ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಬಾಕುಮುಕ್ತ ದಿನದ ವಿಶೇಷ: ಧೂಮಪಾನ + ಕೊರೊನಾವೈರಸ್ = ಪಕ್ಕಾ ಸಾವು!?

|
Google Oneindia Kannada News

ನವದೆಹಲಿ, ಮೇ 31: ಧೂಮಪಾನಿಗಳಿಗೆ ಕೊರೊನಾವೈರಸ್ ಸೋಂಕಿನಿಂದ ಶೇಕಡಾ 50ರಷ್ಟು ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ.ಟೆಡ್ರೂಸ್ ಅಧಾನೊಮ್ ಗೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ.

ಮೇ 31 ವಿಶ್ವ ತಂಬಾಕುಮುಕ್ತ ದಿನ. ಇದೇ ದಿನ ತಂಬಾಕು ಸೇವನೆ ಮತ್ತು ಧೂಮಪಾನವನ್ನು ತ್ಯಜಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ನಿಟ್ಟಿನಲ್ಲಿ ವಿಶೇಷ ವಿಡಿಯೋ ಸಂದೇಶವೊಂದನ್ನು ಟ್ವಿಟರ್ ಮೂಲಕ ಜಗತ್ತಿಗೆ ಸಾರಿದೆ.

ಸಿಗರೇಟ್ ಸೇದುವವರಿಗೆ ಸೋಂಕು ಬರೋದಿಲ್ವಾ? ಹೀಗನ್ನುತ್ತಿದೆ ಅಧ್ಯಯನ...ಸಿಗರೇಟ್ ಸೇದುವವರಿಗೆ ಸೋಂಕು ಬರೋದಿಲ್ವಾ? ಹೀಗನ್ನುತ್ತಿದೆ ಅಧ್ಯಯನ...

ಇಂದು ಜನರು ಧೂಮಪಾನದಿಂದ ಶ್ವಾಸಕೋಶ ಸಮಸ್ಯೆ, ಉಸಿರಾಟ ತೊಂದರೆ ಸೇರಿದಂತೆ ಹಲವು ರೀತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧೂಮಪಾನಿಗಳಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡರೆ ಸಾವಿನ ಅಪಾಯ ಹೆಚ್ಚಾಗಿದೆ ಎಂದು ಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ.ಟೆಡ್ರೂಸ್ ಅಧಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಇಂದೇ ಧೂಮಪಾನವನ್ನು ತ್ಯಜಿಸಿರಿ

ಇಂದೇ ಧೂಮಪಾನವನ್ನು ತ್ಯಜಿಸಿರಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಪ್ರಾಣ ಬಿಟ್ಟವರಲ್ಲಿ ಧೂಮಪಾನ ಮಾಡುವವರಿಗೆ ಶೇಕಡಾ 50ರಷ್ಟು ಅಪಾಯ ಹೆಚ್ಚಾಗಿದೆ. ಕೊವಿಡ್-19 ಸೋಂಕಿನ ಅಪಾಯದಿಂದ ಪಾರಾಗಲು ಇಂದೇ ಧೂಮಪಾನವನ್ನು ತ್ಯಜಿಸಿರಿ ಎಂದು WHO ಮಹಾ ನಿರ್ದೇಶಕ ಡಾ.ಟೆಡ್ರೂಸ್ ಅಧಾನೊಮ್ ಗೆಬ್ರೆಯೆಸಸ್ ಸಲಹೆ ನೀಡಿದ್ದಾರೆ. ಅಲ್ಲದೇ, ಧೂಮಪಾನ ಅಥವಾ ತಂಬಾಕು ಸೇವನೆಯಿಂದಾಗಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಡುವೆ ಧೂಮಪಾನ ತ್ಯಜಿಸಿದ ಲಕ್ಷಾಂತರ ವ್ಯಸನಿಗಳು

"ಇವತ್ತು ಅಂತಾರಾಷ್ಟ್ರೀಯ ತಂಬಾಕುಮುಕ್ತ ದಿನ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಮಧ್ಯೆ ಲಕ್ಷಾಂತರ ವ್ಯಸನಿಗಳು ತಾವು ಧೂಮಪಾನವನ್ನು ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಾರೆ. ಧೂಮಪಾನವನ್ನು ಇಂದೇ ತ್ಯಜಿಸಿ, ನಮ್ಮ ತಂಡವನ್ನು ಸೇರಕೊಳ್ಳಿರಿ" ಎಂದು ವಿಶ್ವ ಆರೋಗ್ಯ ಸಂಸ್ಥೆಯು ಟ್ವಿಟರ್ ಖಾತೆಯಲ್ಲಿ ಬರೆದಿದೆ. ಅದರು ಒಂದು ವಿಡಿಯೋ ತುಣುಕು ಇಲ್ಲಿದೆ.

ಕೇಂದ್ರ ಸಚಿವ ಹರ್ಷವರ್ಧನ್ ಗೆ ವಿಶೇಷ ಮಾನ್ಯತಾ ಪ್ರಶಸ್ತಿ

ಕೇಂದ್ರ ಸಚಿವ ಹರ್ಷವರ್ಧನ್ ಗೆ ವಿಶೇಷ ಮಾನ್ಯತಾ ಪ್ರಶಸ್ತಿ

ತಂಬಾಕು ನಿಯಂತ್ರಣದಲ್ಲಿ ಭಾರತ ಕಾರ್ಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿದೆ. ಇಂಗ್ಲೆಂಡಿನ ಬಾತ್ ವಿಶ್ವವಿದ್ಯಾಲಯದಲ್ಲಿ ತಂಬಾಕು ನಿಯಂತ್ರಣ ಸಂಶೋಧನಾ ಕೇಂದ್ರ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಡಾ ಹರ್ಷವರ್ಧನ್ ಗೆ ವಿಶೇಷ ಮಾನ್ಯತಾ ಪ್ರಶಸ್ತಿಯನ್ನು ನೀಡಲಾಯಿತು. "ಭಾರತದಲ್ಲಿ ಇ-ಸಿಗರೇಟ್ ಮತ್ತು ಬಿಸಿ ತಂಬಾಕು ಉತ್ಪನ್ನಗಳನ್ನು (ಎಚ್‌ಟಿಪಿ) ನಿಷೇಧಿಸುವ 2019ರ ರಾಷ್ಟ್ರೀಯ ಶಾಸನದಲ್ಲಿ ಡಾ.ಹರ್ಷ ವರ್ಧನ್ ಪ್ರಮುಖ ಪಾತ್ರ ವಹಿಸಿದ್ದರು" ಎಂದು ಡಬ್ಲ್ಯುಎಚ್‌ಒ ಹೇಳಿಕೆಯಲ್ಲಿ ತಿಳಿಸಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ಮುಕ್ತ ಅಭಿಯಾನದಲ್ಲಿ ಎಲ್ಲ ರಾಷ್ಟ್ರಗಳು ಕೈ ಜೋಡಿಸುವಂತೆ WHO ಮಹಾ ನಿರ್ದೇಶಕ ಡಾ.ಟೆಡ್ರೂಸ್ ಅಧಾನೊಮ್ ಗೆಬ್ರೆಯೆಸಸ್ ಕರೆ ನೀಡಿದರು.

ತಂಬಾಕುಮುಕ್ತ ರಾಷ್ಟ್ರಗಳ ನಿರ್ಮಾಣಕ್ಕೆ ಕರೆ

ತಂಬಾಕುಮುಕ್ತ ರಾಷ್ಟ್ರಗಳ ನಿರ್ಮಾಣಕ್ಕೆ ಕರೆ

ತಂಬಾಕು ಉತ್ಪನ್ನಗಳ ಬಳಕೆಯಿಂದ ಎದುರಾಗುವ ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ 1987ರಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 1987ರಲ್ಲಿ ಮೇ 31 ಅನ್ನು ವಿಶ್ವ ತಂಬಾಕುಮುಕ್ತ ದಿನವನ್ನಾಗಿ ಘೋಷಿಸಲು ನಿರ್ಧರಿಸಿದವು. ಪ್ರಸ್ತುತ ಜಗತ್ತಿನಲ್ಲಿ ಶೇ 39 ಪುರುಷರು ಹಾಗೂ ಶೇ 9ರಷ್ಟು ಮಹಿಳಾ ಧೂಮಪಾನಿಗಳಿದ್ದಾರೆ. ಯರೋಪ್ ರಾಷ್ಟ್ರದಲ್ಲಿ ಅತಿಹೆಚ್ಚು ಎಂದರೆ ಶೇ.26ರಷ್ಟು ಧೂಮಪಾನ ವ್ಯಸನಿಗಳಿದ್ದಾರೆ. ರಾಷ್ಟ್ರಗಳು ತುರ್ತು ಕ್ರಮಗಳನ್ನು ಜಾರಿಗೊಳಿಸಿದರೆ 2025ರ ವೇಳೆಗೆ ವಿಶ್ವದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಸಂಖ್ಯೆ ಶೇ.2ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

English summary
World Health Organization (WHO) Director-General Dr Tedros Adhanom Ghebreyesus Has Said That Smokers Have Up To A 50 Per cent Higher Risk Of Developing Severe Diseases And Death From COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X