ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ತಾಪಮಾನದ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ: 2100ರಲ್ಲಿ ಏನಾಗಲಿದೆ?

|
Google Oneindia Kannada News

ನ್ಯೂಯಾರ್ಕ್, ನವೆಂಬರ್ 27:ವಿಶ್ವಸಂಸ್ಥೆಯ ನಿಯಮಾವಳಿಗಳಂತೆ ಹವಾಮಾನ ವೈಪರಿತ್ಯವನ್ನು ನಿಯಂತ್ರಿಸಿದ್ದರೆ 2100ರ ವೇಳೆಗೆ ಜಾಗತಿಕ ಸರಾಸರಿ ತಾಪಮಾನವು 3.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.

ಇಂತಹದೊಂದು ಆಘಾತಕಾರಿ ಮಾಹಿತಿಯನ್ನು ವಿಶ್ವಸಂಸ್ಥೆ ವರದಿ ಎಚ್ಚರಿಸಿದೆ. ಹವಾಮಾನದ ವೈಪರಿತ್ಯಕ್ಕೆ ಸಂಬಂಧಿಸಿ ಪ್ಯಾರಿಸ್ ಒಪ್ಪಂದ ಅನುಷ್ಠಾನ ಮಾಡುವಲ್ಲಿ ಮುಂದುವರೆದ ರಾಷ್ಟ್ರಗಳು ವಿಫಲವಾದ ಬೆನ್ನಲ್ಲೇ ಈ ವರದಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆ ವರದಿ ಪ್ರಕಾರ ಕಳೆದೊಂದು ದಶಕದಲ್ಲಿ ಪ್ರತಿವರ್ಷ ಕಾರ್ಬನ್‌ ಹೊರಸೂಸುವಿಕೆಯಲ್ಲಿ ಶೇ.1.ರಷ್ಟು ಏರಿಕೆಯಾಗಿದೆ. ಪರಿಣಾಮವಾಗಿ 55.3 ಗಿಗಾ ಟನ್‌ ಇಂಗಾಲವು ಶೇಖರಣೆಯಾಗಿದೆ.

temperature
ಇದೇ ಪ್ರಮಾಣದಲ್ಲಿ ಇಂಗಾಲವನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ 2100ರ ವೇಳೆಗೆ ಜಾಗತಿಕ ತಾಪಮಾನದಲ್ಲಿ 3.2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಲಿದೆ. ಇದರಿಂದ ವಿಶ್ವದ ಭೌಗೋಳಿಕ ನಕ್ಷೆಯೇ ಬದಲಾಗುವ ಅಪಾಯವಿದೆ ಎಂದು ವಿಶ್ವಸಂಸ್ಥೆ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಮತ್ತೆ ವಾಯುಭಾರ ಕುಸಿತ: 2 ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆಮತ್ತೆ ವಾಯುಭಾರ ಕುಸಿತ: 2 ದಿನ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಹಾಗೆಯೇ ಮುಂದಿನ 10 ವರ್ಷಗಳಲ್ಲಿ ಪ್ರತಿ ವರ್ಷ ಇಂಗಾಲ ಹೊರಸೂಸುವಿಕೆಯಲ್ಲಿ ಶೇ.7.5ರಷ್ಟು ಇಳಿಕೆಯಾಗದಿದ್ದರೆ ಇದೇ ಅವಧಿಯಲ್ಲಿ 1.5ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ನಿಯಂತ್ರಣದ ಗುರಿಯನ್ನು ಕೂಡ ಸಾಧಿಸಲು ಆಗುವುದಿಲ್ಲ.

ಹೀಗೆ ಮುಂದುವರೆದರೆ 2030ರ ಬಳಿಕ ಪರಿಸ್ಥಿತಿಯು ನಮ್ಮ ನಿಯಂತ್ರಣ ಮೀರಿ ಹೋಗಲಿದೆ. ಈಗಾಗಲೇ 2015ರ ಪ್ಯಾರಿಸ್ ಒಪ್ಪಂದದಲ್ಲಿ ಹೇಳಿರುವ ಅಂಶಗಳನ್ನು ಪಾಲಿಸಲು 2020ರ ಗಡುವು ನಿಗದಿಪಡಿಸಲಾಗಿತ್ತು. ಆದರೆ ಅದನ್ನು ಪಾಲಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆ ಇರಿಸಿಲ್ಲ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಮುಂದುವರೆದ ರಾಷ್ಟ್ರಗಳಿಗೆ ಎಚ್ಚರಿಕೆ ಮಾತು: ಪ್ಯಾರಿಸ್ ಒಪ್ಪಂದ ಅನುಷ್ಠಾನ ಹಾಗೂ ತಾಪಮಾನ ಏರಿಕೆ ವಿಚಾರದಲ್ಲಿ ಮುಂದುವರೆದ ರಾಷ್ಟ್ರಗಳು ಪರಿಣಾಮಕಾರಿ ಹೆಜ್ಜೆ ಇರಿಸುತ್ತಿಲ್ಲ.

ದೇಶದಲ್ಲಿರುವ ಉತ್ಪಾದನಾ ವಲಯದ ಉದ್ದಿಮೆಗಳನ್ನು ಮುಂದುವರೆಯುತ್ತಿರುವ ರಾಷ್ಟ್ರಗಳಿಗೆ ಕಳುಹಿಸುವುದರಿಂದ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಿದಂತಾಗುವುದಿಲ್ಲ ಇದರಿಂದ ಭಾರತ, ಚೀನಾ, ಬ್ರೆಜಿಲ್ ದಕ್ಷಿಣ ಆಫ್ರಿಕಾದಂತಹ ದೇಶಗಳ ಮೇಲೆ ಪರಿಣಾಮ ಬೀರಲಿದೆ.

ವಿಶ್ವದ ಇಂಗಾಲ ಹೊರಸೂಸುವಿಕೆಯಲ್ಲಿ ಜಿ-20 ರಾಷ್ಟ್ರಗಳ ಇಂಗಾಲ ಹೊರಸೂಸುವಿಕೆ ಶೇ.78ರಷ್ಟಿದೆ ಹೀಗಾಗಿ ಬೃಹತ್ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.

ಇಲ್ಲವಾದಲ್ಲಿ ಪರಿಸ್ಥಿತಿ ಎಲ್ಲೆ ಮೀರಿ ಹೋಗಲಿದೆ. ಉತ್ತಮ ಭವಿಷ್ಯಕ್ಕಾಗಿ ತಾಪಮಾನ ಏರಿಕೆ ಬಗ್ಗೆ ತುರ್ತು ಗಮನವಹಿಸಲೇಬೇಕೆಂದು ವರದಿಯಲ್ಲಿ ಹೇಳಲಾಗಿದೆ.

English summary
World Temperature will increases 3.2 degree celsius by 2100.UNO warned this to the all member countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X