ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ ಡ್ರೈವಿಂಗ್ ನಲ್ಲಿ ಪುರುಷರಿಗಿಂತ ಮಹಿಳೆಯರೇ ಸೂಪರ್ ಗುರೂ!

|
Google Oneindia Kannada News

ಲಂಡನ್, ಏಪ್ರಿಲ್.09: ಹೆಣ್ಣಕ್ಳೇ ಸ್ಟ್ರಾಂಗು ಗುರೂ ಅನ್ನೋ ಯೋಗರಾಜ್ ಭಟ್ಟರ ಹಾಡು ಕೇಳಿದ್ದೀರಿ ಅಲ್ಲವೇ. ಈ ಮಾತನ್ನು ಅಧ್ಯಯನವೊಂದು ಸತ್ಯ ಅಂತಾ ಪ್ರೂವ್ ಮಾಡಿದೆ. ಎಲ್ಲ ರಂಗಗಳಲ್ಲೂ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ.

Recommended Video

ಗಂಗೆ ಈಗ ಎಷ್ಟು ಪವಿತ್ರ ಮತ್ತು ಸ್ವಚ್ಛವಾಗಿದ್ದಾಳೆ ನೋಡಿ ಪಾವನರಾಗಿ | Ganga River | So Neat & Clean & Pure

ಭಾರತವಷ್ಟೇ ಅಲ್ಲದೇ ಎಲ್ಲ ರಾಷ್ಟ್ರಗಳಲ್ಲೂ ಮಹಿಳೆಯರು ಎಲ್ಲ ವಲಯಗಳಲ್ಲೂ ಸಾಧನೆ ತೋರುತ್ತಿದ್ದಾರೆ. ವಾಹನ ಚಾಲನೆ ವಿಚಾರ ಬಂದಾಗ ಅತಿಹೆಚ್ಚು ಪ್ರಮಾಣದಲ್ಲಿ ಜನರು ಪುರುಷರನ್ನೇ ಹೆಚ್ಚಾಗಿ ನಂಬುತ್ತಾರೆ. ಆದರೆ ಪುರುಷರಿಗಿಂತ ಮಹಿಳಾ ಚಾಲಕರೇ ಹೆಚ್ಚು ಸುರಕ್ಷಿತ ಎಂದು ಬಿಎಂಜೆ ಜರ್ನಲ್ ವರದಿ ಮಾಡಿದೆ.

ಚಿತ್ರಗಳಲ್ಲಿ: ಮೋಡದ ಮರೆಯಲ್ಲಿ ಕಾಣಿಸಿದನೇ ಸೂಪರ್ ಚಂದಿರಚಿತ್ರಗಳಲ್ಲಿ: ಮೋಡದ ಮರೆಯಲ್ಲಿ ಕಾಣಿಸಿದನೇ ಸೂಪರ್ ಚಂದಿರ

ರಸ್ತೆ ಸಾರಿಗೆ ಸುರಕ್ಷತೆಗೆ ಸಂಬಂಧಿಸಿದ ನಡೆಸಿದ ಅಧ್ಯಯನದಲ್ಲಿ ಮಹಿಳೆಯರಿಗೂ ಸಮಾನ ಉದ್ಯೋಗ ನೀಡುವ ಬಗ್ಗೆ ಶಿಫಾರಸ್ಸು ಮಾಡಲಾಗಿದೆ. ಏಕೆಂದರೆ ಪುರುಷರು ಮಹಿಳೆಯರಿಗೆ ಹೋಲಿಸಿದರೆ ಅಪಾಯಕಾರಿ ಚಾಲನೆಗೆ ಮುಂದಾಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Womens Are Safe And Best For Car Driving Compare To Mens

ಚಾಲನಾ ವಲಯದಲ್ಲೂ ಲಿಂಗ ಸಮಾನತೆಗೆ ಶಿಫಾರಸ್ಸು

ಚಾಲನಾ ವಲಯದಲ್ಲೂ ಲಿಂಗ ಸಮಾನತೆಗೆ ಶಿಫಾರಸ್ಸು

ದೇಶದ ಚಾಲನಾ ವಲಯದಲ್ಲೂ ಲಿಂಗ ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಾಸನಗಳನ್ನು ರೂಪಿಸುವಂತೆ ಅಧ್ಯಯನದ ವರದಿಯು ಶಿಫಾರಸ್ಸು ಮಾಡಿದೆ. ರಸ್ತೆ ಸಾರಿಗೆ ಸುರಕ್ಷತೆಯಲ್ಲಿ ಮಹಿಳೆಯರೇ ಹೆಚ್ಚು ಜಾಗರೂಕತೆ ವಹಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಂಡನ್ ನಲ್ಲಿರುವ ವೆಸ್ಟ್ ಮಿನಿಸ್ಟರ್ ವಿವಿ ಅಧ್ಯಯನ

ಲಂಡನ್ ನಲ್ಲಿರುವ ವೆಸ್ಟ್ ಮಿನಿಸ್ಟರ್ ವಿವಿ ಅಧ್ಯಯನ

ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು 2005 ರಿಂದ 2015ರವರೆಗೆ ನಾಲ್ಕು ವಿಭಾಗಗಳ ಅಂಕಿ-ಅಂಶಗಳನ್ನು ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. ರಸ್ತೆ ಸಂಚಾರ ದಟ್ಟಣೆ ಅಂಕಿ-ಅಂಶ, ರಸ್ತೆ ಅಪಘಾತಗಳ ಅಂಕಿ-ಅಂಶ, ರಾಷ್ಟ್ರೀಯ ಸಂಚಾರಿ ಸಮೀಕ್ಷಾ ಅಂಕಿ-ಅಂಶ ಮತ್ತು ರಾಷ್ಟ್ರೀಯ ಜನಸಂಖ್ಯಾ ಅಂಕಿ-ಅಂಶಗಳನ್ನು ಸಂಶೋಧಕರು ಪರಿಶೀಲಿಸಿ ವರದಿಯನ್ನು ತಯಾರಿಸಿದ್ದಾರೆ.

ಕಾರು ಮತ್ತು ಟ್ಯಾಕ್ಸಿಗಳ ಅಪಘಾತವೇ ಹೆಚ್ಚು

ಕಾರು ಮತ್ತು ಟ್ಯಾಕ್ಸಿಗಳ ಅಪಘಾತವೇ ಹೆಚ್ಚು

ಇನ್ನು, ಸಂಶೋಧಕರು ತಮ್ಮ ಅಧ್ಯಯನದಲ್ಲಿ ದ್ವಿಚಕ್ರ ವಾಹನ, ಕಾರು, ಟ್ಯಾಕ್ಸಿ, ವ್ಯಾನ್, ಬಸ್ ಮತ್ತು ಲಾರಿಗಳು 1 ಕೋಟಿ ಕಿಲೋ ಮೀಟರ್ ಸಂಚರಿಸಿದ ಅಂತರದ ಅಂಕಿ-ಅಂಶ ಮತ್ತು ರಸ್ತೆಯ ಮಾದರಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ವೇಳೆ ಕಾರು ಮತ್ತು ಟ್ಯಾಕ್ಸಿಗಳು ಅತಿಹೆಚ್ಚು ಅಪಘಾತಕ್ಕೆ ಒಳಗಾಗಿರುವುದು ಪತ್ತೆಯಾಗಿದೆ.

ದೂರದ ಪ್ರಯಾಣದಲ್ಲಿ ಲಾರಿಗಳೇ ಅಪಾಯ

ದೂರದ ಪ್ರಯಾಣದಲ್ಲಿ ಲಾರಿಗಳೇ ಅಪಾಯ

ರಸ್ತೆ ಸಂಚಾರದ ಅಂತರವನ್ನು ಪರಿಶೀಲಿಸಿ ನೋಡಿದಾಗ 6ರಲ್ಲಿ ಒಬ್ಬರು ಲಾರಿ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಉದಾಹರಣೆಗೆ 10 ಕಿಲೋ ಮೀಟರ್ ಅಂತರ ಸಂಚರಿಸಿದ ವಾಹನಗಳ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದರೆ ಈ ಪೈಕಿ ಒಬ್ಬರು ಲಾರಿ ಅಪಘಾತದಲ್ಲಿ ಸಾವನ್ನಪ್ಪಿರುತ್ತಾರೆ. ಇದರ ಐದು ಪಟ್ಟು ಮಂದಿ ಅಂದರೆ ಐವರು ಕಾರು ಅಪಘಾತದಲ್ಲಿ ಪ್ರಾಣ ಬಿಟ್ಟಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಹಿಳಾ ಚಾಲಕರೇ ಹೆಚ್ಚು ಸುರಕ್ಷಿತರು ಏಕೆ?

ಮಹಿಳಾ ಚಾಲಕರೇ ಹೆಚ್ಚು ಸುರಕ್ಷಿತರು ಏಕೆ?

ನಗರ ಪ್ರದೇಶಗಳಲ್ಲಿ ಬೈಕ್ ಚಾಲನೆಯಲ್ಲೂ ಅತಿಹೆಚ್ಚು ಮಂದಿ ಪ್ರಾಣ ಬಿಟ್ಟಿರುತ್ತಾರೆ. ಈ ಅಂಕಿ ಅಂಶಗಳನ್ನು ಅಧ್ಯಯನ ನಡೆಸಿದ ಸಂಶೋಧಕರು ವರದಿಯಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ. ಉದಾಹರಣೆಗೆ 30 ಕಾರು ಮತ್ತು ಟ್ಯಾಕ್ಸ್ ಅಪಘಾತದಲ್ಲಿ 10 ಮಹಿಳಾ ಚಾಲಕರಿದ್ದರೆ 20 ಮಂದಿ ಪುರುಷ ಚಾಲಕರು ಆಗಿರುತ್ತಾರೆ. ಈ ಸಂಖ್ಯೆ ಲಾರಿ ಅಪಘಾತಗಳಲ್ಲಿ ನಾಲ್ಕು ಪಟ್ಟು ಇರುತ್ತದೆ. ಇನ್ನು, ದ್ವಿಚಕ್ರ ವಾಹನ ಅಪಘಾತದಲ್ಲಿ ಮಹಿಳೆಯರ 10 ಪಟ್ಟು ಪುರುಷರು ಅಪಘಾತ ಎಸಗಿರುತ್ತಾರೆ ಎಂದು ವರದಿ ತಿಳಿಸಿದೆ.

English summary
Womens Are Safe And Best For Car Driving Compare To Mens. University of Westminster Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X