ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರವೇ ಕೊಟ್ಟ ಆಫರ್: 10 ಮಕ್ಕಳನ್ನು ಹೆರುವವರಿಗೆ 13 ಲಕ್ಷ ರೂಪಾಯಿ ಬಹುಮಾನ!

|
Google Oneindia Kannada News

ಮಾಸ್ಕೋ, ಆಗಸ್ಟ್ 18: ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದಕ್ಕೆ ಶತಪ್ರಯತ್ನಗಳನ್ನು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ದೇಶದ ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ.

ರಷ್ಯಾದಲ್ಲಿ ಜನಸಂಖ್ಯೆ ಪ್ರಮಾಣ ತಗ್ಗುತ್ತಿದೆ. ರಾಷ್ಟ್ರದಲ್ಲಿ ಇಳಿಕೆ ಆಗುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವೇ ಬಹುಮಾನದ ಕೊಡುಗೆಯನ್ನು ಘೋಷಿಸಿದೆ. ಈ ಬಗ್ಗೆ ಆಗಸ್ಟ್ 16ರಂದು ಅಧ್ಯಕ್ಷ ಪುಟಿನ್ ಘೋಷಣೆ ಹೊರಡಿಸಿದ್ದಾರೆ.

Landmark Deal: ಈ ರಷ್ಯಾ-ಉಕ್ರೇನ್ ಒಪ್ಪಂದಕ್ಕೆ ಆ ವಿಶ್ವಸಂಸ್ಥೆ ಮಧ್ಯಸ್ಥಿಕೆLandmark Deal: ಈ ರಷ್ಯಾ-ಉಕ್ರೇನ್ ಒಪ್ಪಂದಕ್ಕೆ ಆ ವಿಶ್ವಸಂಸ್ಥೆ ಮಧ್ಯಸ್ಥಿಕೆ

ಸೋವಿಯತ್ ಯುಗದಲ್ಲಿ ಜಾರಿಯಲ್ಲಿದ್ದ ಮದರ್ ಹಿರೋಯಿನ್ ಪ್ರಶಸ್ತಿಯನ್ನು ಪುನಾರಂಭಿಸುವುದಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧರಿಸಿದ್ದಾರೆ. ಹಾಗಾದರೆ ಈ ಮದರ್ ಹಿರೋಯಿನ್ ಪ್ರಶಸ್ತಿ ಇತಿಹಾಸವೇನು?, ಈ ಪ್ರಶಸ್ತಿ ವಿಜೇತ ಮಹಿಳೆಯರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ ಸಿಗಲಿದೆ?, ಮದರ್ ಹಿರೋಯಿನ್ ಹಾಗೂ ರಷ್ಯಾದ ಪಾಪ್ಯುಲೇಷನ್ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ರಷ್ಯಾದಲ್ಲಿ ಸೋವಿಯತ್ ಕಾಲದ ನೀತಿ

ರಷ್ಯಾದಲ್ಲಿ ಸೋವಿಯತ್ ಕಾಲದ ನೀತಿ

ಎರಡನೇ ಜಾಗತಿಕ ಮಹಾಯುದ್ಧದ ಸಮಯದಲ್ಲಿ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಕ್ರಮದಿಂದ ಜನಸಂಖ್ಯೆಯಲ್ಲಿ ತೀವ್ರ ನಷ್ಟವಾಗಿತ್ತು. ಈ ಹಿನ್ನೆಲೆ 1944ರಲ್ಲಿ ಗೌರವ ಪ್ರಶಸ್ತಿಯನ್ನು ಮೊದಲು ಪ್ರಾರಂಭಿಸಲಾಗಿತ್ತು. ಆದರೆ 1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ ಮದರ್ ಹಿರೋಯಿನ್ ಅನ್ನು ಹೋಲುವ ಪ್ರಶಸ್ತಿ ವಿತರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ ಅದೇ ನೀತಿಯನ್ನು ಮುಂದುವರಿಸುವುದಕ್ಕೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಾಗಿದ್ದಾರೆ.

ಮದರ್ ಹಿರೋಯಿನ್ ಪ್ರಶಸ್ತಿ ಹಿನ್ನೆಲೆ

ಮದರ್ ಹಿರೋಯಿನ್ ಪ್ರಶಸ್ತಿ ಹಿನ್ನೆಲೆ

ರಷ್ಯಾದಲ್ಲಿ ಈಗ ಘೋಷಿಸಿರುವ 'ಮದರ್ ಹೀರೋಯಿನ್' ಹೆಸರಿನ ಪ್ರಶಸ್ತಿಯು ಸೋವಿಯತ್ ಯುಗದ ಶೀರ್ಷಿಕೆಯನ್ನೇ ಹೋಲುತ್ತದೆ. 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಮತ್ತು ಬೆಳೆಸುವ ಮಹಿಳೆಯರಿಗೆ ಈ ಪ್ರಶಸ್ತಿ ಅನ್ನು ನೀಡಲಾಗುತ್ತದೆ. ಕಳೆದ ಸೋಮವಾರ ಅಂಥದ್ದೊಂದು ಯೋಜನೆಗೆ ವ್ಲಾಡಿಮಿರ್ ಪುಟಿನ್ ಅಂಕಿತ ಹಾಕಿದ್ದಾರೆ. ಅದರ ಪ್ರಕಾರ, ಯಾವ ಮಹಿಳೆಯು 10 ಮಕ್ಕಳನ್ನು ಹೊಂದಿರುತ್ತಾರೋ ಅಂಥ ಮಹಿಳೆಯರಿಗೆ 13 ಲಕ್ಷ ರೂಪಾಯಿ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. 10ನೇ ಮಗುವಿಗೆ ಜನ್ಮ ನೀಡಿ ಒಂದು ವರ್ಷ ಪೂರೈಸುತ್ತಿದ್ದಂತೆ ಬಹುಮಾನವನ್ನು ನೀಡಲಾಗುತ್ತದೆ.

ಮತ್ಯಾರಿಗೆ ನೀಡಲಾಗುವುದು ಮದರ್ ಹಿರೋಯಿನ್ ಪ್ರಶಸ್ತಿ?

ಮತ್ಯಾರಿಗೆ ನೀಡಲಾಗುವುದು ಮದರ್ ಹಿರೋಯಿನ್ ಪ್ರಶಸ್ತಿ?

ರಷ್ಯಾ ನಡೆೆಸುವ ಯುದ್ಧದಲ್ಲಿ ಅಥವಾ ಭಯೋತ್ಪಾದಕ ಕೃತ್ಯ ಹಾಗೂ ತುರ್ತು ಪರಿಸ್ಥಿತಿಯ ಪರಿಣಾಮದಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿಯರಿಗೂ ಈ ಮದರ್ ಹಿರೋಯಿನ್ ಪ್ರಶಸ್ತಿಯನ್ನು ನೀಡಲಾಗುವುದು. ದೇಶಕ್ಕಾಗಿ ದುಡಿದ ಮಕ್ಕಳ ತಾಯಂದಿರನ್ನು ಆ ಮೂಲಕ ಗೌರವಿಸಲಾಗುತ್ತದೆ. ಮದರ್ ಹಿರೋಯಿನ್ ಪ್ರಶಸ್ತಿಯು ಹೀರೋ ಆಫ್ ರಷ್ಯಾ ಮತ್ತು ಹೀರೋ ಆಫ್ ಲೇಬರ್‌ನಂತಹ ಉನ್ನತ ಶ್ರೇಣಿಯ ರಾಜ್ಯ ಆದೇಶಗಳಿಗೆ ಸರಿಸಮಾನವಾಗಿದೆ ಎಂದು ಪರಿಗಣಿಸಲಾಗುತ್ತದೆ.

ರಷ್ಯಾದ ಜನಸಂಖ್ಯೆ ಬಿಕ್ಕಟ್ಟು ಎದುರಿಸಲು ಕ್ರಮ

ರಷ್ಯಾದ ಜನಸಂಖ್ಯೆ ಬಿಕ್ಕಟ್ಟು ಎದುರಿಸಲು ಕ್ರಮ

ರಷ್ಯಾದ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ 'ಪ್ರಮುಖ' ಕ್ರಮಗಳಿಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ಜೂನ್ 1ರಂದು ರಷ್ಯಾದ ಮಕ್ಕಳ ದಿನಾಚರಣೆಯಂದು ಮದರ್ ಹೀರೋಯಿನ್ ಬಹುಮಾನವನ್ನು ನೀಡುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ದೊಡ್ಡ ಕುಟುಂಬಗಳ ಮೂಲಕ ಸಮಾಜವನ್ನು ಕ್ರಮೇಣ ಪುನರುಜ್ಜೀವನಗೊಳಿಸುತ್ತೇವೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

English summary
Women who give birth to 10 children will get 13 Lakh rupees Prize: President putin plans to boost Russia Population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X