ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ

|
Google Oneindia Kannada News

ಇಸ್ಲಮಾಬಾದ್‌, ಜೂ.22: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಮಹಿಳೆಯರ ಉಡುಗೆಯೇ ಕಾರಣ ಎಂದು ಮತ್ತೆ ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Recommended Video

IMRAN KHAN- ಪಾಕಿಸ್ತಾನ್ ಪ್ರಧಾನಿ ಹೇಳಿರೋ ಮಾತು ದೇಶದಲ್ಲಿ ಸಂಚಲನ ಮೂಡಿಸಿದೆ! | Oneindia Kannada

"ಆಕ್ಸಿಯೋಸ್ ಆನ್ ಎಚ್‌ಬಿಒ" ಗೆ ನೀಡಿದ ಸಂದರ್ಶನದಲ್ಲಿ, ಮಾತನಾಡಿದ ಇಮ್ರಾನ್ ಖಾನ್, "ಒಬ್ಬ ಮಹಿಳೆ ಚೂರು ಬಟ್ಟೆಯನ್ನು ಧರಿಸಿದರೆ, ರೋಬೋಟ್‌ಗಳಲ್ಲದಿದ್ದರೆ ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಇದು ಕೇವಲ ಸಾಮಾನ್ಯ ಜ್ಞಾನವಾಗಿದೆ," ಎಂದು ತಾವು ಈ ಹಿಂದೆ ಮಾಡಿಕೊಂಡಿದ್ದ ಪ್ರತಿಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಉತ್ತರಿಸುವ ಸಂದರ್ಭ ಈ ಮಾತುಗಳನ್ನು ಇಮ್ರಾನ್‌ ಹೇಳಿದ್ದಾರೆ.

ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ: ಇಮ್ರಾನ್ ಖಾನ್ ವಿವಾದಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ: ಇಮ್ರಾನ್ ಖಾನ್ ವಿವಾದ

ಪ್ರಸ್ತುತ ಇಮ್ರಾನ್ ಖಾನ್ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ದೇಶದ ಪ್ರಧಾನಿ ಈ ರೀತಿಯ ಗೊಡ್ಡು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷದ ನಾಯಕರು ಮತ್ತು ಪತ್ರಕರ್ತರು ಇಮ್ರಾನ್ ಖಾನ್‌ರನ್ನು ಟೀಕಿಸಿದ್ದಾರೆ.

 'ಸ್ಪಷ್ಟವಾಗಿ ಇಮ್ರಾನ್ ಖಾನ್‌ಗೆ ಅನಾರೋಗ್ಯವಿದೆ' : ರೀಮಾ ಒಮರ್ ಟೀಕೆ

'ಸ್ಪಷ್ಟವಾಗಿ ಇಮ್ರಾನ್ ಖಾನ್‌ಗೆ ಅನಾರೋಗ್ಯವಿದೆ' : ರೀಮಾ ಒಮರ್ ಟೀಕೆ

ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರರಾದ ರೀಮಾ ಒಮರ್ ಟ್ವೀಟ್ ಮಾಡಿ, "ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳ ಬಗ್ಗೆ ಪಿಎಂ ಇಮ್ರಾನ್ ಖಾನ್ ತನ್ನ ದೂಷಣೆಯನ್ನು ಪುನರಾವರ್ತಿಸುವುದನ್ನು ನೋಡುವಾಗ ನಿರಾಶೆಯಾಗಿದೆ ಹಾಗೂ ಸ್ಪಷ್ಟವಾಗಿ ಇಮ್ರಾನ್ ಖಾನ್‌ಗೆ ಅನಾರೋಗ್ಯವಿದೆ," ಎಂದು ಕಿಡಿಕಾರಿದ್ದಾರೆ.

ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿ: ಭುಟ್ಟೊಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿ: ಭುಟ್ಟೊ

 ವಕ್ತಾರ ಡಾ.ಅರ್ಸ್ಲಾನ್ ಖಾಲಿದ್ ಸಮರ್ಥನೆ

ವಕ್ತಾರ ಡಾ.ಅರ್ಸ್ಲಾನ್ ಖಾಲಿದ್ ಸಮರ್ಥನೆ

ಆದಾಗ್ಯೂ, ಡಿಜಿಟಲ್ ಮಾಧ್ಯಮದಲ್ಲಿ ಪ್ರಧಾನ ಮಂತ್ರಿಯ ವಕ್ತಾರ ಡಾ.ಅರ್ಸ್ಲಾನ್ ಖಾಲಿದ್ ಇದನ್ನು, "ಆಯ್ದ ಮತ್ತು ಸಂದರ್ಭದ ಟ್ವೀಟಿಂಗ್" ಎಂದು ಹೇಳಿದ್ದಾರೆ. "ನಾವು ಯಾವ ರೀತಿಯ ಸಮಾಜದಲ್ಲಿ ವಾಸಿಸುತ್ತಿದ್ದೇವೆ ಮತ್ತು ಸಮಾಜದಲ್ಲಿನ ಲೈಂಗಿಕ ಹತಾಶೆಯ ಬಗ್ಗೆ ಇಮ್ರಾನ್‌ ನಿಜವಾಗಿ ಹೇಳಿದ್ದರ ಭಾಗದಲ್ಲಿ ಕೆಲವೊಂದನ್ನು ಆಯ್ಕೆ ಮಾಡುವುದು ಹಾಗೂ ಅಗತ್ಯವಿಲ್ಲದ್ದನ್ನು ಟ್ವೀಟ್‌ ಮಾಡಲಾಗಿದೆ," ಎಂದು ದೂರಿದ್ದಾರೆ. ಲೈವ್ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ, ಪಿಎಂ ಇಮ್ರಾನ್ ಖಾನ್, "ಪರ್ದಾದ ಈ ಸಂಪೂರ್ಣ ಪರಿಕಲ್ಪನೆಯು ಉನ್ಮಾದವನ್ನು ತಪ್ಪಿಸುವುದು. ಅದನ್ನು ತಪ್ಪಿಸುವ ಇಚ್ಛಾಶಕ್ತಿಯು ಎಲ್ಲರಲ್ಲೂ ಇಲ್ಲ," ಎಂದು ಹೇಳಿದರು.

 ಇಮ್ರಾನ್‌ನ ಈ ಹೇಳಿಕೆ ಇದೇ ಮೊದಲಲ್ಲ

ಇಮ್ರಾನ್‌ನ ಈ ಹೇಳಿಕೆ ಇದೇ ಮೊದಲಲ್ಲ

ಇನ್ನು ಇಮ್ರಾನ್‌ ಖಾನ್‌ ಈ ಹೇಳಿಕೆಯನ್ನು ನೀಡಿರುವುದು ಇದೇ ಮೊದಲಲ್ಲ. ಎಪ್ರಿಲ್‌ನಲ್ಲಿಯೂ ಇಮ್ರಾನ್‌ ಇದೇ ಹೇಳಿಕೆ ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾವಿರಾರು ಜನರು ಈ ಹೇಳಿಕೆ ವಿರುದ್ದ ಸಹಿ ಅಭಿಯಾನ ನಡೆಸಿದ್ದರು. ಹಲವಾರು ನೆಟ್ಟಿಗರು, ''ಅತ್ಯಾಚಾರಕ್ಕೆ ಮಹಿಳೆಯ ಬಟ್ಟೆ ಕಾರಣವೆಂದಾದರೆ, ಸಣ್ಣ ಪುಣಾಣಿಗಳ ಯಾವ ಬಟ್ಟೆ ಅತ್ಯಾಚಾರಕ್ಕೆ ಕಾರಣವಾಗು‌ತ್ತದೆ. ವೃದ್ದೆಯರ ಯಾವ ಬಟ್ಟೆ ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಓರ್ವ ಪ್ರಧಾನಿಯಾಗಿ ನಿಮ್ಮ ಹೇಳಿಕೆ ನಿಮ್ಮ ಸ್ಥಾನದ ಗೌರವಕ್ಕೆ ನೀವು ತಂದ ಧಕ್ಕೆ,'' ಎಂದು ಪ್ರಧಾನಿ ಇಮ್ರಾನ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್‌ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಟ್ವಿಟ್ಟರ್‌ನಲ್ಲಿ ಕುರಾನ್‌ನ ನುಡಿಯೊಂದನ್ನು ಉಲ್ಲೇಖಿಸಿದ್ದರು. ''ಪುರುಷರು ತಮ್ಮ ಕಣ್ಣುಗಳನ್ನು ನಿರ್ಬಂಧಿಸಲು ಮತ್ತು ತಮ್ಮ ಖಾಸಗಿ ಅಂಗಗಳನ್ನು ಕಾಪಾಡಲು ಹೇಳಿ. ಜವಾಬ್ದಾರಿ ಇರುವುದು ಪುರುಷರ ಮೇಲೆ,'' ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದ್ದರು.

ಮರಣದಂಡನೆ ವಿರುದ್ಧ ಕುಲಭೂಷಣ್ ಜಾಧವ್‌ ಮೇಲ್ಮನವಿ ಸಲ್ಲಿಸಲು ಪಾಕ್ ಸಂಸತ್ ಅನುಮೋದನೆಮರಣದಂಡನೆ ವಿರುದ್ಧ ಕುಲಭೂಷಣ್ ಜಾಧವ್‌ ಮೇಲ್ಮನವಿ ಸಲ್ಲಿಸಲು ಪಾಕ್ ಸಂಸತ್ ಅನುಮೋದನೆ

 ಪಾಕಿಸ್ತಾನದಲ್ಲಿ ಶೇಕಡ 0.3 ರಷ್ಟು ಅತ್ಯಾಚಾರ ಆರೋಪಿಗಳಿಗೆ ಮಾತ್ರ ಈವರೆಗೆ ಶಿಕ್ಷೆ!

ಪಾಕಿಸ್ತಾನದಲ್ಲಿ ಶೇಕಡ 0.3 ರಷ್ಟು ಅತ್ಯಾಚಾರ ಆರೋಪಿಗಳಿಗೆ ಮಾತ್ರ ಈವರೆಗೆ ಶಿಕ್ಷೆ!

ಪಾಕಿಸ್ತಾನದಲ್ಲಿ ಪ್ರತಿ 24 ಗಂಟೆಗೊಮ್ಮೆ ಕನಿಷ್ಠ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಎಂದು ಪಾಕಿಸ್ತಾನ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಕಳೆದ ಆರು ವರ್ಷಗಳಲ್ಲಿ ಇಂತಹ 22,000 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಪಾಕಿಸ್ತಾನದಲ್ಲಿ ಅತ್ಯಾಚಾರ ಅಪರಾಧಿಗಳ ಶಿಕ್ಷೆಯ ಪ್ರಮಾಣವು ಶೇಕಡ 0.3 ರಷ್ಟಿದೆ. ಹಲವಾರು ಮಂದಿ ಈ ಆರೋಪಿಗಳಿಗೆ ಸರಿಯಾಗಿ ಶಿಕ್ಷೆ ದೊರೆಯದಿರುವುದೇ ಈ ಅತ್ಯಾಚಾರ ಪ್ರಕಣಗಳ ಹಿಂದಿನ ಕಾರಣೆ ಎಂದು ಪ್ರತಿಪಾದಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ 2020 ರ ಅತ್ಯಾಚಾರ ವಿರೋಧಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಅತ್ಯಾಚಾರ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲು ಶಾಸನವು ಆದೇಶಿಸುತ್ತದೆ.

(ಒನ್‌ಇಂಡಿಯಾ ಸುದ್ದಿ)

English summary
Pakistan Prime Minister Imran Khan has drawn intense criticism after he reiterated that a rise in sexual assault cases in the country was linked to how women dress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X