ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪಾರಂಪರಿಕ ದಿನಕ್ಕೆ ನಿಮ್ಮ ಸಂಕಲ್ಪವೇನು?

|
Google Oneindia Kannada News

ಹೌದು.. ಏಪ್ರಿಲ್ 18 ವಿಶ್ವ ಪಾರಂಪರಿಕ ದಿನ. ವಿಶ್ವದಾದ್ಯಂತ ಇರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣ ಗಳನ್ನು ರಕ್ಷಿಸಿ ಕಾಪಾಡುವ ಉದ್ದೇಶದಿಂದ ಪಾರಂಪರಿಕ ದಿನ ಆಚರಣೆ ಮಾಡಲಾಗುತ್ತದೆ.

1982ರಲ್ಲಿ ಮೊದಲ ಬಾರಿಗೆ ವಿಶ್ವ ಪಾರಂಪರಿಕ ದಿನ ಎಂಬ ಚಿಂತನೆ ಜಾರಿಗೆ ಬಂತು. ಅದಾದಮೇಲೆ 1983ರಲ್ಲಿ ಯುನೆಸ್ಕೋದ ಅಧಿಕೃತ ಮುದ್ರೆಯೊಂದಿಗೆ ವಿಶ್ವ ಪಾರಂಪರಿಕದ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.[ಭಾರತದ ಕರೆನ್ಸಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ]

hampi

ನಮ್ಮ ರಾಜ್ಯದ ಅನೇಕ ಸ್ಥಳಗಳು ಸಹ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಪಶ್ಚಿಮ ಘಟ್ಟಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿರುವುದರಿಂದ ಹೊಸ ಯೋಜನೆಗಳಿಗೆ ಬ್ರೇಕ್ ಬಿದ್ದಂತಾಗಿದೆ.[ಹಂಪಿ ಇತಿಹಾಸವೇ ಬೇರೆ...ವಿಜಯಗರದ ಇತಿಹಾಸವೇ ಬೇರೆ...]

ಹಂಪಿ, ಪಟ್ಟದಕಲ್ಲು ಹಾಗೂ ಪಶ್ಚಿಮ ಘಟ್ಟಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಮೊದಲು ಸೇಪರ್ಡೆಯಾದ ಕರ್ನಾಟಕದ ಸ್ಥಳಗಳು. ನಂತರ ಸುಲ್ತಾನ್‌ ವಾಸ್ತುಶಿಲ್ಪ ಶೈಲಿಯ ಸ್ಮಾರಕ, ಗುಮ್ಮಟಗಳನ್ನು ಹೊಂದಿರುವ ಗುಲ್ಬರ್ಗ, ಬೀದರ್‌, ವಿಜಾಪುರ, ಹೊಯ್ಸಳ ವಾಸ್ತುಶಿಲ್ಪ ಶೈಲಿಯ ದೇವಾಲಯ ಇರುವ ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣವನ್ನು ಇದೀಗ ಯುನೆಸ್ಕೊ ತನ್ನ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿತ್ತು.[ಕರ್ನಾಟಕದ ಪ್ರವಾಸಿ ತಾಣಗಳ ಮೇಲೆ ಒಂದು ಸುತ್ತು]

ನಾವು ಹೇಳುವುದು ಇಷ್ಟೆ, ಇಂಥ ತಾಣಗಳಿಗೆ ಅಥವಾ ದೇಶದ ಇತಿಹಾಸ ಸಾರುವ ತಾಣಗಳಿಗೆ ಭೇಟಿ ನೀಡಿದರೆ ಪ್ಲಾಸ್ಟಿಕ್ ಬಳಸಿ ಬಿಸಾಡಬೇಡಿ, ಸ್ವಚ್ಛತೆಗೆ ಆದ್ಯತೆ ನೀಡಿ.. ನೀವು ಪರಿಸರ ಆಸ್ವಾದಿಸಿ ಇತರರಿಗೂ ಆಸ್ವಾದಿಸಲು ಬಿಡಿ..ನಮ್ಮ ದೇಶದ ಹಿರಿಮೆ ಸಾರುವ ತಾಣಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ.. ಅಲ್ಲವೇ?

English summary
All over the World observed World Heritage Day 2016 on 18th April. Architectural jewels in Belur and Halebid in Hassan, historical monuments in Srirangapatna and remnants of history from Deccan sultanate are the members of UNESCO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X