ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೊಂದು ಸಿಹಿ-ಕಹಿ ಸುದ್ದಿ

|
Google Oneindia Kannada News

ಲಂಡನ್, ಜೂನ್ 6: ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ದಕ್ಷಿಣ ಆಫ್ರಿಕಾ, ವಿಶ್ವಕಪ್‌ನ ಆರಂಭದಲ್ಲಿಯೇ ಹೀನಾಯ ಪ್ರದರ್ಶನ ನೀಡುತ್ತಿದೆ. ಇದು ದಕ್ಷಿಣ ಆಫ್ರಿಕಾಕ್ಕೆ ಮಾತ್ರವಲ್ಲ, ಅದರಾಚೆಗೂ ಇರುವ ತಂಡದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ವೇಳೆ ತಂಡದಲ್ಲಿ ಎಬಿ ಡಿವಿಲಿಯರ್ಸ್ ಇರಬೇಕಿತ್ತು ಎನ್ನುವುದು ಅನೇಕರ ಅಭಿಪ್ರಾಯ.

ಅಪಾರ ಅಭಿಮಾನಿಗಳನ್ನು ಹೊಂದಿರುವ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಅವರ ಅನುಪಸ್ಥಿತಿ ಹಲವು ಬಾರಿ ತಂಡವನ್ನು ಕಾಡಿದೆ. ಅದರಲ್ಲಿಯೂ ಈ ವಿಶ್ವಕಪ್‌ನಲ್ಲಿ ಅವರ ಅಗತ್ಯತೆ ಎಷ್ಟರಮಟ್ಟಿಗೆ ತಂಡಕ್ಕಿತ್ತು ಎಂಬುದನ್ನು ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವೈಫಲ್ಯ ಪದೇ ಪದೇ ಸಾಬೀತುಪಡಿಸುತ್ತಿದೆ.

ಈ ನಡುವೆ ಎಬಿಡಿ ಅಭಿಮಾನಿಗಳಿಗೆ ಒಂದು ಖುಷಿಯ ಸುದ್ದಿ ದೊರಕಿದೆ. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿವೃತ್ತಿಯ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಂಡು ವಿಶ್ವಕಪ್ ತಂಡವನ್ನು ಸೇರಿಕೊಳ್ಳಲು ಡಿವಿಲಿಯರ್ಸ್ ಬಯಸಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಕ್ರಿಕೆಟ್ ವಿಶ್ವಕಪ್ 2019: 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ವಿಶ್ವದಾಖಲೆ!

ಪ್ರಸಕ್ತ ವಿಶ್ವಕಪ್ ಆರಂಭಕ್ಕೂ ಮುನ್ನ ಡಿವಿಲಿಯರ್ಸ್, ಮರಳಿ ಹಸಿರು-ಹಳದಿ ಮಿಶ್ರಿತ ಜೆರ್ಸಿ ತೊಟ್ಟು ಅಂಕಣಕ್ಕಿಳಿಯುವ ಆಸೆ ವ್ಯಕ್ತಪಡಿಸಿದ್ದರು ಎಂದು ಅದು ಹೇಳಿದೆ.

ಆದರೆ, ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿರುವುದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ. ಇನ್ನೇನು ವಿಶ್ವಕಪ್‌ ತಂಡದ ಅಂತಿಮ 15 ಬಳಗದ ಹೆಸರನ್ನು ಪ್ರಕಟಿಸುವ ಸನ್ನಾಹದಲ್ಲಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ, ಎಬಿಡಿ ಅವರ ಮನವಿಯನ್ನು ತಿರಸ್ಕರಿಸಿತ್ತು.

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆರ್ಭಟಕ್ಕೆ ಇಂಗ್ಲೆಂಡ್ ಕಕ್ಕಾಬಿಕ್ಕಿ! ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆರ್ಭಟಕ್ಕೆ ಇಂಗ್ಲೆಂಡ್ ಕಕ್ಕಾಬಿಕ್ಕಿ!

2018ರ ಮೇ ತಿಂಗಳಿನಲ್ಲಿ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪ್ರಸಕ್ತ ವಿಶ್ವಕಪ್‌ನ ಅಂತಿಮ ತಂಡ ಪ್ರಕಟಿಸುವ 24 ಗಂಟೆಗಳ ಮುಂಚೆಯಷ್ಟೇ ಅವರು ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿಯುವ ಇರಾದೆ ಹಂಚಿಕೊಂಡಿದ್ದರು.

ಎಬಿಡಿ ಮನವಿ ತಿರಸ್ಕಾರ

ಎಬಿಡಿ ಮನವಿ ತಿರಸ್ಕಾರ

35 ವರ್ಷದ ಎಬಿಡಿ, ತಂಡದ ನಾಯಕ ಫ್ಲಾಪ್ ಡು ಪ್ಲೆಸಿಸ್, ಕೋಚ್ ಒಟ್ಟಿಸ್ ಗಿಬ್ಸನ್ ಮತ್ತು ಆಯ್ಕೆದಾರರ ಸಂಚಾಲಕ ಲಿಂಡಾ ಜೊಂಡಿ ಅವರನ್ನು ಸಂಪರ್ಕಿಸಿ ಮಾತನಾಡಿದ್ದರು. ಆದರೆ, ಅವರ ಮನವಿಯನ್ನು ಪರಿಗಣಿಸಿರಲಿಲ್ಲ ಎಂದು ವರದಿ ಹೇಳಿದೆ. ವಿಶ್ವಕಪ್‌ನಲ್ಲಿ ಆಡದೆ ಇದ್ದರೂ, ಒತ್ತಡಗಳು ಎದುರಾಗಿ ಎಬಿಡಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರೂ ವಿಶೇಷವಿಲ್ಲ. ಆದರೆ, ಆ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ನಿಯಮಾವಳಿಗಳಿಗೆ ವಿರುದ್ಧ

ನಿಯಮಾವಳಿಗಳಿಗೆ ವಿರುದ್ಧ

ಎಬಿ ಡಿವಿಲಿಯರ್ಸ್ ಅವರು ಇತ್ತೀಚಿನ ಕೆಲವು ತಿಂಗಳಿನಲ್ಲಿ ಯಾವುದೇ ದೇಸಿ ಅಥವಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ದಕ್ಷಿಣ ಆಫ್ರಿಕಾ ತಂಡದ ಆಯ್ಕೆ ಪ್ರಕ್ರಿಯೆ ನಿಯಮಗಳ ಪ್ರಕಾರ ಹೀಗೆ ಸುದೀರ್ಘ ಕಾಲದಿಂದ ದೇಶಿ ಅಥವಾ ಅಂತಾರಾಷ್ಟ್ರೀಯ ಪಂದ್ಯ ಆಡದೆ ಇರುವವರನ್ನು ತಂಡಕ್ಕೆ ಆಯ್ಕೆ ಮಾಡುವಂತಿಲ್ಲ.

ಪ್ರೌಢತೆಯ ಆಟದಿಂದ ಗೆಲುವು ತಂದ ರೋಹಿತ್ ನಿಜಕ್ಕೂ ಗ್ರೇಟ್!

ಅರ್ಹ ಆಟಗಾರರಿಗೆ ಅನ್ಯಾಯ

ಅರ್ಹ ಆಟಗಾರರಿಗೆ ಅನ್ಯಾಯ

ಅಲ್ಲದೆ, ಕಳೆದ ಕೆಲವು ತಿಂಗಳಿನಿಂದ ಉತ್ತಮವಾಗಿ ಆಡಿದ ಮಾನದಂಡದ ಆಧಾರದಲ್ಲಿ ತಂಡಕ್ಕೆ ಆಯ್ಕೆಯಾಗುವ ಅರ್ಹತೆ ಗಳಿಸಿರುವ ಆಟಗಾರರ ಬದಲು ಎಬಿಡಿ ಅವರನ್ನು ಆಯ್ಕೆ ಮಾಡುವುದು ನ್ಯಾಯೋಚಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದರಿಂದ ತಮ್ಮ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದ್ದರೂ ರಾಸಿ ವಾನ್ ಡೆರ್ ಡುಸೆನ್ ಅವರಂತಹ ಆಟಗಾರರು ಸ್ಥಾನ ಕಳೆದುಕೊಳ್ಳಬೇಕಾಗುತ್ತಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿವಿಲಿಯರ್ಸ್, ತಾವು ವಿಶ್ವಕಪ್ ಆಡಲು ಬಯಸಿದ್ದಾಗಿ, ಆದರೆ ಟೀಕೆಗಳ ಕಾರಣ ಅದನ್ನು ಕೈಬಿಟ್ಟಿದ್ದಾಗಿ ಹೇಳಿದ್ದರು.

ಟೀಕೆಗಳಿಂದಾಗಿ ನಿವೃತ್ತನಾದೆ

ಟೀಕೆಗಳಿಂದಾಗಿ ನಿವೃತ್ತನಾದೆ

'ನಾನು ವಿಶ್ವಕಪ್ ಆಡಲು ಇಚ್ಛಿಸಿದ್ದೆ. ಆದರೆ ಅದನ್ನು ತ್ಯಜಿಸಿ ನಿವೃತ್ತಿಯಾದೆ. ಅದು ತುಂಬಾ ಸೂಕ್ಷ್ಮವಾದ ಸನ್ನಿವೇಶ. ನನ್ನ ವೃತ್ತಿಜೀವನದ ಕೊನೆಯ ಮೂರು ವರ್ಷಗಳಲ್ಲಿ ನಾನು ಆಡುವಾಗ ಮತ್ತು ಆಡದೆ ಇದ್ದಾಗ ಬೇಕಾದಾಗ ಆಡುವ ಮತ್ತು ಬಿಡುವ ವ್ಯಕ್ತಿ ಎಂದು ಹಣೆಪಟ್ಟಿ ನೀಡಲಾಗಿತ್ತು. ಹೀಗಾಗಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದೆ. ನನ್ನ ನಿವೃತ್ತಿಯಲ್ಲಿ ಇದರ ಪಾತ್ರವೂ ಇದೆ. ಈಗ ನಾನು ಹೋಗಿ ಮತ್ತೆ ವಿಶ್ವಕಪ್ ಆಡುತ್ತೇನೆ ಎನ್ನುವುದು ಕಷ್ಟ. ಅದು ಮತ್ತೆ ಆಡುವ ಹಾಗೂ ಬಿಡುವ ವಿಚಾರವಾಗುತ್ತದೆ. ಆ ರೀತಿ ಮಾಡುವುದು ಅಹಂಕಾರ ಕೂಡ' ಎಂದು ಅವರು ಹೇಳಿದ್ದರು.

ಟ್ವಿಟ್ಟರ್‌ನಲ್ಲಿ ಎಬಿಡಿ ಪ್ರತಿಕ್ರಿಯೆ

ವಿಶ್ವಕಪ್‌ನಲ್ಲಿ ತಂಡವನ್ನು ಬೆಂಬಲಿಸುವುದರ ಬಗ್ಗೆ ನಾವೆಲ್ಲರೂ ಗಮನ ಹರಿಸುವುದು ಮುಖ್ಯವಾಗಿದೆ. ಇನ್ನೂ ಸಾಕಷ್ಟು ದೂರ ಹೋಗುವುದಿದೆ. ಹುಡುಗರು ಈ ದಾರಿಯಲ್ಲಿ ಸಮರ್ಥವಾಗಿ ಸಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ತಮ್ಮ ಕಮ್‌ಬ್ಯಾಕ್ ಕುರಿತ ವರದಿಗಳಿಗೆ ಎಬಿಡಿ ಪ್ರತಿಕ್ರಿಯೆ ನೀಡಿದ್ದಾರೆ.

English summary
ESPN Cricinfo reported that, Former South African Batsman Ab De Villiers made an offer to come back with World Cup, but it was rejected by the team management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X