ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪೋಲಿಯೋ ದಿನ: ಭಾರತ ಇನ್ನೂ ಪೋಲಿಯೋ ಪೀಡಿತ ದೇಶಗಳ ಪಟ್ಟಿಯಲ್ಲಿದೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ಇಂದು (ಅಕ್ಟೋಬರ್ 24) ವಿಶ್ವ ಪೋಲಿಯೋ ದಿನ, ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ.

ವಿಶ್ವದಿಂದ ಪೋಲಿಯೋವನ್ನು ಹೋಗಲಾಡಿಸಲು ಶ್ರಮಿಸಿದ ಹಾಗೂ ಪೋಲಿಯೋ ಲಸಿಕೆ ಕಂಡು ಹಿಡಿದ ಜೋನಸ್ ಸಾಲ್ಕ್ ಅವರ ಹುಟ್ಟುಹಬ್ಬದ ದಿನ ವಿಶ್ವ ಪೋಲಿಯೋ ಲಸಿಕೆ ದಿನವನ್ನಾಗಿ ಆಚರಿಸಲಾಗುತ್ತದೆ.

ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿದ ಉಂಟಾಗುವ ಅಂಗವಿಕಲತೆಯೊಂದಿಗೆ ಭೀಕರ ಪರಿಣಾಮಗಳನ್ನು ಬೀರಬಹುದಾದ ಈ ಮಾರಕ ರೋಗವನ್ನು ತಡೆಗಟ್ಟಲು ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸಬೇಕಾಗಿದೆ.

ಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ: ಸರ್ಕಾರ ಸ್ಪಷ್ಟನೆ

ಆದರೆ ಇದುವರೆಗೂ ಭಾರತವು ವಿಶ್ವದ ಪೋಲಿಯೋ ಪೀಡಿತ ದೇಶಗಳ ಪಟ್ಟಿಯಲ್ಲಿ ಇನ್ನೂ ಇದೆ ಎನ್ನುವುದೇ ವಿಪರ್ಯಾಸ, ಮೇಲ್ನೋಟಕ್ಕೆ ಪೋಲಿಯೋ ಕಾಣಿಸದಿದ್ದರೂ, ಭಾರತದ ಸಾಕಷ್ಟು ರಾಜ್ಯಗಳಲ್ಲಿ ಇನ್ನೂ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು 2000ಇಸವಿಯೊಳಗೆ ಪೋಲಿಯೋವನ್ನು ದೇಶದಿಂದ ಹೋಗಲಾಡಿಸಬೇಕು ಎಂದು ಹೇಳಿತ್ತು ಆದರೆ ಈಗ 2018ಇದುವರೆಗೂ ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ.

2011ರ ವರದಿ ಪ್ರಕಾರ ವಿಶ್ವದ ಮೂರು ದೇಶಗಳಲ್ಲಿ ಇನ್ನೂ ಪೋಲಿಯೋ ಇದೆ ಭಾರತ, ಪಾಕಿಸ್ತಾನ ಹಾಗೂ ನೈಜೀರಿಯಾದಲ್ಲಿ ಪೋಲಿಯೋ ಪ್ರಕರಣಗಳು ಇನ್ನೂ ಕಾಣಸಿಗುತ್ತಿವೆ. ಆದರೂ 2011ರಿಂದ 14ರವರೆಗೆ ಭಾರತದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ದಾಖಲಾಗಿಲ್ಲ ಎನ್ನುವುದು ಖುಷಿಯ ಸಂಗತಿ.

 ಪೋಲಿಯೋ ಅಭಿಯಾನ ಯಶಸ್ವಿಯಾಗಿದೆಯಾ?

ಪೋಲಿಯೋ ಅಭಿಯಾನ ಯಶಸ್ವಿಯಾಗಿದೆಯಾ?

ವಿಶ್ವಾದ್ಯಂತ ಪೋಲಿಯೋ ಅಭಿಯಾನಗಳು ಸಂಪೂರ್ಣ ಯಶಸ್ವಿಯಾಗಿದೆಯೇ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಹೌದು ಶೇ.96ರಷ್ಟು ಯಶಸ್ವಿಯಾಗಿದೆ, ದೇಶದಲ್ಲಿ ಪೋಲೀಯೋ ಪೀಡಿತರ ಸಂಖ್ಯೆ ಕಡಿಮೆಯಾಗಿದೆ, ಒಂದು ಹಂತವನ್ನು ತಲುಪಿದೆ.

ಬೆಂಗಳೂರು: ಜನವರಿ 18 ಮತ್ತು 22 ಪೋಲಿಯೋ ದಿನ ಬೆಂಗಳೂರು: ಜನವರಿ 18 ಮತ್ತು 22 ಪೋಲಿಯೋ ದಿನ

 2000ಇಸವಿ ಒಳಗೆ ಪೋಲಿಯೋ ಮುಕ್ತವಾಗಬೇಕಿತ್ತು?

2000ಇಸವಿ ಒಳಗೆ ಪೋಲಿಯೋ ಮುಕ್ತವಾಗಬೇಕಿತ್ತು?

ವಿಶ್ವ ಆರೋಗ್ಯ ಸಂಸ್ಥೆಯು 2000 ಇಸವಿ ಒಳಗೆ ವಿಶ್ವದಿಂದಲೇ ಸಂಪೂರ್ಣವಾಗಿ ಪೋಲಿಯೋವನ್ನು ಹೋಗಲಾಡಿಸಬೇಕು ಎನ್ನುವ ಗಡುವು ನೀಡಿತ್ತು. ಇದೀಗ ಗಡುವು ಮುಗಿದು 18ವರ್ಷಗಳು ಕಳೆದಿವೆ. ಭಾರತ, ಪಾಕಿಸ್ತಾನ, ನೈಜೀರಿಯಾ ಮೂರು ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ಪೋಲಿಯೋ ಅಭಿಯಾನ ಯಶಸ್ಸು ಕಂಡಿದೆ. ಪೋಲಿಯೋವನ್ನು ತೊಲಗಿಸುವುದು ಸುಲಭದ ಮಾತಲ್ಲ.

 ಭಾನುವಾರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಮರೆಯದಿರಿ ಭಾನುವಾರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಮರೆಯದಿರಿ

 2022ಕ್ಕೆ ವಿಶ್ವ ಪೋಲಿಯೋ ಮುಕ್ತವಾಗುವುದೇ?

2022ಕ್ಕೆ ವಿಶ್ವ ಪೋಲಿಯೋ ಮುಕ್ತವಾಗುವುದೇ?

2022ನೇ ಇಸವಿಯೊಳಗೆ ಭಾರತ, ನೈಜೀರಿಯಾ, ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವವನ್ನೇ ಪೋಲಿಯೋ ಮುಕ್ತ ನಗರವನ್ನಾಗಿಸಲು ವಿಶ್ವ ಆರೋಗ್ಯ ಸಂಸ್ಥೆ ಗಡುವು ನೀಡಿದೆ, ಆದರೆ ಅಷ್ಟರೊಳಗೆ ನಿಜವಾಗಿಯೂ ವಿಶ್ವ ಪೋಲಿಯೋ ಮುಕ್ತ ನಗರವಾಗುವುದೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.

 2011 ರಿಂದ 2014ವರೆಗೆ ದೇಶದಲ್ಲಿ ಪೋಲಿಯೋ ಪ್ರಕರಣ ದಾಖಲಾಗಿಲ್ಲ

2011 ರಿಂದ 2014ವರೆಗೆ ದೇಶದಲ್ಲಿ ಪೋಲಿಯೋ ಪ್ರಕರಣ ದಾಖಲಾಗಿಲ್ಲ

2011ರ ಜನವರಿ 13ರಿಂದ 2014ರ ಮಾರ್ಚ್ 27ರವರೆಗೆ ಮೂರು ವರ್ಷ ಭಾರತದಲ್ಲಿ ಯಾವುದೇ ಪೋಲಿಯೋ ಪ್ರಕರಣ ದಾಖಲಾಗಿಲ್ಲ.

 ಉತ್ತರ ಪ್ರದೇಶ ಪೋಲಿಯೋ ಲಸಿಕೆಯಲ್ಲಿ ವೈರಸ್

ಉತ್ತರ ಪ್ರದೇಶ ಪೋಲಿಯೋ ಲಸಿಕೆಯಲ್ಲಿ ವೈರಸ್

ಉತ್ತರ ಪ್ರದೇಶದಲ್ಲಿ ಪೊಲೀಯೋ ಲಸಿಕೆಯಲ್ಲಿ ಪೋಲಿಯೋ ವೈರಸ್ ಕಂಡುಬಂದಿದ್ದು, ಜನರಲ್ಲಿ ಆತಂಕ ಉದ್ಭವಿಸಿದೆ, ಅಷ್ಟೇ ಅಲ್ಲದೇ ಉಳಿದ ರಾಜ್ಯಗಳಲ್ಲೂ ಕೂಡ ಇಂತಹ ತೊಂದರೆ ಕಾಣಿಸಿಕೊಳ್ಳಬಹುದು ಎನ್ನುವ ಆತಂಕ ಎದುರಾಗಿದೆ ಹಾಗಾಗಿ ಕರ್ನಾಟಕದಲ್ಲೂ ಕೂಡ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಪೋಷಕರು ಹಿಂಜರಿಯುತ್ತಿದ್ದಾರೆ.

 ಭಾರತದಲ್ಲಿ 2016ರಲ್ಲಿ ಹೊಸ ಲಸಿಕೆ ಆರಂಭ

ಭಾರತದಲ್ಲಿ 2016ರಲ್ಲಿ ಹೊಸ ಲಸಿಕೆ ಆರಂಭ

ಭಾರತದಲ್ಲಿ 2016ರಲ್ಲೇ ಹೊಸ ಲಸಿಕೆ ಆರಂಭ ಸಮರ್ಪಕವಾಗಿ ತೊಲಗದ ಟೈಪ್ 2 ಪೋಲಿಯೋ ನಿವಾರಣೆಗಾಗಿ 2016ರ ಏಪ್ರಿಲ್ ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಹೊಸ ಲಸಿಕೆ ಪ್ರಾರಂಭಿಸಲಾಗಿತ್ತು.

 ಪೋಲಿಯೋ ಹನಿಯಲ್ಲಿ ಎರಡು ವಿಧ

ಪೋಲಿಯೋ ಹನಿಯಲ್ಲಿ ಎರಡು ವಿಧ

ಪೋಲಿಯೋ ಹನಿಗಳಲ್ಲಿ ಎರಡು ವಿಧಗಳಿವೆ ಟ್ರಿವಲೆಂಟ್ ಹಾಗೂ ಬಿವಲೆಂಟ್ ಒಪಿವಿ ಎಂದು ಅದನ್ನು ಕರೆಯಲಾಗುತ್ತದೆ. ಬ್ರಿವಲೆಂಟ್ ಲಸಿಕೆಯನ್ನು 2016ರ ಏಪ್ರಿಲ್ ನಲ್ಲಿ ಭಾರತಕ್ಕೆ ಪೂರೈಸಿದ್ದು, ಈ ಬ್ಯಾಚ್ ನ ಒಪಿವಿ ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಪೂರೈಕೆಯಾಗಿದೆ. ಈ ಬ್ಯಾಚ್ ನ ಔಷಧ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ, ಹಾಗಾಗಿ ಕರ್ನಾಟಕ ಸುರಕ್ಷಿತವಾಗಿದೆ ಎಂದು ಆರೋಗ್ಯಾಧಿಕಾರಿ ರಜನಿ ನಾಗೇಶ್ ರಾವ್ ತಿಳಿಸಿದ್ದಾರೆ.

English summary
World Polio Day was established on the birthday of the creator of the first polio vaccines, Jonas Salk, to focus on educating and informing the world about polio and the success GPEI had had in eradicating the disease on a global scale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X