ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರ ದಾಟಲು ಹಾಂಕಾಂಗ್- ಚೀನಾ ಮಧ್ಯೆ ಜಗತ್ತಿನ ಅತಿ ದೊಡ್ಡ ಸೇತುವೆ

|
Google Oneindia Kannada News

ಹಾಂಕಾಂಗ್, ಅಕ್ಟೋಬರ್ 22: ಹಾಂಕಾಂಗ್ ಹಾಗೂ ಮಕಾವ್ ಅನ್ನು ಚೀನಾದ ನಗರ ಝುಹಾಯ್ ಜತೆಗೆ ಸಂಪರ್ಕ ಕಲ್ಪಿಸುವ $ 20 ಬಿಲಿಯನ್ ಮೌಲ್ಯದ ಸೇತುವೆ ಅಂತಿಮವಾಗಿ ಈ ವಾರ ತೆರೆಯಲಾಗುವುದು. ಸಮುದ್ರವನ್ನು ದಾಟುವ ಅತಿ ದೊಡ್ಡ ಸೇತುವೆ ಇದಾಗಿದ್ದು, ನಿರ್ಮಾಣಕ್ಕೆ ಒಂಬತ್ತು ವರ್ಷ ಸಮಯ ಹಿಡಿಸಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಂಗಳವಾರದಂದು ಝುಹಾಯ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಹಾಂಕಾಂಗ್ ಹಾಗೂ ಮಕಾವ್ ನ ಉನ್ನತಾಧಿಕಾರಿಗಳು ಸಹ ಪಾಲ್ಗೊಳ್ಳಲಿದ್ದಾರೆ. ಬುಧವಾರದಿಂದ ಈ ಸೇತುವೆಯು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

55 ಕಿ.ಮೀ.ನ ಈ ಸೇತುವೆಯು 2016ರಲ್ಲೇ ಉದ್ಘಾಟನೆ ಆಗಬೇಕಿತ್ತು. ಆದರೆ ಪದೇಪದೇ ತಡವಾಗಿ, ಈ ವರ್ಷ ಸಂಚಾರಕ್ಕೆ ಮುಕ್ತವಾಗುತ್ತಿದೆ. ಚೀನಾದ ಪ್ರಮುಖ ಯೋಜನೆಯಾದ ಇದರಲ್ಲಿ ದಕ್ಷಿಣ ಚೀನಾದ 11 ನಗರಗಳ 56,500 ಚದರ ಕಿಲೋಮೀಟರ್ ವ್ಯಾಪ್ತಿ ಒಳಗೊಳ್ಳುತ್ತದೆ. ಹಾಂಕಾಂಗ್ ಹಾಗೂ ಮಕಾವ್ ನಗರ ಕೂಡ ಇದರಲ್ಲಿ ಸೇರಿದ್ದು, ಅಲ್ಲಿ 6.8 ಕೋಟಿ ಜನರು ವಾಸವಿದ್ದಾರೆ.

Worlds longest sea crossing bridge between Hong Kong and China to be opened

ಈ ಸೇತುವೆ ನಿರ್ಮಾಣ ಮಾಡಿರುವುದರಿಂದ ಈ ನಗರದ ಮಧ್ಯೆ 3 ಗಂಟೆ ತಗುಲುತ್ತಿದ್ದ ಪ್ರಯಾಣ ಕೇವಲ 30 ನಿಮಿಷಕ್ಕೆ ಇಳಿಯಲಿದೆ. ಈ ವಲಯದಲ್ಲಿ ಸಂಚಾರ ಬಹಳ ಸಲೀಸಾಗಲಿದೆ. ಚಾಲನೆ ಸಮಯ ಇರಲಿ, ಹಾಂಕಾಂಗ್ ನ ಖಾಸಗಿ ಕಾರು ಮಾಲೀಕರು ವಿಶೇಷ ಅನುಮತಿ ಪಡೆಯದೆ ಸೇತುವೆ ದಾಟಲು ಸಾಧ್ಯವಿಲ್ಲ.

ದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತ ನೆನಪುಗಳುದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತ ನೆನಪುಗಳು

ಬಹುತೇಕ ಚಾಲಕರು ಹಾಂಕಾಂಗ್ ಬಂದರಿನಲ್ಲೇ ಕಾರು ನಿಲ್ಲಿಸಿ, ಷಟಲ್ ಅಥವಾ ವಿಶೇಷ ಬಾಡಿಗೆ ಕಾರು ಮೂಲಕ ತೆರಳಬೇಕು. ಅದಕ್ಕೂ ಮುನ್ನ ವಲಸೆ ನಿಯಮಗಳನ್ನು ಪೂರ್ತಿಗೊಳಿಸಬೇಕು. ಯಾವ ಸಮಯದಲ್ಲಿ ಪ್ರಯಾಣ ಎಂಬುದರ ಆಧಾರಪಲ್ಲಿ ಒಂದು ಕಡೆಯ ಪ್ರಯಾಣಕ್ಕೆ ಷಟಲ್ ಬಸ್ ಗಳಿಗೆ $ 8ರಿಂದ $ 10 ಆಗುತ್ತದೆ.

ಭಾರತಕ್ಕೆ ಚೀನಾ ಸೆಡ್ಡು: ವಿಮಾನ ನಿಲ್ದಾಣ ವಾಯುನೆಲೆಯಾಗಿ ಪರಿವರ್ತನೆಭಾರತಕ್ಕೆ ಚೀನಾ ಸೆಡ್ಡು: ವಿಮಾನ ನಿಲ್ದಾಣ ವಾಯುನೆಲೆಯಾಗಿ ಪರಿವರ್ತನೆ

ಹಾಂಕಾಂಗ್ ನಿಂದ ಮಕಾವ್ ಅಥವಾ ಝುಹಾಯ್ ನಗರಕ್ಕೆ ಸಂಪರ್ಕ ಕಲ್ಪಿಸಲು ಸೂಕ್ತ ಸಂಚಾರ ವ್ಯವಸ್ಥೆ ಇಲ್ಲ ಎಂಬ ಬಗ್ಗೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಚೀನಾದಿಂದ ಬರುವ ಪ್ರವಾಸಿಗರ ಸಂಖ್ಯೆ ಕೂಡ ಬಹಳ ಹೆಚ್ಚು ಎಂಬ ಆತಂಕ ಕೂಡ ವ್ಯಕ್ತಪಡಿಸಿದ್ದರು. ಅಂದಹಾಗೆ 2016ರಲ್ಲಿ ಹಾಂಕಾಂಗ್ ಗೆ 5.67 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದೇ ಅವಧಿಯಲ್ಲಿ ಯುನೈಟೆಡ್ ಕಿಂಗ್ ಡಮ್ ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 3.76 ಕೋಟಿ.

English summary
A $20 billion bridge connecting Hong Kong and Macau to the Chinese city of Zhuhai is set to finally open this week, marking the completion of the longest sea-crossing bridge ever built, nine years after construction began.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X