ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲಂತೂ ಕೂರುವುದಿಲ್ಲ: ಅಫ್ಘಾನ್ ಮಹಿಳೆಯರ ದೃಢ ನಿರ್ಧಾರ

|
Google Oneindia Kannada News

ಅಫ್ಘಾನಿಸ್ತಾನದಲ್ಲಿ ತನ್ನ ಕೆಲಸಗಾರರ ಪರವಾಗಿ ಅಫ್ಘಾನ್ ಮಹಿಳಾ ಉದ್ಯಮಿಯೊಬ್ಬರು ಧ್ವನಿ ಎತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಹಿಳೆಯರು ಮನೆಯಲ್ಲಿ ಕೂರುವುದಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್ ಮಧ್ಯದಿಂದ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಮಹಿಳೆಯರು ಯಾವುದೇ ಉದ್ಯೋಗ ಮಾಡಬಾರದು, ಮಕ್ಕಳನ್ನು ಹೆರುವುದು ಮಾತ್ರ ಅವರ ಕೆಲಸ ಎಂದು ಆದೇಶ ಮಾಡಿದ್ದರು.

1996 ರಿಂದ 2001ರವರೆಗೆ ಮಹಿಳೆಯರು ಶಾಲೆ ಅಥವಾ ಕೆಲಸಕ್ಕೆ ಹೋಗುವುದಕ್ಕೆ ಅವಕಾಶ ಇರಲಿಲ್ಲ. ಹೊರಗೆ ಹೋಗುವುದಾದರೆ ಮನೆಯ ಒಬ್ಬ ಪುರುಷ ಸದಸ್ಯನ ಜತೆಯಲ್ಲಿಯೇ ಹೋಗಬೇಕು ಎನ್ನುವ ಕಟ್ಟುಪಾಡಿತ್ತು, ಇಂತಹ ಕ್ರೂರ ಆಡಳಿತಕ್ಕೆ ಮಹಿಳೆಯರು ಹೆದರಿ ಹೋಗಿದ್ದರು. ಇದೀಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಅಫ್ಘಾನಿಸ್ತಾನದಲ್ಲಿ ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ನಿರ್ಬಂಧಅಫ್ಘಾನಿಸ್ತಾನದಲ್ಲಿ ಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ನಿರ್ಬಂಧ

ನಾವು ತಾಲಿಬಾನಿಗಳ ಕಿವಿ ವರೆಗೂ ತಲುಪುವವರೆಗೂ ಘರ್ಜಿಸುತ್ತೇವೆ ಎನ್ನುತ್ತಾರೆ ಶಫೀಕ್ ಅಟ್ಟಾಯ್. ಅವರು 2007ರಲ್ಲಿ ಸಾಫ್ರಾನ್ ಕಂಪನಿಯನ್ನು ಸ್ಥಾಪನೆ ಮಾಡಿದ್ದರು. ಮುಂದೆ ಏನಾದರೂ ಆಗಲಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಏಕೆಂದರೆ ತುಂಬಾ ಕಷ್ಟ ಪಟ್ಟು ಇಷ್ಟು ವರ್ಷ ಕೆಲಸ ಮಾಡಿದ್ದೇವೆ.

Wont Sit At Home: Saffron Business Powered By Women Looks Taliban In Eye

ಅಟ್ಟಾಯಿ ಅವರ ಸಾಫ್ರಾನ್ ಕಂಪನಿಯು ಪ್ರಪಂಚದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳನ್ನು ಉತ್ಪಾದಿಸುತ್ತದೆ. ಪ್ಯಾಕೇಜಿಂಗ್ ಮಾಡುತ್ತದೆ, ರಫ್ತು ಮಾಡುತ್ತದೆ. 25 ಹೆಕ್ಟೇರ್ ಅಂದರೆ 60 ಎಕರೆ ಪ್ರದೇಶದಲ್ಲಿ ಕಂಪನಿ ಇದ್ದು, ಸಾವಿರಕ್ಕೂ ಹೆಚ್ಚು ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ವಕ್ತಾರ ಜೆಕ್ರುಲ್ಲಾ ಹಾಶಮಿ, ಮಹಿಳೆಯರು ಮಂತ್ರಿಗಳಾಗಬಾರದು. ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ಹೇಳಿದ್ದಾರೆ.

ಈ ಮೂಲಕ ತಾಲಿಬಾನಿಗಳು ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಕಾರ್ಯ ಮುಂದುವರೆಸಿದ್ದಾರೆ. ಮಹಿಳೆಯರನ್ನು ಮಂತ್ರಿ ಆಗಬಾರದು. ಅವರಿಗೆ ಮಹತ್ವದ ಜವಾಬ್ದಾರಿ ಕೊಟ್ಟರೆ ಅವರ ಮೇಲೆ ಮತ್ತಷ್ಟು ಬಾರ ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕು ಅಷ್ಟೇ ಎಂದು ಮಾಧ್ಯಮ ಸಂದರ್ಶನವದಲ್ಲಿ ಹಾಶಮಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕೆಲ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು ಅವರೆಲ್ಲಾ ಇಡೀ ಮಹಿಳಾ ಸಮುದಾಯವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಮೆರಿಕಾ ಭದ್ರತಾ ಮಂಡಳಿಯ ಭಯೋತ್ಪಾದಕ ಕಪ್ಪುಪಟ್ಟಿಯಲ್ಲಿ ಅಘ್ಘಾನಿಸ್ತಾನದ ಹಾಲಿ ಪ್ರಧಾನಿ ಮುಲ್ಲಾ ಹಸನ್ ಮತ್ತು ಅವರ ಇಬ್ಬರು ನಿಯೋಗಿಗಳು ಸೇರಿದಂತೆ ತಾಲಿಬಾನ್ ನ ಹಂಗಾಮಿ ಸರ್ಕಾರದ ಕನಿಷ್ಠ 14 ಸದಸ್ಯರು ಇದ್ದಾರೆ.

ಇನ್ನು ಜಾಗತಿಕ ಭಯೋತ್ಪಾದಕ ಸಿರಾಜುದ್ದೀನ್ ಹಕ್ಕಾನಿ ತಲೆ ಮೇಲೆ 10 ಮಿಲಿಯನ್ ಡಾಲರ್ ಬಹುಮಾನವಿದ್ದು ಆತ ಆಂತರಿಕ ಮಂತ್ರಿಯಾಗಿದ್ದಾನೆ.

English summary
An Afghan business leader who employs hundreds of women on her saffron fields has vowed to speak up for the rights of her workers, and "not remain silent" under Taliban rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X