ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಹಿರಿಯಜ್ಜನೆಂಬ ದಾಖಲೆ ಹೊಂದಿದ್ದ ಜಪಾನ್ ನ ನೊನಕ ಇನ್ನಿಲ್ಲ

|
Google Oneindia Kannada News

113 ವರ್ಷ ವಯಸ್ಸಿನ ಜಪಾನ್ ನ ಪುರುಷ ಮಸಜೋ ನೊನಕ ಭಾನುವಾರ ಸಾವನ್ನಪ್ಪಿದ್ದಾರೆ. 2018ರ ಏಪ್ರಿಲ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯಿಂದ ಅವರನ್ನು ಗುರುತಿಸಿ, ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಪುರುಷ ಎಂದು ಘೋಷಿಸಲಾಗಿತ್ತು. ಅಂದಹಾಗೆ ನೊನಕ ಅವರು ಜಪಾನ್ ನ ಉತ್ತರ ದ್ವೀಪ ಹೊಕ್ಕಾಯ್ಡೊನವರು. ಜುಲೈ 25, 1905ರಲ್ಲಿ ಜನಿಸಿದವರು.

ನೊನಕ ಅವರು ಉಸಿರಾಡುತ್ತಿಲ್ಲ ಎಂಬ ಸಂಗತಿಯನ್ನು ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರು ಗಮನಿಸಿದ್ದಾರೆ. ಮೃತಪಟ್ಟಿದ್ದಾರೆ ಎಂಬುದನ್ನು ಆ ನಂತರ ವೈದ್ಯರು ಖಚಿತಪಡಿಸಿದ್ದಾರೆ. ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ಪುರುಷ ಎಂದು ಗಿನ್ನಿಸ್ ನಿಂದ 2018ನೇ ಇಸವಿ ಏಪ್ರಿಲ್ ನಲ್ಲಿ ಹೆಸರು ದಾಖಲಾಯಿತು.

ಕೆಟ್ಟ ಹೇರ್ ಕಟ್ ನಾಂದಿಯಾಯಿತು ಗಿನ್ನೆಸ್ ವಿಶ್ವ ದಾಖಲೆಗೆಕೆಟ್ಟ ಹೇರ್ ಕಟ್ ನಾಂದಿಯಾಯಿತು ಗಿನ್ನೆಸ್ ವಿಶ್ವ ದಾಖಲೆಗೆ

ಆಗ ನೊನಕ ಅವರಿಗೆ 112 ವರ್ಷ 259 ದಿನ ವಯಸ್ಸು. ಪತ್ರಿಕೆಗಳನ್ನು ಓದುತ್ತಾ, ಸಿಹಿ-ಕೇಕ್ ಗಳನ್ನು ತಿನ್ನುತ್ತಾ, ಟೀವಿಯಲ್ಲಿ ಸುಮೋ ಕುಸ್ತಿ ನೋಡುತ್ತಾ ತಮ್ಮ ನಿವೃತ್ತಿ ಜೀವನವನ್ನು ನೊನಕ ಕಳೆದಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಬರೆಯಲಾಗಿದೆ. ಬಿಸಿ ನೀರಿನ ಹಬೆ ತೆಗೆದುಕೊಳ್ಳುವುದು, ಸಿಹಿ ತಿನ್ನುವುದರಿಂದ ಹೆಚ್ಚು ಕಾಲ ಬಾಳಬಹುದು ಎಂಬುದು ನೊನಕ ನಂಬಿಕೆ ಆಗಿತ್ತಂತೆ. ಆದರೆ ಅವರ ಮಗಳ ಪ್ರಕಾರ, ಒತ್ತಡರಹಿತ ಜೀವನದ ಕಾರಣಕ್ಕೆ ದೀರ್ಘ ಕಾಲ ಬದುಕಿದ್ದರು.

Worlds oldest man Masaza Nonaka dies in Japan at age 113

ಇದುವರೆಗೆ ಸುದೀರ್ಘ ಕಾಲ ಬದುಕಿದ ಪುರುಷ ಎಂಬ ದಾಖಲೆ ಇರುವುದು ಜಪಾನಿನ ಜಿರೋಮನ್ ಕಿಮುರಾ ಹೆಸರಿನಲ್ಲಿ 2013ರ ಜೂನ್ ನಲ್ಲಿ ತೀರಿಕೊಂಡಾಗ ಅವರ ವಯಸ್ಸು 116 ವರ್ಷ 54 ದಿನ ಆಗಿತ್ತು.

English summary
A 113-year-old Japanese man, Masazo Nonaka, recognized in April 2018 by Guinness World Records as the world's oldest male, died on Sunday, according to Japanese public service broadcaster NHK. Nonaka, a resident of Japan's northern island of Hokkaido, was born on July 25, 1905.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X