ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂಘೈ, ಬೀಜಿಂಗ್ ನಡುವೆ ಶೀಘ್ರವೇ ವಿಶ್ವದ ಅತಿ ವೇಗದ ರೈಲು ಸೇವೆ

ಚೀನಾದ ಬೀಜಿಂಗ್ ಹಾಗೂ ಶಾಂಘೈ ನಡುವೆ ಮಹತ್ವದ ಬುಲೆಟ್ ರೈಲು ಸಂಚಾರ. ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಾಗಲಿರುವ ಬುಲೆಟ್ ರೈಲು.

|
Google Oneindia Kannada News

ಬೀಜಿಂಗ್, ಆಗಸ್ಟ್ 21: ಮುಂದಿನ ತಿಂಗಳಿನಿಂದ ಚೀನಾದ ಎರಡು ಮಹಾ ನಗರಗಳಾದ ಬೀಜಿಂಗ್ ಹಾಗೂ ಶಾಂಘೈ ನಡುವೆ ವಿಶ್ವದ ಅತಿ ವೇಗದ ರೈಲು ಸೇವೆ ಆರಂಭಗೊಳ್ಳಲಿದೆ.

ಈ ರೈಲಿನ ವೇಗ ಗಂಟೆಗೆ 350 ಕಿ.ಮೀ. ಇರಲಿದೆ ಎಂದು ಹೇಳಿರುವ ಚೀನಾ ಸರ್ಕಾರ, ಎರಡೂ ನಗರಗಳ ನಡುವೆ 1,318 ಕಿ.ಮೀ.ಗಳಿದ್ದು ಹೊಸ ರೈಲು ಸಂಚಾರದಿಂದ ಈ 4 ಗಂಟೆ 16 ನಿಮಿಷಗಳಲ್ಲಿ ಈ ಗುರಿಯನ್ನು ಮುಟ್ಟಬಹುದು ಎಂದು ಲೆಕ್ಕಾಚಾರ ಹಾಕಿದೆ.

ಸೆಪ್ಟಂಬರ್ 21ರಿಂದ ಈ ಮಾರ್ಗದ ಸೇವೆಗಳು ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಆರಂಭದ ಹಂತದಲ್ಲೇ 'ಫುಕ್ಸಿಂಗ್' ಎಂಬ ಹೆಸರಿನ ಸುಮಾರು 14 ಬುಲೆಟ್ ರೈಲುಗಳ ಸೇವೆ ಒದಗಿಸಲಾಗುವುದು ಎಂದು ಚೀನಾ ಸರ್ಕಾರ ಹೇಳಿದೆ.

ಈ ರೈಲುಗಳ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ. (ಚಿತ್ರಗಳು: ಸಾಂದರ್ಭಿಕ)

ಫುಕ್ಸಿಂಗ್ ಮಾದರಿಗಳ ಹೊಸ ಶಕೆ

ಫುಕ್ಸಿಂಗ್ ಮಾದರಿಗಳ ಹೊಸ ಶಕೆ

ಮೊದಲೇ ಹೇಳಿದಂತೆ ಇದು ವಿಶ್ವದ ಅತಿ ವೇಗದ ರೈಲು. ಪ್ರಸ್ತತ ಸನ್ನಿವೇಶದಲ್ಲಿ ವಿಶ್ವದ ಅತಿ ವೇಗದ ರೈಲುಗಳಿರುವುದು ಚೀನಾದಲ್ಲೇ. ಆ ವೇಗ ಸದ್ಯಕ್ಕೆ ಗಂಟೆಗೆ 300 ಕಿ.ಮೀ. ಇದೆ. ಆದರೆ, ಫುಕ್ಸಿಂಗ್ ಮಾದರಿಯ ರೈಲುಗಳು ಈ ವೇಗವನ್ನು ಮೀರಲಿವೆ.

ತಾಂತ್ರಿಕ ಕಾರಣಗಳಿಗಾಗಿ ವೇಗಕ್ಕೆ ಮಿತಿ

ತಾಂತ್ರಿಕ ಕಾರಣಗಳಿಗಾಗಿ ವೇಗಕ್ಕೆ ಮಿತಿ

ನಿಮಗೆ ಇನ್ನೊಂದು ವಿಚಾರ ಗೊತ್ತಾ? ಈ ಫುಕ್ಸಿಂಗ್ ರೈಲುಗಳು ಗಂಟೆಗೆ 400 ಕಿ.ಮೀ. ವೇಗದಲ್ಲಿಯೂ ಸಂಚರಿಸಬಹುದು. ಆದರೂ, ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ, ಈ ರೈಲಿನ ವೇಗವನ್ನು ಸದ್ಯಕ್ಕೆ 350 ಕಿ.ಮೀ. ಗೆ ನಿಗದಿಗೊಳಿಸಲಾಗಿದೆ.

ವಿವಿಧ ನಗರಗಳಿಗೂ ಯೋಜನೆಯ ಲಾಭ

ವಿವಿಧ ನಗರಗಳಿಗೂ ಯೋಜನೆಯ ಲಾಭ

ಸದ್ಯಕ್ಕೆ ಶಾಂಘೈ- ಬೀಜಿಂಗ್ ನಡುವಿನ ರೈಲು ಸಂಚಾರದ ನಂತರ ಚೀನಾದ ಇತರ ಮಾರ್ಗಗಳಿಗೂ ಈ ರೈಲು ಸಂಚಾರವನ್ನು ವಿಸ್ತರಿಸಲು ಚೀನಾ ಸರ್ಕಾರ ಯೋಚಿಸಿದೆ. ಬೀಜಿಂಗ್-ಟಿಯಾಂಜಿನ್-ಹೆಬೈ ನಗರಗಳ ನಡುವೆಯೂ ಶೀಘ್ರದಲ್ಲೇ ಇಂಥ ರೈಲು ಸಂಚಾರ ಆರಂಭವಾಗಲಿದೆ ಎಂದು ಅದು ಹೇಳಿದೆ.

ಅಗ್ರರಾಷ್ಟ್ರವಾಗಿ ಚೀನಾ

ಅಗ್ರರಾಷ್ಟ್ರವಾಗಿ ಚೀನಾ

ಈಗಾಗಲೇ ವೇಗದ ರೈಲುಗಳ ವಿಚಾರದಲ್ಲಿ ಚೀನಾವು ತನ್ನ ಪ್ರತಿಸ್ಪರ್ಧಿಗಳಾದ ಜಪಾನ್, ಜರ್ಮನಿ ಹಾಗೂ ಫ್ರಾನ್ಸ್ ಗಳಿಗಿಂತ ಮುಂದಿದೆ. ಹೀಗಾಗಿ, 2011ರಲ್ಲಿ ಆರಂಭವಾಗಿದ್ದ ಶಾಂಘೈ-ಬೀಜಿಂಗ್ ಬುಲೆಟ್ ರೈಲು ಸೇವೆಯ ವೇಳೆಗಾಗಲೇ ಚೀನಾ ದೇಶ ವೇಗದ ರೈಲು ಸೇವೆ ನೀಡಿದ ವಿಶ್ವದ ಅಗ್ರ ರಾಷ್ಟ್ರವಾಗಿ ಹೊರಹೊಮ್ಮಿತ್ತು.

English summary
China is all set to start operation of what is claimed to be the world's fastest bullet train service next month. The newly operating trains are expected to take an hour less than their existing counterparts to travel between Beijing and Shanghai that are 1,318 kilometres apart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X