ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್ ಕುರಿತು ನೀವು ತಿಳಿದಿರಲೇಬೇಕಾದ 8 ಸಂಗತಿಗಳು

By Super Admin
|
Google Oneindia Kannada News

ಬೆಂಗಳೂರು, ಡಿಸೆಂಬರ್, 01 : ಇಂದು ವಿಶ್ವ ಏಡ್ಸ್ ದಿನಾಚರಣೆ. ವ್ಯಕ್ತಿಯ ಬದುಕಿಗೆ ಪೆಡಂಭೂತವಾಗಿ ಕಾಡುತ್ತಾ, ಜೀವವನ್ನೇ ಆಹುತಿ ತೆಗೆದುಕೊಳ್ಳುವ ಏಡ್ಸ್ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವುದೇ ವಿಶ್ವ ಏಡ್ಸ್ ದಿನದ ಪರಮೋಚ್ಛ ಧ್ಯೇಯ.

ಮಕ್ಕಳು, ಹದಿಹರೆಯದವರು, ವೃದ್ಧರು ಎಂಬ ಯಾವ ಭೇದವಿಲ್ಲದೇ, ಮಾನವನ ದೇಹಕ್ಕೆ ಒಕ್ಕರಿಸಿ ಆರೋಗ್ಯವನ್ನು ಹಿಂಡಿ ಹಿಪ್ಪೆಯಾಗಿಸಿ ಬಿಡುತ್ತದೆ ಈ ಮಹಾಮಾರಿ ಏಡ್ಸ್. ಮನುಕುಲದ ನೆಮ್ಮದಿ ಕೆಡಿಸುವ ಏಡ್ಸ್ ಬಗ್ಗೆ ಪ್ರಪಂಚದಾದ್ಯಂತ ಮುಂಜಾಗ್ರತಾ ಅಭಿಯಾನ ಕೈಗೊಂಡ ಪರಿಣಾಮ ಮೊದಲಿನಷ್ಟು ಅದರ ಕುರುಹು, ಛಾಯೆಗಳು ಇಲ್ಲದಿದ್ದರೂ ಇದು ಜನರನ್ನು ಬಿಟ್ಟು ಹೋಗಿಲ್ಲ ಎಂಬುದು ಮಾತ್ರ ಸತ್ಯ.[ಮನೆಯಲ್ಲೇ ಎಚ್ಐವಿ ಸೋಂಕು ಪರೀಕ್ಷೆ ಮಾಡಿಕೊಳ್ಳಿ]

ವರ್ಲ್ಡ್ ಹೆಲ್ತ್ ಆರ್ಗನೈಜೇಷನ್, ಯುನಿಸೆಫ್ (United Nations Children's fund) ಇನ್ನಿತರ ಆರೋಗ್ಯ ಸಂಸ್ಥೆಗಳು ಕೆಲವು ಅಧ್ಯಯನ ಕೈಗೊಂಡು ಏಡ್ಸ್ ರೋಗದ ಕುರಿತಾಗಿ 8 ಸಂಗತಿಗಳನ್ನು ತಿಳಿಸಿದೆ. ಈ 8 ಅಂಶಗಳು 2015ನೇ ಸಾಲಿನವರೆಗೂ ಏಡ್ಸ್ ರೋಗ ಕಡಿಮೆ ಆಗಿದೆಯೋ, ಇಲ್ಲವೋ, ಯಾರಲ್ಲಿ ಈ ಮಾರಿ ಹೆಚ್ಚಾಗಿ ಕಂಡು ಬರುತ್ತಿದೆ ಇನ್ನಿತರ ಅಂಶಗಳನ್ನು ತಿಳಿಸುತ್ತದೆ. ಏನಿದು ನಾವು ತಿಳಿದುಕೊಳ್ಳಬೇಕಾದ ಸಂಗತಿಗಳು?

2014ರಲ್ಲಿ ಎಷ್ಟು ಮಂದಿ ಏಡ್ಸ್ ಗೆ ಬಲಿ?

2014ರಲ್ಲಿ ಎಷ್ಟು ಮಂದಿ ಏಡ್ಸ್ ಗೆ ಬಲಿ?

* ಕಳೆದ ವರ್ಷ ಅಂದರೆ 2014ರಲ್ಲಿ ಪ್ರಪಂಚದಲ್ಲಿ 2 ಮಿಲಿಯನ್ ಮಂದಿ ಏಡ್ಸ್ ಗೆ ತುತ್ತಾಗಿದ್ದರು.

ಏಡ್ಸ್ ನಿಂದ ಇದುವರೆಗೂ ಸತ್ತವರೆಷ್ಡು?

ಏಡ್ಸ್ ನಿಂದ ಇದುವರೆಗೂ ಸತ್ತವರೆಷ್ಡು?

* ಸುಮಾರು 34 ಮಿಲಿಯನ್ ಮಂದಿ ಈ ರೋಗದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 2014ರಲ್ಲಿ 1.2 ಮಿಲಿಯನ್ ಜನರು ಏಡ್ಸ್ ನಿಂದ ಸತ್ತಿದ್ದಾರೆ.

ಯಾವ ವಯಸ್ಸಿನವರಲ್ಲಿ ಹೆಚ್ಚು?

ಯಾವ ವಯಸ್ಸಿನವರಲ್ಲಿ ಹೆಚ್ಚು?

* ಏಡ್ಸ್ ರೋಗದಿಂದ ಸಾವನ್ನಪ್ಪಿದ ವ್ಯಕ್ತಿಗಳ ಅಂಕಿ ಅಂಶ ತೆಗೆದುಕೊಳ್ಳುವುದಾದರೆ, ಹದಿಹರೆಯದವರೇ ಹೆಚ್ಚಾಗಿ ಈ ಜಾಲದಲ್ಲಿ ಸಿಕ್ಕಿ ಮೃತಪಟ್ಟಿದ್ದು, ಕಳೆದ 15 ವರ್ಷಕ್ಕೆ ಹೋಲಿಸಿದರೆ ಮೂರುಪಟ್ಟು ಹೆಚ್ಚಳವಾಗಿದೆ.

ಆಫ್ರಿಕಾದಲ್ಲಿ ಯುವಕರು ಸಾವನ್ನಪ್ಪಲು ಏನು ಕಾರಣ?

ಆಫ್ರಿಕಾದಲ್ಲಿ ಯುವಕರು ಸಾವನ್ನಪ್ಪಲು ಏನು ಕಾರಣ?

* ಆಫ್ರಿಕಾದಲ್ಲಿ ಯುವಕರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಏಡ್ಸ್ ರೋಗವೇ ಮೊದಲ ಕಾರಣವಾಗಿದೆ. ಜೊತೆಗೆ ಸುಮಾರು 15 ರಿಂದ 19 ವರ್ಷದೊಳಗಿನ ಮಕ್ಕಳ ಪೈಕಿ ಸುಮಾರು 7 ರಿಂದ 10 ಹುಡುಗಿಯರು ಈ ಸೋಂಕಿನಲ್ಲಿ ನರಳುತ್ತಿದ್ದಾರೆ.

ಏಡ್ಸ್ ರೋಗ ಪತ್ತೆಯ ಪರೀಕ್ಷೆಗೆ ಒಳಪಟ್ಟವರೆಷ್ಟು?

ಏಡ್ಸ್ ರೋಗ ಪತ್ತೆಯ ಪರೀಕ್ಷೆಗೆ ಒಳಪಟ್ಟವರೆಷ್ಟು?

2015 ನೇ ವರ್ಷದಲ್ಲಿ ಸುಮಾರು 15,000 ಮಿಲಿಯನ್ ಮಂದಿ ಏಡ್ಸ್ ರೋಗ ಪತ್ತೆ ಹಚ್ಚುವ ಆಂಟಿರೆಟ್ರೋವೈರಲ್ ಥೆರಪಿಗೆ ಒಳಗಾಗಿದ್ದಾರೆ. ಈ ಸಂಖ್ಯೆ 2001 ರಲ್ಲಿ ಕೇವಲ ಒಂದು ಮಿಲಿಯನ್ ಮಾತ್ರ ಇತ್ತು.[ದೇಶದ ದಕ್ಷಿಣದ ಜನರಲ್ಲೇ ಏಡ್ಸ್ ಸೋಂಕು ಅಧಿಕ]

ಏಡ್ಸ್ ರೋಗದ ಪರೀಕ್ಷೆ ಬಗ್ಗೆ ಎಷ್ಟು ಮಂದಿಗೆ ತಿಳಿದಿದೆ?

ಏಡ್ಸ್ ರೋಗದ ಪರೀಕ್ಷೆ ಬಗ್ಗೆ ಎಷ್ಟು ಮಂದಿಗೆ ತಿಳಿದಿದೆ?

* ಎಚ್ಐವಿ ಪತ್ತೆ ಹಚ್ಚುವ ಹಲವು ಪರೀಕ್ಷೆಗಳ ಕುರಿತಾಗಿ ಜನರಿಗೆ ಯಾವುದೇ ಸಮಗ್ರ ಮಾಹಿತಿ ದೊರೆತಿಲ್ಲ. ಇಡೀ ಜಗತ್ತಿನಲ್ಲಿ ಕೇವಲ ಶೇ.51 ಮಂದಿಗೆ ಮಾತ್ರ ಏಡ್ಸ್ ಕಂಡು ಹಿಡಿಯುವ ಪರೀಕ್ಷೆ ಬಗ್ಗೆ ತಿಳಿದಿದೆ.

ಎಷ್ಟು ಮಂದಿ ಏಡ್ಸ್ ನಿಂದ ಮುಕ್ತರಾಗಿದ್ದಾರೆ?

ಎಷ್ಟು ಮಂದಿ ಏಡ್ಸ್ ನಿಂದ ಮುಕ್ತರಾಗಿದ್ದಾರೆ?

* ಪ್ರಪಂಚದಾದ್ಯಂತ ಸುಮಾರು 30 ಮಿಲಿಯನ್ ಜನರಲ್ಲಿ ಏಡ್ಸ್ ರೋಗ ನಿವಾರಣೆಯಾಗಿದ್ದು, 2000 ದಲ್ಲಿ ಸುಮಾರು 8 ಮಿಲಿಯನ್ ಮಂದಿ ಏಡ್ಸ್ ಗೆ ಬಲಿಯಾಗಿದ್ದಾರೆ

ಕ್ಯೂಬಾಕ್ಕೆ ದೊರೆತ ಹೆಗ್ಗಳಿಕೆ ಏನು?

ಕ್ಯೂಬಾಕ್ಕೆ ದೊರೆತ ಹೆಗ್ಗಳಿಕೆ ಏನು?

* ಕ್ಯೂಬಾ ದೇಶದಲ್ಲಿ ತಾಯಿಯಿಂದ ಮಗುವಿಗೆ ಏಡ್ಸ್ ರೋಗ ಹರಡುವುದಿಲ್ಲ. ಈ ಹೆಗ್ಗಳಿಕೆ ಪಡೆದ ಪ್ರಪಂಚದ ಮೊದಲ ರಾಷ್ಟ್ರ ಇದಾಗಿದೆ.

English summary
December 1 is the World Aids Day. Millions of people fight against of AIDS. Some world health departments means World Health Organization, UNICEF released 9 facts of about AIDS in 2015 data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X