ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಯಾವ ರಾಷ್ಟ್ರಕ್ಕೂ ಸ್ತನ್ಯಪಾನದ ಮಹತ್ವ ಗೊತ್ತಿಲ್ಲ!

|
Google Oneindia Kannada News

ಜಿನೆವಾ(ಸ್ವಿಟ್ಜರ್ಲೆಂಡ್), ಆಗಸ್ಟ್ 3: ಜಗತ್ತಿನ 194 ದೇಶಗಳಿಗೆ ಸ್ತನ್ಯಪಾನದ ಮಹತ್ವವೇ ಗೊತ್ತಿಲ್ಲ ಎಂದು ವರದಿಯೊಂದು ಹೇಳಿದೆ. ಜಗತ್ತಿನಲ್ಲಿರುವ ಶೇ.40 ರಷ್ಟು ಮಕ್ಕಳು ಮಾತ್ರವೇ ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನು ಮಾತ್ರ ಪಡೆಯುತ್ತಿವೆ. ಉಳಿದಂತೆ ಶೇ.60 ರಷ್ಟು ಮಕ್ಕಳು ತಾಯಿ ಎದೆಹಾಲಿನೊಂದಿಗೆ ಬೇರೆ ಬೇರೆ ಆಹಾರಗಳನ್ನು ಸೇವಿಸುತ್ತಿವೆ ಎಂದು ಈ ವರದಿ ಹೇಳಿದೆ.

ವಿಶ್ವ ಸ್ತನ್ಯಪಾನ ಸಪ್ತಾಹ: ಮಾತೆ ನೀಡಿದ ಅಮೃತದ 5 ಉಪಯೋಗ ವಿಶ್ವ ಸ್ತನ್ಯಪಾನ ಸಪ್ತಾಹ: ಮಾತೆ ನೀಡಿದ ಅಮೃತದ 5 ಉಪಯೋಗ

ಆಗಸ್ಟ್ 1 ರಿಂದ 7ರವರೆಗಿನ ಒಂದು ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹ ಎಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಜಗತ್ತಿನಾದ್ಯಂತ ನಡೆಯುತ್ತಿದೆ.

World does not know importance of breastfeeding

ಮಕ್ಕಳಿಗೆ ಆರು ತಿಂಗಳು ತುಂಬುವವರೆಗೆ ಕೇವಲ ತಾಯಿ ಹಾಲನ್ನು ಮಾತ್ರ ನೀಡುವುದರಿಂದ ಇತ್ತೀಚಿನ ದಿನಗಳಲ್ಲಿ ಶಿಶು ಮರಣಕ್ಕೆ ಕಾರಣವಾಗಿರುವ ನ್ಯೂಮೋನಿಯಾ ಮತ್ತು ಡೈರಿಯಾ ರೋಗಗಳನ್ನು ತಡೆಯುವುದಕ್ಕೆ ಸಾಧ್ಯ. ಮಾತ್ರವಲ್ಲ, ಸ್ತನ್ಯಪಾನ ಮಾಡಿಸುವುದರಿಂದ ತಾಯಿಯರೂ ಸ್ತನ ಕ್ಯಾನ್ಸರ್ ನಂಥ ಮಾರಕ ಕಾಯಿಲೆಗಳಿಂದ ದೂರುಳಿಯುವುದಕ್ಕೆ ಸಾಧ್ಯ.

ಹೀಗಿದ್ದರೂ ಸ್ತನ್ಯಪಾನದ ಮಹತ್ವವನ್ನು ಜಗತ್ತಿನ ಯಾವ ರಾಷ್ಟ್ರವೂ ಅರಿಯದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ವರದಿ ಹೇಳಿದೆ. ಈ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ಸಹ ಅನುಮೋದಿಸಿದೆ.

English summary
Eventhough the world knows the importance of breast feeding, only 40% of children younger than 6 months are breastfed exclusively. 60% of the children have not got breast milk yet. WHO shows deep concern towards this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X