ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ಗೆ ಆರ್ಥಿಕ ನೆರವು ನೀಡಲು ಸಿದ್ಧವಿದ್ದೇವೆ ಎಂದ ವಿಶ್ವಬ್ಯಾಂಕ್

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 25: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವ ಕಾರಣ ಸಂಕಷ್ಟದಲ್ಲಿ ಸಿಲುಕಿದೆ. ಆರ್ಥಿಕ ನೆರವು ನೀಡಲು ಸಿದ್ಧವಿದ್ದೇವೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಉಕ್ರೇನ್‌ನಲ್ಲಿ ರಷ್ಯಾ ದಾಳಿಯಿಂದಾಗುತ್ತಿರುವ ಹಿಂಸಾಚಾರ ಮತ್ತು ಜೀವಹಾನಿಗೆ ವಿಶ್ವ ಬ್ಯಾಂಕ್ ಆತಂಕಗೊಂಡಿದೆ. ಉಕ್ರೇನ್​, ವಿಶ್ವಬ್ಯಾಂಕ್​ನ ದೀರ್ಘಕಾಲದ ಪಾಲುದಾರ ಸದಸ್ಯ ರಾಷ್ಟ್ರವಾಗಿದೆ. ಈ ನಿರ್ಣಾಯಕ ಸಮಯದಲ್ಲಿ ಆ ದೇಶದ ಬೆಂಬಲವಾಗಿ ನಿಲ್ಲಲಾಗುವುದು ಎಂದು ವಿಶ್ವ ಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿಕೆ ನೀಡಿದ್ದಾರೆ.

ರಷ್ಯಾ ವಿರುದ್ಧದ ನಿರ್ಬಂಧಕ್ಕೆ ದಕ್ಷಿಣ ಕೊರಿಯಾ ಸಾಥ್ರಷ್ಯಾ ವಿರುದ್ಧದ ನಿರ್ಬಂಧಕ್ಕೆ ದಕ್ಷಿಣ ಕೊರಿಯಾ ಸಾಥ್

ಉಕ್ರೇನ್‌ನಲ್ಲಿನ ವಿನಾಶಕಾರಿ ಬೆಳವಣಿಗೆಗಳು ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಸೃಷ್ಟಿಸುತ್ತವೆ. ಇದನ್ನು ಭರಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

World Bank Ready To Provide Financial Aid To Ukraine

ರಷ್ಯಾ ಯುದ್ಧ ಘೋಷಿಸುವ ಮುನ್ನ ಉಕ್ರೇನ್​ ಅಧ್ಯಕ್ಷ ಜೆಲೆನ್​ಸ್ಕಿ ವಿಶ್ವಬ್ಯಾಂಕ್​ ಅಧ್ಯಕ್ಷ, ನಿರ್ದೇಶಕರನ್ನು ಭೇಟಿಯಾಗಿ ಒಂದು ವೇಳೆ ಯುದ್ಧ ನಡೆದಲ್ಲಿ ಆರ್ಥಿಕ ನೆರವು ನೀಡಬೇಕು ಎಂದು ಕೋರಿದ್ದರು.

ಉಕ್ರೇನ್​ ಮತ್ತು ರಷ್ಯಾ ಬಿಕ್ಕಟ್ಟಿನ ಮಧ್ಯೆ ಯಾರೂ ತಲೆದೂರಿಸಕೂಡದು ಎಂಬ ರಷ್ಯಾದ ಬೆದರಿಕೆಯ ಮಧ್ಯೆಯೂ ವಿಶ್ವಬ್ಯಾಂಕ್​ ದಾಳಿಯಿಂದ ತತ್ತರಿಸಿರುವ 'ಉಕ್ರೇನ್​ಗೆ ತಕ್ಷಣಕ್ಕೆ ಹಣಕಾಸಿನ ನೆರವು ನೀಡಲು ಸಿದ್ದ' ಎಂದು ಘೋಷಿಸಿದೆ.

ಉಕ್ರೇನ್​ಗೆ ತಕ್ಷಣದ ಆರ್ಥಿಕ ನೆರವು ಒದಗಿಸಲು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಪಾಲುದಾರ ದೇಶಗಳಿಗೆ ವಿಶ್ವಬ್ಯಾಂಕ್​ ಸಮೂಹವು ತ್ವರಿತವಾಗಿ ಹಣಕಾಸು ಸಹಾಯ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡಲು ಸಿದ್ಧ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ ತನ್ನ ದೇಶದ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಹೇಳಿದ್ದಾರೆ.

ಇನ್ನು ತನ್ನ ದೇಶದ ಮೇಲೆ ದಾಳಿ ಮಾಡಿದ್ದ ರಷ್ಯಾ ವಿರುದ್ಧ ಏಕಾಂಗಿಯಾಗಿ ಹೋರಾಡಲಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಹೇಳಿದ್ದಾರೆ. ಇತರೆ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿದರೂ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ವೊಲೊಡಿಮಿರ್ ಜೆಲೆನ್​ಸ್ಕಿ ತನ್ನ ಶತ್ರು ರಾಷ್ಟ್ರವನ್ನು ಒಂಟಿಯಾಗಿ ಎದುರಿಸಲಿದೆ ಎಂದಿದ್ದಾರೆ.

ಒಡೆಸಾ ಪ್ರದೇಶದ ಜ್ಮಿನಿ ದ್ವೀಪದಲ್ಲಿರುವ ಎಲ್ಲ ಭದ್ರತಾ ಪಡೆಯ ಸಿಬ್ಬಂದಿಯನ್ನು ರಷ್ಯಾ ಹೊಡೆದುರುಳಿಸಿದೆ. ಅಲ್ಲದೇ ಆ ಪ್ರದೇಶವನ್ನು ರಷ್ಯಾ ವಶಕ್ಕೆ ಪಡೆದಿದೆ. ಯುದ್ಧದಲ್ಲಿ ಮೃತಪಟ್ಟ ಸೈನಿಕರನ್ನು ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಹುತಾತ್ಮರು ಎಂದು ಕರೆದಿದ್ದಾರೆ.

Recommended Video

ಯುದ್ಧ ನಿಲ್ಲಿಸಿ ಎಂದ ಮೋದಿ ಮನವಿಗೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು? | Oneindia Kannada

ಈ ಬಗ್ಗೆ ಅವರು ಮಾತನಾಡಿರುವ ವಿಡಿಯೋದಲ್ಲಿ, ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅಮಾಯಕರ ಬಲಿ ತೆಗೆದುಕೊಳ್ಳುತ್ತಿದೆ. ಈವರೆಗೆ ಸೈನಿಕರು ಸೇರಿದಂತೆ 137 ಜನರು ಹತರಾಗಿದ್ದು, ಇನ್ನೂ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

English summary
The World Bank in its statement on Thursday, said that it is ready to provide immediate financial support to Ukraine amid the present political and military crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X