ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿರಿಮಿರಿ ಮಿಂಚು, ಝಗಮಗಿಸುವ ಈ ಗಿಡಕ್ಕೆ 107 ಕೋಟಿ ರೂಪಾಯಿ!

|
Google Oneindia Kannada News

ಸ್ಪೇನ್, ಡಿಸೆಂಬರ್.03: ಒಂದು ಗಿಡಕ್ಕೆ 107 ಕೋಟಿ ರೂಪಾಯಿ ಎಂದರೆ ಎಂಥವರಿಗೂ ಅಚ್ಚರಿ ಆಗುತ್ತದೆ. ಆದರೆ, ಇದು ಸಾಮಾನ್ಯವಾದ ಗಿಡವಲ್ಲ. ಬದಲಿಗೆ ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ ಮಸ್ ಗಾಗಿ ತಯಾರಾಗಿರುವ ಸ್ಪೆಷಲ್ ಟ್ರೀ ಇದು.

ಹೌದು, ಹೊಸ ವರ್ಷಾಚರಣೆಗೂ ವಾರ ಮೊದಲೇ ಆಚರಿಸುವ ಕ್ರೈಸ್ತರ ಪವಿತ್ರಹಬ್ಬ ಕ್ರಿಸ್ ಮಸ್ ಇನ್ನೇನು ಹತ್ತಿರ ಬಂದಿದೆ. ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಾಲಿನಲ್ಲಿ ಕ್ರಿಸ್ ಮೆಸ್ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದೇ ಈ ಕ್ರಿಸ್ ಮಸ್ ಟ್ರೀ.

ಐಟಿಸಿಯಿಂದ ಕೇಜಿಗೆ 4.5 ಲಕ್ಷದ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಐಟಿಸಿಯಿಂದ ಕೇಜಿಗೆ 4.5 ಲಕ್ಷದ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್

ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕ್ರಿಸ್ ಮಸ್ ಟ್ರೀಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದೇ ರೀತಿ ಸ್ಪೇನ್ ನ ಕೆಂಪಿಸ್ಕಿಯಲ್ಲಿರುವ ಹೋಟೆಲ್ ಬಾಹಿಯಾನಲ್ಲಿ ನಿರ್ಮಿಸಿರುವ ಕ್ರಿಸ್ ಮೆಸ್ ಟ್ರೀ ಸಾಕಷ್ಟು ಸದ್ದು ಮಾಡುತ್ತಿದೆ.

Worlds Most Expensive Christmas Tree In Spain With Ornaments Worth Rs 107 Crore

ಕ್ರಿಸ್ ಮಸ್ ಟ್ರೀಗಾಗಿ 107 ಕೋಟಿ ರೂಪಾಯಿ ಖರ್ಚು

ಹೋಟೆಲ್ ಬಾಹಿಯಾದಲ್ಲಿ ಕ್ರಿಸ್ ಮಸ್ ಟ್ರೀ ನಿರ್ಮಾಣಕ್ಕಾಗಿ ಬರೋಬ್ಬರಿ 107 ಕೋಟಿ 33 ಲಕ್ಷ 77 ಸಾವಿರದ 500 ರೂಪಾಯಿ ಖರ್ಚು ಮಾಡಲಾಗಿದೆ. ಕ್ರಿಸ್ ಮಸ್ ಟ್ರೀಯನ್ನು ವಜ್ರ, ಚಿನ್ನ ಹಾಗೂ ದುಬಾರಿ ಮೌಲ್ಯದ ಹವಳಗಳಿಂದ ಅಲಂಕರಿಸಲಾಗಿದೆ.

ಕಪ್ಪು-ಬಿಳಿ, ಗುಲಾಬಿ ಮತ್ತು ಕೆಂಪು ವಜ್ರಗಳಿಂದ ಕ್ರಿಸ್ ಮಸ್ ಟ್ರೀಯನ್ನು ಅಲಂಕರಿಸಲಾಗಿದೆ. ಇದರ ಜೊತೆಗೆ ಸುಗಂಧ ದ್ರವ್ಯದ ಬಾಟಲ್, ಉಷ್ಣಪಕ್ಷಿಗಳ ಮೊಟ್ಟೆ, ನವಿಲಿನ ಗರಿ ಹಾಗೂ ತ್ರೀಡಿ ಪ್ರಿಂಟೆಡ್ ಚಾಕೋಲೆಟ್ ಸೇರಿದಂತೆ ವಿವಿಧ ಆಭರಣಗಳಿಂದ ದೆಬಿ ವಿಂಗಮ್ ಎಂಬುವವರು ಅಲಂಕರಿಸಿದ್ದಾರೆ. ಇದು ವಿಶ್ವದ ಅತಿ ದುಬಾರಿ ಮೌಲ್ಯದ ಕ್ರಿಸ್ ಮಸ್ ಟ್ರೀ ಆಗಿದೆ.

ಈ ಹಿಂದೆ 2010ರಲ್ಲಿ ಅಬು ದುಬೈನ ಎಮರೈಟ್ಸ್ ಪ್ಯಾಲೇಸ್ ಹೋಟೆಲ್ ನಲ್ಲಿ ಅತ್ಯಂತ ದುಬಾರಿ ಮೌಲ್ಯದ ಕ್ರಿಸ್ ಮಸ್ ಟ್ರೀಯನ್ನು ನಿರ್ಮಾಣ ಮಾಡಲಾಗಿತ್ತು. 78 ಕೋಟಿ 70 ಲಕ್ಷ 42 ಸಾವಿರದ 300 ರೂಪಾಯಿ ಮೌಲ್ಯದ ಕ್ರಿಸ್ ಮಸ್ ಟ್ರೀ ನಿರ್ಮಾಣ ಮಾಡಿದ್ದು, ಗಿನ್ನಿಸ್ ದಾಖಲೆಗೆ ಸೇರಿತ್ತು.

English summary
Christmas Tree In Spain With Ornaments Worth Rs 107 Crore Might Be World's Most Expensive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X