ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದ ಉಷ್ಣತೆ ಹೆಚ್ಚಳ 3.6 ಬಿಲಿಯನ್ ಹಿರೋಶಿಮಾ ಬಾಂಬ್ ದಾಳಿಗೆ ಸಮ

|
Google Oneindia Kannada News

ಬೀಜಿಂಗ್, ಜನವರಿ 16: ಜಾಗತಿಕ ತಾಪಮಾನದ ಇತ್ತೀಚಿನ ಬೆಳವಣಿಗೆಗಳ ಕುರಿತು ವಿಜ್ಞಾನಿಗಳು ಮತ್ತು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ. ಮಾನವ ಕುಲದ ಇತಿಹಾಸದಲ್ಲಿಯೇ 2019ರಲ್ಲಿ ದಾಖಲಾದ ಸಮುದ್ರ ನೀರಿನ ಉಷ್ಣಾಂಶ ಅತ್ಯಧಿಕ. ಅದರಲ್ಲಿಯೂ ಸಮುದ್ರ ತೀರ ಮತ್ತು ಅದರ ಆಳದ 2,000 ಮೀಟರ್ ವರೆಗೂ ಅತಿ ಬಿಸಿಯಾಗಿದೆ ಎಂದು 11 ಸಂಸ್ಥೆಗಳ 14 ವಿಜ್ಞಾನಿಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ತಂಡ ತಿಳಿಸಿದೆ.

ಜಾಗತಿಕ ತಾಪಮಾನವು ಏರಿಕೆಯಾಗುತ್ತಿರುವುದು ಮಾತ್ರವಲ್ಲ, ಆ ಏರಿಕೆಯ ವೇಗವೂ ಹೆಚ್ಚುತ್ತಿದೆ ಎಂಬ ಎಚ್ಚರಿಕೆಯನ್ನು ಈ ತಂಡ ನೀಡಿದೆ.

ಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶಸಿಡ್ನಿ ತಾಪಮಾನ ವಿಶ್ವದಲ್ಲೇ ಅಧಿಕ: ದಾಖಲೆ ಪ್ರಮಾಣದ ಉಷ್ಣಾಂಶ

ಕಳೆದ 10 ವರ್ಷಗಳಲ್ಲಿ ಜಾಗತಿಕ ಸಮುದ್ರದ ತಾಪಮಾನ ಅತಿ ಹೆಚ್ಚಾಗಿದೆ. ವಿಪರೀತ ಮಟ್ಟಕ್ಕೆ ಹೋಗಿರುವ ತಾಪಮಾನ ಬದಲಾವಣೆಯಿಂದ ಸಮುದ್ರ ಮಟ್ಟ ಹೆಚ್ಚುತ್ತಿದ್ದು, ಪ್ರಾಣಿಗಳಿಗೆ ಮಾರಕವಾಗಿದೆ ಎಂದು ವರದಿ ತಿಳಿಸಿದೆ.

Worlds Oceans Heat Equals To 3.6 Billion Hiroshima Bombings

1981-2010ರ ಅವಧಿಯ ಸರಾಸರಿ ಉಷ್ಣತೆಗೆ ಹೋಲಿಸಿದರೆ 2019ರಲ್ಲಿ ಸಮುದ್ರದ ತಾಪಮಾನ ಶೇ 0.075 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ. ಈ ಉಷ್ಣತೆಯನ್ನು ತಲುಪಲು ಸಮುದ್ರವು 228 ಸೆಕ್ಸಟಿಲಿಯನ್ ಜೌಲ್‌ನಷ್ಟು ಬಿಸಿಯನ್ನು ಹೀರಿಕೊಂಡಿರುತ್ತದೆ. ಕಳೆದ 25 ವರ್ಷಗಳಲ್ಲಿ ಹೆಚ್ಚಳವಾದ ತಾಪಮಾನವು ಹಿರೋಶಿಮಾ ಮೇಲೆ ನಡೆದ ಅಣುಬಾಂಬ್ ದಾಳಿಯ 3.6 ಬಿಲಿಯನ್ ಸ್ಫೋಟದ ಬಿಸಿಗೆ ಸಮನಾಗಿದೆ.

ಅತಿ ಹೆಚ್ಚು ಚಳಿ ಇರುವ ದೇಶದ 10 ಪ್ರಮುಖ ನಗರಗಳುಅತಿ ಹೆಚ್ಚು ಚಳಿ ಇರುವ ದೇಶದ 10 ಪ್ರಮುಖ ನಗರಗಳು

ಸಮುದ್ರದ ನೀರು ಬಿಸಿಯಾಗುತ್ತಿರುವುದು ಅಪಾಯಕಾರಿ ಮತ್ತು ಎಚ್ಚರಿಕೆಯ ಗಂಟೆ. 1970ರಿಂದ ಶೇ 90ಕ್ಕೂ ಹೆಚ್ಚು ಜಾಗತಿಕ ತಾಪಮಾನದ ಬಿಸಿ ಸಮುದ್ರಕ್ಕೆ ತಲುಪಿದೆ. ಇದು ವಾತಾವರಣ ಮತ್ತು ಮನುಷ್ಯರು ವಾಸಿಸುವ ಭೂಮಿಯ ಮೇಲಿನ ಉಷ್ಣದ ಶೇ 4ಕ್ಕಿಂತ ಕಡಿಮೆಯಷ್ಟೇ ಎಂದು ವರದಿ ತಿಳಿಸಿದೆ.

English summary
Researchers said world's oceans were the warmest in 2019 than any other time. In the past 25 years the heat is equals to 3.6 billion Hiroshima atom-bomb explosions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X