ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ 2ನೇ ದೊಡ್ಡ ವಜ್ರ ಕೋಟ್ಯಾಧಿಪತಿಯ ಪಾಲು, ಯಾರದು ಗೊತ್ತೆ?

|
Google Oneindia Kannada News

ಬೋಟ್ಸ್ ವಾನ್, ಜನವರಿ.16: ವಿಶ್ವದಲ್ಲೇ ಚಿನ್ನಾಭರಣಕ್ಕೆ ಇರುವಷ್ಟು ದೊಡ್ಡ ಮಾರುಕಟ್ಟೆ ಬೇರಾವುದಕ್ಕೂ ಇಲ್ಲ. ಕೋಟಿ ಕೋಟಿ ಮೌಲ್ಯವನ್ನು ಹೊಂದಿರುವ ಚಿನ್ನಾಭರಣದ ಮಾರುಕಟ್ಟೆಯಲ್ಲಿ ಇದೀಗ ಪತ್ತೆಯಾಗಿರುವ ವಿಶ್ವದ ಅತಿದೊಡ್ಡ ವಜ್ರದ್ದೇ ಸದ್ದು.
ದಕ್ಷಿಣ ಆಫ್ರಿಕಾದ ಬೋಟ್ಸ್ ವಾನ್ ದೇಶದಲ್ಲಿರುವ ಕರೋವೆ ಗಣಿ ಪ್ರದೇಶದಲ್ಲಿ 1,758 ಕ್ಯಾರೆಟ್ ಕಚ್ಚಾವಜ್ರ ಪತ್ತೆಯಾಗಿದೆ. ಕಳೆದ 2019ರ ಎಪ್ರಿಲ್ ನಲ್ಲಿ ಪತ್ತೆಯಾದ ವಜ್ರವು ಶತಮಾನದಲ್ಲೇ 2ನೇ ಅತಿದೊಡ್ಡ ಕಚ್ಚಾವಜ್ರ ಎನಿಸಿದೆ.

ಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆ

ಎಪ್ರಿಲ್ ನಲ್ಲಿ ಪತ್ತೆಯಾದ ಸೆವೆಲೋ ವಜ್ರವನ್ನು ಕಳೆದ ಜುಲೈವರೆಗೂ ಗೌಪ್ಯವಾಗಿ ಇರಿಸಲಾಗಿದ್ದು, ಈಗದೇ ಕಚ್ಚಾವಜ್ರವು 16 ಲಕ್ಷ 98 ಸಾವಿರದ 500 ಕೋಟಿ ರುಪಾಯಿ ಮೌಲ್ಯದ ಸಮೂಹ ಸಂಸ್ಥೆಗಳನ್ನು ಹೊಂದಿರುವ ಮುಖ್ಯಸ್ಥರೇ ಒಡೆಯನಾಗಿದ್ದಾರೆ. ಈ ಅಪರೂಪದ ವಜ್ರವನ್ನು ಖರೀದಿಸಿ ಸುದ್ದಿಯಾಗಿದ್ದು ಬೇರೆ ಯಾರೂ ಅಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಎಲ್ ವಿಎಂಎಚ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಒನ್ ಆಂಡ್ ಒನ್ಲಿ ಬರ್ನಾಡ್ ಅರ್ನಾಲ್ಟ್.

ಕರೋವೆ ಗಣಿಯಲ್ಲಿ ಪತ್ತೆಯಾದ 2ನೇ ಅತಿದೊಡ್ಡ ವಜ್ರ

ಕರೋವೆ ಗಣಿಯಲ್ಲಿ ಪತ್ತೆಯಾದ 2ನೇ ಅತಿದೊಡ್ಡ ವಜ್ರ

ಕೆನಡಾದ ಲುಕಾರಾ ಡೈಮೆಂಡ್ ಕಾರ್ಪೋರೇಷನ್ ಅಧೀನದಲ್ಲಿರುವ ಬೋಟ್ಸ್ ವಾನ್ ದೇಶದ ಕರೋವೆ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಯುತ್ತಿತ್ತು. ಈ ವೇಳೆ 2019ರ ಎಪ್ರಿಲ್ ತಿಂಗಳಿನಲ್ಲಿ ಬೇಸ್ ಬಾಲ್ ಗಾತ್ರದ ಕಚ್ಚಾವಜ್ರವೊಂದು ಪತ್ತೆಯಾಗಿತ್ತು. 1,758 ಕ್ಯಾರೆಟ್ ವಜ್ರ ಇದಾಗಿದ್ದು, ವಿಶ್ವದಲ್ಲೇ ಎರಡನೇ ಅತಿದೊಡ್ಡ ಕಚ್ಚಾವಜ್ರ ಎಂಬ ಖ್ಯಾತಿ ಪಡೆದುಕೊಂಡಿತ್ತು. ಈ ವಜ್ರಕ್ಕೆ ಸೆವೆಲೋ ಎಂಬ ಕರೆಯಲಾಗಿತ್ತು. ಸೆವೆಲೋ ಎಂದರೆ ಅಪರೂಪದ ವಸ್ತು ಎಂಬ ಅರ್ಥ ಬರುತ್ತದೆ.

ಕರೋವೆಯಲ್ಲಿ ಪತ್ತೆಯಾದ ಅತಿದೊಡ್ಡ ವಜ್ರಗಳು ಮೂರು!

ಕರೋವೆಯಲ್ಲಿ ಪತ್ತೆಯಾದ ಅತಿದೊಡ್ಡ ವಜ್ರಗಳು ಮೂರು!

ಇನ್ನು, ಕಳೆದ 2019ರ ಎಪ್ರಿಲ್ ನಲ್ಲಿ ಪತ್ತೆಯಾಗಿದ್ದ ಸೆವೆಲೋ ವಜ್ರವಷ್ಟೇ ಅಲ್ಲ. ಈ ಹಿಂದೆ ಕೂಡಾ ಇದೇ ಕರೋವೆ ಗಣಿ ಪ್ರದೇಶದಲ್ಲಿ ಅತಿದೊಡ್ಡ ಕಚ್ಚಾವಜ್ರಗಳು ಪತ್ತೆಯಾಗಿದ್ದವು. ಇದೇ ಗಣಿ ಪ್ರದೇಶದಲ್ಲಿ ಪತ್ತೆಯಾದ 813 ಕ್ಯಾರೆಟ್ ವಜ್ರವನ್ನು 2015ರಲ್ಲಿ ದುಬೈನ ನೆಮಿಸಿಸ್ ಇಂಟರ್ ನ್ಯಾಷನಲ್ ವಜ್ರದ ಕಂಪನಿಗೆ 44,100 ಕೋಟಿ ರುಪಾಯಿಗೆ ಮಾರಾಟ ಮಾಡಲಾಗಿತ್ತು.

LVMH ಸಮೂಹ ಸಂಸ್ಥೆ ಮುಖ್ಯಸ್ಥ ಕೋಟಿಗೆ ಅಧಿಪತಿ

LVMH ಸಮೂಹ ಸಂಸ್ಥೆ ಮುಖ್ಯಸ್ಥ ಕೋಟಿಗೆ ಅಧಿಪತಿ

ಒಂದೇ ಒಂದು ದಶಕದಲ್ಲಿ ವಿಶ್ವದ ಮಾರುಕಟ್ಟೆಯಲ್ಲೇ ತನ್ನದೇ ಟ್ರೆಂಡ್ ಸೃಷ್ಟಿಸಿರುವ ಸಮೂಹ ಸಂಸ್ಥೆಯೇ ಎಲ್ ವಿಎಂಎಚ್. ಲೆದರ್ ಹ್ಯಾಂಡ್ ಬ್ಯಾಗ್, ವಾಚ್, ಪರ್ಫ್ಯೂಮ್, ಚಿನ್ನಾಭರಣದ ಮಾರುಕಟ್ಟೆಯಲ್ಲಿ ಎಲ್ ವಿಎಂಎಚ್ ನ ಅಂಗಸಂಸ್ಥೆಗಳು ತನ್ನದೇ ಛಾಪು ಮೂಡಿಸುತ್ತಿವೆ. ಈ ಸಮೂಹ ಸಂಸ್ಥೆಯ ಚಕ್ರಾಧಿಪತಿ ಬರ್ನಾಡ್ ಅರ್ನಾಲ್ಟ್ ಬರೋಬ್ಬರಿ 16 ಲಕ್ಷ 98 ಸಾವಿರದ 500 ಕೋಟಿ ರುಪಾಯಿ ಮೌಲ್ಯದ ಸಮೂಹ ಸಂಸ್ಥೆಗಳನ್ನು ಹೊಂದಿರುವ ಒಡೆಯ ಎನ್ನಲಾಗಿದೆ.

LVMH ಸಮೂಹ ಸಂಸ್ಥೆ ಉತ್ಪನ್ನಗಳ ಬಗ್ಗೆ ಮಾಹಿತಿ

LVMH ಸಮೂಹ ಸಂಸ್ಥೆ ಉತ್ಪನ್ನಗಳ ಬಗ್ಗೆ ಮಾಹಿತಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ವಿಎಂಎಚ್ ಸಂಸ್ಥೆಯು ಸಾಕಷ್ಟು ಉತ್ಪನ್ನಗಳನ್ನು ಹೊಂದಿದೆ. ಈ ಪೈಕಿ ಲೆದರ್ ಹಾಗೂ ಫ್ಯಾಷನ್ ಸಂಬಂಧಿತ ಸರಕುಗಳು, ಪರ್ಫ್ಯೂಮ್ ಹಾಗೂ ಕಾಸ್ಮೆಟಿಕ್ಸ್, ಐಶಾರಾಮಿ ಮದ್ಯ, ವಾಚ್ ಹಾಗೂ ಚಿನ್ನಾಭರಣದ ಸಂಸ್ಥೆಗಳನ್ನು ಹೊಂದಿದೆ. ಈ ಪೈಕಿ ಚಿನ್ನಾಭರಣ ವಲಯದಲ್ಲಿ ಆದಾಯವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯು ಹೆಜ್ಜೆ ಹಾಕುತ್ತಿದೆ. ಹೀಗಾಗಿ ಟಿಫಾಯಿನ್ ಆಂಡ್ ಕಂಪನಿ ಎಂಬ ಸಂಸ್ಥೆಯ ಜೊತೆಗೆ ಲೂಯಿಸ್ ವಿಟಾನ್ ಸಂಸ್ಥೆಯು ಒಪ್ಪಂದ ಮಾಡಿಕೊಂಡಿತ್ತು.

ವಜ್ರ ಖರೀದಿಗೆ ವಾರ್ಷಿಕ ಆದಾಯದ 50ರಷ್ಟು ಹಣ ಖರ್ಚು

ವಜ್ರ ಖರೀದಿಗೆ ವಾರ್ಷಿಕ ಆದಾಯದ 50ರಷ್ಟು ಹಣ ಖರ್ಚು

ಎಲ್ ವಿಎಂಎಚ್ ಸಮೂಹದ ಲೂಯಿಸ್ ವಿಟಾನ್ ಸಂಸ್ಥೆಯ ವಾರ್ಷಿಕ ಆದಾಯದ ಶೇ.50ರಷ್ಟು ಹಣದಲ್ಲಿ ಬೇರೊಂದು ಕಂಪನಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಖರ್ಚು ಮಾಡಲಾಯಿತು. ಟಿಫಾಯಿನ್ ಆಂಡ್ ಕಂಪನಿ ಜೊತೆ ಒಪ್ಪಂದಕ್ಕಾಗಿ ವಿಟಾನ್ ಸಂಸ್ಥೆಯು 1 ಲಕ್ಷ 13 ಸಾವಿರದ 400 ಕೋಟಿ ರುಪಾಯಿ ಹಣವನ್ನು ನೀಡಲಾಗಿತ್ತು. ಉತ್ತಮ ಗುಣಮಟ್ಟದ ಚಿನ್ನಾಭರಣವನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಲೂಯಿಸ್ ವಿಟಾನ್ ಸಂಸ್ಥೆಯು ದಿಟ್ಟ ಹೆಜ್ಜೆ ಇಟ್ಟಿದೆ.

"ಗುಣಮಟ್ಟದ ಪ್ರಮಾಣವನ್ನು ಊಹಿಸಲೂ ಸಾಧ್ಯವಿಲ್ಲ"

ಅತ್ಯುತ್ತಮ ಗುಣಮಟ್ಟದ ಆಭರಣಗಳಿಗೆ ಕಂಪನಿ ಹೆಚ್ಚಿನ ಆದ್ಯತೆ ನೀಡುತ್ತದೆ. ಗ್ರಾಹಕರಷ್ಟೇ ಅಲ್ಲ ಇತರೆ ಕಂಪನಿಗಳು ಊಹಿಸಲೂ ಆಗದ ರೀತಿಯಲ್ಲಿ ಬ್ರ್ಯಾಂಡ್ ನ್ನು ನಿರ್ವಹಿಸಲಾಗುತ್ತದೆ. ಆ ಮೂಲಕ ಉದ್ಯಮಕ್ಕೆ ಹೊಸ ಆಯಾಮವನ್ನು ನೀಡಲಾಗುತ್ತದೆ ಎಂದು ಲೂಯಿಸ್ ವಿಟಾನ್ ಆಡಳಿತಾತ್ಮಕ ಮುಖ್ಯಸ್ಥ ಮೈಕಲ್ ಬುರ್ಕೆ ಹೇಳುತ್ತಿದ್ದಾರೆ.

ಮೊದಲ ಬಾರಿ ಕಚ್ಚಾವಜ್ರ ಖರೀದಿಸಿದ ವಿಟಾನ್ ಕಂಪನಿ

ಮೊದಲ ಬಾರಿ ಕಚ್ಚಾವಜ್ರ ಖರೀದಿಸಿದ ವಿಟಾನ್ ಕಂಪನಿ

ಲೂಯಿಸ್ ವಿಟಾನ್ ಕಂಪನಿಯು ಈ ಹಿಂದೆ ಸಾಕಷ್ಟು ಬಾರಿ ವಜ್ರದ ಹರಳುಗಳನ್ನು ಖರೀದಿ ಮಾಡಿದೆ. ಆದರೆ, ಈಗ ಖರೀದಿಸಿದ್ದು ವಿಶ್ವದ ಅತಿದೊಡ್ಡ ಕಚ್ಚಾವಜ್ರವಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಬಳಕೆಯಾಗದ ವಜ್ರವನ್ನು ನೇರವಾಗಿ ಕಂಪನಿಯು ಖರೀದಿಸಿದೆ. ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ಆಡಳಿತಾತ್ಮಕ ಮುಖ್ಯಸ್ಥ ಮೈಕಲ್ ಬುರ್ಕೆ ತಿಳಿಸಿದ್ದಾರೆ.

ವಿಶ್ವದಲ್ಲೇ ಅತಿದೊಡ್ಡ ವಜ್ರ ಇರುವುದು ಎಲ್ಲಿ ಗೊತ್ತೆ?

ವಿಶ್ವದಲ್ಲೇ ಅತಿದೊಡ್ಡ ವಜ್ರ ಇರುವುದು ಎಲ್ಲಿ ಗೊತ್ತೆ?

1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3,106 ಕ್ಯಾರೆಟ್‌ ಪರಿಶುದ್ಧತೆಯ ಕುಲಿನನ್ ವಜ್ರವು ಪತ್ತೆಯಾಗಿತ್ತು. ಈ ವಜ್ರದ ಕಲ್ಲನ್ನು ಕತ್ತರಿಸಿ ಚೆಂದದ ಹರಳುಗಳನ್ನಾಗಿ ಮಾಡಿ ಬ್ರಿಟಿಷ್‌ ರಾಜ-ರಾಣಿಯರ ಕಿರೀಟಗಳಲ್ಲಿ ಸೇರಿಸಿ ವಿನ್ಯಾಸಗೊಳಿಸಲಾಗಿತ್ತು. ಈ ಬಗ್ಗೆ ಕೇಪ್‌ಟೌನ್‌ ಡೈಮೆಂಡ್ ಮ್ಯೂಸಿಯಂನ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

English summary
Worlds Second Biggest Daimond Sold To 17,000 Billion Empire. Frech Luxury House Louis Vuitton's Bernard Arnault Is The Surprise Buyer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X