ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಯೆಟ್ನಾಂನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ: ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಓಪನ್

|
Google Oneindia Kannada News

ಹನೊಯಿ, ಮೇ 7: ಕೊರೊನಾ ನಂತರ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ದೇಶಗಳು ಪ್ರಯತ್ನಿಸುತ್ತಿವೆ. ಸದ್ಯ ವಿಯೆಟ್ನಾಂ ಕೂಡ ಅಂತಹ ಪ್ರಯತ್ನಗಳಿಂದ ದೂರವಿಲ್ಲ. ಯಾಕೆಂದರೆ ಪ್ರವಾಸಿಗರನ್ನು ಸೆಳೆಯಲು ವಿಯೆಟ್ನಾಂ ಕೂಡ ವಿಶ್ವದ ಅತಿ ಉದ್ದದ ಗಾಜಿನ ಸೇತುವೆಯನ್ನು ತೆರೆದಿದೆ. ವಿಶ್ವದ ಅತಿ ಉದ್ದದ ಗಾಜಿನ ಸೇತುವೆಯನ್ನು ನೋಡಲು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ವಿಯೇಟ್ನಾಂ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿದೆ.

ವಿಯೆಟ್ನಾಂಗೆ ಭೇಟಿ ನೀಡಲು ನೀವೇನಾದ್ರು ಬಯಸಿದ್ದರೆ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಜೊತೆಗೆ ಅಲ್ಲಿನ ಕಣ್ಮನ ಸೆಳೆಯುವ ಹಸಿರು ಬೆಟ್ಟಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಏಪ್ರಿಲ್ ಅಂತ್ಯದಲ್ಲಿ ವಾಯುವ್ಯ ವಿಯೆಟ್ನಾಂನ ಸೋನ್ ಲಾದಲ್ಲಿ ಬಾಚ್ ಲಾಂಗ್ ಸೇತುವೆಯನ್ನು ಪುನ: ತೆರೆಯಲಾಗಿದೆ.

ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣ: ಟಿಕೆಟ್‌ ಬುಕ್ ಮಾಡುವುದು ಹೇಗೆ?ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣ: ಟಿಕೆಟ್‌ ಬುಕ್ ಮಾಡುವುದು ಹೇಗೆ?

ಇದು ಪ್ರಪಂಚದ ಅತ್ಯಂತ ಉದ್ದವಾದ ಗಾಜಿನ ಸೇತುವೆಯಾಗಿದೆ. ಬಾಚ್ ಲಾಂಗ್ ಬ್ರಿಡ್ಜ್ ವಿಶ್ವಾದ್ಯಂತ ಗಮನ ಸೆಳೆಯಲು ವಿನ್ಯಾಸಗೊಳಿಸಲಾದ ಸೇತುವೆ. ಜೊತೆಗೆ ಇದು ವಿಶಿಷ್ಟವಾದ ವಾಸ್ತುಶಿಲ್ಪದ ರಚನೆಗಳಲ್ಲಿ ಒಂದಾಗಿದೆ. ಈ ಆಕರ್ಷಕ ಗಾಜಿನ ಸೇತುವೆ ಸುಂದರವಾದ ಕಾಡಿನಲ್ಲಿ 150 ಮೀಟರ್ ಎತ್ತರದಲ್ಲಿದೆ.

ಬಾಚ್ ಲಾಂಗ್ ಪಾದಚಾರಿ ಸೇತುವೆಯನ್ನು ವಾಯುವ್ಯ ಸನ್ ಲಾ ಪ್ರಾಂತ್ಯದಲ್ಲಿ ಎತ್ತರದ ಶಿಖರಗಳಿಗೆ ಹೊಂದಿಸಲಾಗಿದೆ. ಎರಡು ಶಿಖರಗಳ ನಡುವೆ ಅದ್ಭುತ ಮತ್ತು ಆಕರ್ಷಕ ಸೇತುವೆ ಇದಾಗಿದೆ. ಸೇತುವೆಯ ಸಂಪೂರ್ಣ ಉದ್ದ 632 ಮೀಟರ್‌ ಇದೆ. ಇದನ್ನು ಫ್ರಾನ್ಸ್‌ನಲ್ಲಿ ರಚಿಸಲಾದ ಹದಗೊಳಿಸಿದ ಗಾಜಿನಿಂದ ನಿರ್ಮಿಸಲಾಗಿದೆ. ಬಿಳಿ ಪಾದಚಾರಿ ಸೇತುವೆಯು 40 ಮಿಮೀ ದಪ್ಪದ ಫ್ರೆಂಚ್ ನಿರ್ಮಿತ ಟೆಂಪರ್ಡ್ ಗ್ಲಾಸ್‌ನ ಮೂರು ಪದರಗಳನ್ನು ಒಳಗೊಂಡಿದೆ. ಸೇತುವೆ ಮೇಲೆ ನಿಂತು ಗಾಜಿನ ಕೆಳಗೆ ಸುಂದರವಾದ ಪ್ರಕೃತಿಯ ನೋಟವನ್ನು ಕಣ್ತುಂಬಿಕೊಳ್ಳಬಹುದು. ಒಂದೇ ಸಮಯದಲ್ಲಿ 450 ಜನರು ಇದರ ಮೇಲೆ ಸಂಚಾರಿಸಬಹುದಾದ ಸಾಮಾರ್ಥ್ಯವನ್ನು ಇದು ಹೊಂದಿದೆ.

ಇದು ಬಾಚ್ ಲಾಂಗ್ ಸೇತುವೆಯು 526 ಮೀಟರ್ ಉದ್ದದ ಚೀನಾದ ಸೇತುವೆಯನ್ನು ಮೀರಿಸುತ್ತದೆ. ಕಂಪನಿಯ ಪ್ರಕಾರ, ಇದು ವಿಶ್ವದ ಅತಿ ಉದ್ದದ ಗಾಜಿನ ತಳದ ಸೇತುವೆಯಾಗಿದೆ. ಆದಾಗ್ಯೂ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಮುಂದಿನ ತಿಂಗಳು ಇದನ್ನು ಪರಿಗಣಿಸುವ ಸಾಧ್ಯತೆ ಇದೆ.

World’s Longest Glass Bridge Open in Vietnam

ಸೇತುವೆಯು ವಿಯೆಟ್ನಾಂನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು ಎರಡು ವರ್ಷಗಳ ಸ್ಥಗಿತದ ಸಮಯದ ನಂತರ ಮಾರ್ಚ್ ಮಧ್ಯದಲ್ಲಿ ವಿಯೆಟ್ನಾಂ ತನ್ನ ಗಡಿಗಳನ್ನು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ತೆರೆಯಿತು ಮತ್ತು ಕೋವಿಡ್ ನಿಯಮಗಳನ್ನು ಸರಾಗಗೊಳಿಸಿತು. ಇದು 15 ದಿನಗಳವರೆಗೆ ಪ್ರಪಂಚದಾದ್ಯಂತದ 13 ರಾಷ್ಟ್ರಗಳಿಗೆ ವೀಸಾ-ಮುಕ್ತ ಪ್ರಯಾಣವನ್ನು ಮರುಸ್ಥಾಪಿಸಿದೆ.

English summary
World's longest glass bridge has been opened in Vietnam to promote tourism and attract tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X