ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1000 ವರ್ಷಕ್ಕೊಮ್ಮೆ ಇಂಥ ಮಳೆ: ಜಗತ್ತಿನ ಹಾಟೆಸ್ಟ್ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ!

|
Google Oneindia Kannada News

ಕ್ಯಾಲಿಪೋರ್ನಿಯಾ, ಆಗಸ್ಟ್ 10: ಇದು ಜಗತ್ತಿನಲ್ಲೇ ಅತ್ಯಂತ ಹಾಟೆಸ್ಟ್ ಸಿಟಿ ಎಂದು ಹೆಸರುವಾಸಿಯಾಗಿದ್ದ ನಗರ. ಆದರೆ ಒಂದೇ ಒಂದು ಮಳೆಗೆ ವಿಶ್ವದ ಹಾಟೆಸ್ಟ್ ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಬಿಟ್ಟಿದೆ. ಇಂಥದೊಂದು ಘಟನೆಗೆ ಸಾಕ್ಷಿಯಾಗಿರುವ ರಾಷ್ಟ್ರವೇ ಕ್ಯಾಲಿಪೋರ್ನಿಯಾ.

ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯನ್ನು ವಿಶ್ವದ ಅತ್ಯಂತ ಹಾಟೆಸ್ಟ್ ಸ್ಥಳ ಎಂದು ಕರೆಯಲಾಗುತ್ತದೆ. ಇದು ಯುನೈಟೆಡ್ ಸ್ಟೇಟ್ಸ್‌ನ ಅತ್ಯಂತ ಶುಷ್ಕ ಸ್ಥಳವಾಗಿದೆ, ಆದಾಗ್ಯೂ, ಹವಾಮಾನ ಬದಲಾವಣೆಯು ಇಲ್ಲಿನ ಚಿತ್ರಣವನ್ನೇ ಬದಲಾಯಿಸಿದೆ.

Explained: ಕ್ಯಾಲಿಪೋರ್ನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆExplained: ಕ್ಯಾಲಿಪೋರ್ನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

1000 ವರ್ಷದಲ್ಲೇ ಗರಿಷ್ಠ ಮಳೆಗೆ ಯುನೈಟೆಡ್ ಸ್ಟೇಟ್ಸ್ ಸಾಕ್ಷಿಯಾಗಿದೆ. ಈ ಬಾರಿ ಸುರಿದ ದಾಖಲೆಯ ಮಳೆಗೆ ಡೆತ್ ಕಣಿವೆಯಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ನ್ಯಾಶನಲ್ ಪಾರ್ಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಲಾಕ್

ನ್ಯಾಶನಲ್ ಪಾರ್ಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಲಾಕ್

ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ ನ್ಯಾಶನಲ್ ಪಾರ್ಕ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಿಕ್ಕಿಹಾಕಿಕೊಂಡಿದ್ದು, ಅಧಿಕಾರಿಗಳು ಅದನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಒತ್ತಾಯಿಸಿದ್ದಾರೆ. ವರದಿಗಳ ಪ್ರಕಾರ, ಫರ್ನೇಸ್ ಕ್ರೀಕ್‌ನಲ್ಲಿರುವ ಪಾರ್ಕ್ ಪ್ರಧಾನ ಕಛೇರಿಯ ಬಳಿ ಇರುವ ಐತಿಹಾಸಿಕ ಐಷಾರಾಮಿ ಹೋಟೆಲ್ ಡೆತ್ ವ್ಯಾಲಿಯಲ್ಲಿರುವ ಇನ್‌ನಲ್ಲಿ ಪಾರ್ಕ್ ಸಂದರ್ಶಕರು ಮತ್ತು ಸಿಬ್ಬಂದಿಗೆ ಸೇರಿದ 60ಕ್ಕೂ ಹೆಚ್ಚು ಕಾರುಗಳು ಅವಶೇಷಗಳಡಿ ಹೂತುಹೋಗಿವೆ.

ವೈರಲ್ ಆಯ್ತು ಇದೊಂದು ವಿಡಿಯೋ

ಯುಎಸ್‌ನಲ್ಲಿ ಚಂಡಮಾರುತದ ಕುರಿತು ಮಾಹಿತಿ ನೀಡುವ ಹಾಗೂ ಹವಾಮಾನ ಘಟನೆಗಳನ್ನು ಸೆರೆಹಿಡಿಯುವ ಜಾನ್ ಸಿರ್ಲಿನ್, ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಪ್ರಪಂಚದ ಅತ್ಯಂತ ಶುಷ್ಕ ಪ್ರದೇಶಗಳಲ್ಲಿ ಪ್ರವಾಹದ ಪ್ರಮಾಣವನ್ನು ತೋರಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಡೆತ್ ವ್ಯಾಲಿಯೊಳಗಿಂತ ಹೊರ ಬರಲಾಗುತ್ತಿಲ್ಲ

ಡೆತ್ ವ್ಯಾಲಿಯೊಳಗಿಂತ ಹೊರ ಬರಲಾಗುತ್ತಿಲ್ಲ

ಈ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಸುಮಾರು 500 ಸಂದರ್ಶಕರು ಮತ್ತು 500 ಉದ್ಯಾನವನ ಸಿಬ್ಬಂದಿಗೆ ಉದ್ಯಾನವನದಿಂದ ಹೊರಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಡೆತ್ ವ್ಯಾಲಿಯೊಳಗೆ ಮತ್ತು ಹೊರಗಿನ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ. ಫರ್ನೇಸ್ ಕ್ರೀಕ್‌ನಲ್ಲಿ 3.7 ಸೆಂ.ಮೀ ಧಾರಾಕಾರ ಮಳೆಯಿಂದ ಈ ಪ್ರವಾಹವು ಉಂಟಾಗಿದೆ. ಇದು 1988ರಲ್ಲಿ ಸುರಿದ ಮಳೆಯ ದಾಖಲೆಯನ್ನು ಸರಿಗಟ್ಟುತ್ತದೆ ಎಂದು ಉದ್ಯಾನವನದ ವಕ್ತಾರ ಆಮಿ ವೈನ್ಸ್ ಹೇಳಿದ್ದಾರೆ.

ಪ್ರತೀ ವರ್ಷ ಪ್ರವಾಹ ಎದುರಿಸುವ ಡೆತ್ ವ್ಯಾಲಿ

ಪ್ರತೀ ವರ್ಷ ಪ್ರವಾಹ ಎದುರಿಸುವ ಡೆತ್ ವ್ಯಾಲಿ

ಮಾನ್ಸೂನ್ ಮಳೆಯಿಂದ ಉಂಟಾಗುವ ಪ್ರವಾಹಗಳು ಡೆತ್ ವ್ಯಾಲಿಯ ಪರಿಸರ ವಿಜ್ಞಾನದ ಒಂದು ನೈಸರ್ಗಿಕ ಭಾಗವಾಗಿದೆ. ಉದ್ಯಾನವನದಲ್ಲಿ ಪ್ರತಿ ವರ್ಷವೂ ಇಂಥದೊಂದು ನಾಟಕೀಯ ಪರಿವರ್ತನೆಗಳು ಆಗುತ್ತವೆ. ಕಣಿವೆಯ ದೃಶ್ಯವು ಮಳೆಗಾಲದಲ್ಲಿ ಬದಲಾಗಲಿದ್ದು, ಬೇಸಿಗೆ ಹೊತ್ತಿಗೆ ಮರುರೂಪಗೊಳ್ಳುತ್ತದೆ. ಶುಕ್ರವಾರ ಬೆಳಗ್ಗೆ 6 ರಿಂದ 8 ಗಂಟೆ ನಡುವೆ ದಾಖಲೆಯ ಮಳೆಯಾಗಿದೆ ಎಂದು ಲಾಸ್ ವೇಗಾಸ್‌ನಲ್ಲಿರುವ ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಜಾನ್ ಅಡೈರ್ ಹೇಳಿದ್ದಾರೆ. ಈ ಹಿಂದೆ 1936ರಲ್ಲಿ 3.73 ಸೆ.ಮೀ ಮಳೆಯಾಗಿದ್ದು, ನಂತರದಲ್ಲಿ ಏಪ್ರಿಲ್ 15, 1988ರಂದು ದಾಖಲೆಯ ಮಳೆಯಾಗಿತ್ತು.

English summary
World Hottest place flooded 1 rain after 1000 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X