷ್ಟೇ ಪ್ರಚೋದನಕಾರಿಯಾಗಿದ್ದರೂ ಅಥವಾ ಮಹಿಳೆ ಯಾವುದೇ ಬಟ್ಟೆ ಧರಿಸಿದರೂ ಅತ್ಯಾಚಾರ ಎಸಗಿದ ವ್ಯಕ್ತಿಯು ಸಂಪೂರ್ಣ ಜವಾಬ್ದಾರನಾಗಿರುತ್ತಾನೆ. ಬಲಿಪಶು ಎಂದಿಗೂ ಜವಾಬ್ದಾರರಾಗಿರುವುದಿಲ್ಲ," ಎಂದು ಪಾಕಿಸ್ತಾನ ಪ್ರಧಾನಿ ಪಿಬಿಎಸ್ ನ್ಯೂಸ್ ಅವರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ 'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ

ಎಪ್ರಿಲ್‌ನಲ್ಲಿ ಪಾಕಿಸ್ತಾನ ಪ್ರಧಾನಿ ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ ಎಂದು ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಮ್ರಾನ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾವಿರಾರು ಜನರು ಈ ಹೇಳಿಕೆ ವಿರುದ್ದ ಸಹಿ ಅಭಿಯಾನ ನಡೆಸಿದ್ದರು.

Wouldnt Say Such A Stupid Thing: Imran Khan U turn On His Rape Remarks

ಹಲವಾರು ನೆಟ್ಟಿಗರು, ''ಅತ್ಯಾಚಾರಕ್ಕೆ ಮಹಿಳೆಯ ಬಟ್ಟೆ ಕಾರಣವೆಂದಾದರೆ, ಸಣ್ಣ ಪುಣಾಣಿಗಳ ಯಾವ ಬಟ್ಟೆ ಅತ್ಯಾಚಾರಕ್ಕೆ ಕಾರಣವಾಗು‌ತ್ತದೆ. ವೃದ್ದೆಯರ ಯಾವ ಬಟ್ಟೆ ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಓರ್ವ ಪ್ರಧಾನಿಯಾಗಿ ನಿಮ್ಮ ಹೇಳಿಕೆ ನಿಮ್ಮ ಸ್ಥಾನದ ಗೌರವಕ್ಕೆ ನೀವು ತಂದ ಧಕ್ಕೆ,'' ಎಂದು ಪ್ರಧಾನಿ ಇಮ್ರಾನ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಇಮ್ರಾನ್‌ ಹೇಳಿಕೆ ಇಷ್ಟಕ್ಕೆ ನಿಂತಿಲ್ಲ ಕಳೆದ ತಿಂಗಳು ನಡೆದ ಒಂದು ಕಾರ್ಯಕ್ರಮದಲ್ಲಿ ಮತ್ತೆ ಅದೇ ಹೇಳಿಕೆ ನೀಡಿದ್ದರು. "ಆಕ್ಸಿಯೋಸ್ ಆನ್ ಎಚ್‌ಬಿಒ" ಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ ಇಮ್ರಾನ್ ಖಾನ್, "ಒಬ್ಬ ಮಹಿಳೆ ಚೂರು ಬಟ್ಟೆಯನ್ನು ಧರಿಸಿದರೆ, ರೋಬೋಟ್‌ಗಳಲ್ಲದಿದ್ದರೆ ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಇದು ಕೇವಲ ಸಾಮಾನ್ಯ ಜ್ಞಾನವಾಗಿದೆ," ಎಂದು ತಾವು ಈ ಹಿಂದೆ ಮಾಡಿಕೊಂಡಿದ್ದ ಪ್ರತಿಪಾದನೆಯನ್ನು ಸಮರ್ಥಿಸಿಕೊಂಡಿದ್ದರು.

ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ: ಇಮ್ರಾನ್ ಖಾನ್ ವಿವಾದಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ: ಇಮ್ರಾನ್ ಖಾನ್ ವಿವಾದ

ಇಮ್ರಾನ್ ಖಾನ್ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಒಂದು ದೇಶದ ಪ್ರಧಾನಿ ಈ ರೀತಿಯ ಗೊಡ್ಡು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರು ಇಮ್ರಾನ್ ಖಾನ್‌ರನ್ನು ಟೀಕಿಸಿದ್ದರು.

ಈಗ ಯುಎಸ್ ಮೂಲದ ಮೀಡಿಯಾ ಹೌಸ್ ಪಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ, ಖಾನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ, "ನಾನು ಕೇವಲ ಪಾಕಿಸ್ತಾನದ ಸಮಾಜದ ಬಗ್ಗೆ ಮಾತನಾಡಿದ್ದೇನೆ. ನಮ್ಮ ದೇಶದಲ್ಲಿ ಲೈಂಗಿಕ ಅಪರಾಧಗಳಲ್ಲಿ ತೀವ್ರ ಏರಿಕೆ ಕಾಣುತ್ತಿದ್ದೇವೆ," ಎಂದು ಹೇಳಿದರು.

"ನಾನು ಈಗ ಮಾತನಾಡಬೇಕಾಗಿದೆ. ಯಾಕೆಂದರೆ ನಾನು ನೀಡಿದ ಎಲ್ಲಾ ಸಂದರ್ಶನಗಳ ಬಗ್ಗೆ ನನಗೆ ತಿಳಿದಿದೆ. ಅತ್ಯಾಚಾರಕ್ಕೊಳಗಾದ ವ್ಯಕ್ತಿಯು ಆ ಅತ್ಯಾಚಾರಕ್ಕೆ ಜವಾಬ್ದಾರನಾಗಿರುವಂತಹ ಮೂರ್ಖತನದ ಹೇಳಿಕೆಯನ್ನು ನಾನು ಎಂದಿಗೂ ಹೇಳುವುದಿಲ್ಲ. ಇಂತಹ ಘಟನೆಯಲ್ಲಿ ಯಾವಾಗಲೂ ಅತ್ಯಾಚಾರಿ ಹೊಣೆಗಾರನಾಗಿರುತ್ತಾನೆ," ಎಂದು ಯು ಟರ್ನ್ ಹೊಡೆದಿದ್ದಾರೆ.

ದೇಶದಲ್ಲಿ ಇಸ್ಲಾಂ ಧರ್ಮದ ಮಹತ್ವವು ಮಹಿಳೆಯರ ಬಗೆಗಿನ ನಿಲುವಿಗೆ ಅಡ್ಡಿಯಾಗಿದ್ದರೆ ಎಂದು ಕೇಳಿದ ಪ್ರಶ್ನೆಗೆ, "ಖಂಡಿತ ಇಲ್ಲ. ಇಸ್ಲಾಂ ಧರ್ಮವು ಮಹಿಳೆಯರಿಗೆ ಗೌರವವನ್ನು ಹಾಗೂ ಘನತೆಯನ್ನು ನೀಡುತ್ತದೆ," ಎಂದರು.

ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ಈ ಅಭಿಪ್ರಾಯಗಳು ಬಂದಿವೆ. ಪಾಕಿಸ್ತಾನದ ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಪ್ರತಿದಿನ ಕನಿಷ್ಠ 11 ಅತ್ಯಾಚಾರ ಘಟನೆಗಳು ವರದಿಯಾಗುತ್ತಿವೆ. ಕಳೆದ ಆರು ವರ್ಷಗಳಲ್ಲಿ 22,000 ಕ್ಕೂ ಹೆಚ್ಚು ಪ್ರಕರಣಗಳು ಪೊಲೀಸರಿಗೆ ವರದಿಯಾಗಿವೆ.

ವಿಶ್ವ ಆರ್ಥಿಕ ವೇದಿಕೆಯ ಗ್ಲೋಬಲ್ ಜೆಂಡರ್ ಗ್ಯಾಪ್ ರಿಪೋರ್ಟ್ 2021 ರ ಪ್ರಕಾರ ಪಾಕಿಸ್ತಾನವು ಕಳೆದ ವರ್ಷದಿಂದ ಎರಡು ಸ್ಥಾನಗಳನ್ನು ಕಳೆದುಕೊಂಡು ಈಗ ಲಿಂಗ ಸಮಾನತೆ ವಿಚಾರದಲ್ಲಿ ವಿಶ್ವದಾದ್ಯಂತದ ನಾಲ್ಕು ಕೆಟ್ಟ ದೇಶಗಳಲ್ಲಿ ಸ್ಥಾನ ಪಡೆದಿದೆ.

(ಒನ್‌ಇಂಡಿಯಾ ಸುದ್ದಿ)

English summary
Wouldn't Say Such A Stupid Thing, Anyone who commits rape, solely and solely that person is responsible: Pakistan Prime Minister Imran Khan U turn On His Rape Remarks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X