ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರು ಇರುವುದು ಮಂತ್ರಿ ಆಗುವುದಕ್ಕಲ್ಲ, ಜನ್ಮ ನೀಡುವುದಕ್ಕೆ: ಅಫ್ಘಾನ್ ಸಚಿವನ ನುಡಿಮುತ್ತು!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 10: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಕ್ರೂರತೆಯು ಎಷ್ಟಿದೆ ಎಂಬುದನ್ನು ಹೊಸ ಸರ್ಕಾರದ ಸಚಿವರು ಹೆಜ್ಜೆ-ಹೆಜ್ಜೆಗೂ ಸಾಬೀತುಪಡಿಸುತ್ತಿದ್ದಾರೆ. "ಮಹಿಳೆಯರು ಸಚಿವರಾಗಲು ಸಾಧ್ಯವಿಲ್ಲ, ಅವರು ಜನ್ಮ ನೀಡುವುದಕ್ಕಷ್ಟೇ ಇರುವುದು ಎಂದು ತಾಲಿಬಾನ್ ವಕ್ತಾರರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

1990ರಲ್ಲಿ ಅಫ್ಘಾನಿಸ್ತಾನದಲ್ಲಿ ನೀಡಿದ ಕ್ರೂರ ಆಡಳಿತದಿಂದ ಹೊರತಾಗಿ ಸುಧಾರಿತ ಆಡಳಿತ ನೀಡುತ್ತೇವೆ. ಮಾನವ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದ ತಾಲಿಬಾನ್ ವಕ್ತಾರರ ಮಾತುಗಳು ಶುದ್ಧ ಸುಳ್ಳು ಎನ್ನುವುದನ್ನು ಇತ್ತೀಚಿಗೆ ಸಚಿವರು ನೀಡುತ್ತಿರುವ ಹೇಳಿಕೆಗಳಿಂದ ಖಾತ್ರಿಯಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳಾ ಪರ ವರದಿ ಪ್ರಸಾರಕ್ಕೆ ಇದೆಂಥಾ ಶಿಕ್ಷೆ!?ಅಫ್ಘಾನಿಸ್ತಾನದಲ್ಲಿ ಮಹಿಳಾ ಪರ ವರದಿ ಪ್ರಸಾರಕ್ಕೆ ಇದೆಂಥಾ ಶಿಕ್ಷೆ!?

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರದಲ್ಲಿ ಮಹಿಳೆಯರಿಗೆ ಅವಕಾಶ ನೀಡದ ಬಗ್ಗೆ ತಾಲಿಬಾನ್ ವಕ್ತಾರ ಸೈಯದ್ ಜೆಕ್ರುಲ್ಲಾ ಹಶಿಮಿ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

Women cant be ministers, they should give birth says Taliban spokesperson

ತಾಲಿಬಾನ್ ಸಚಿವರು ನೀಡಿದ ಹೇಳಿಕೆ ಏನು?:

"ಮಹಿಳೆಯರು ಸಚಿವರಾಗುವಂತಿಲ್ಲ, ನೀವು ಅವಳ ನೆತ್ತಿ ಮೇಲೆ ಏನನ್ನಾದರೂ ಹೊರಸಿದರೆ ಅದನ್ನು ಅವರು ಹೊತ್ತುಕೊಳ್ಳುವ ಶಕ್ತಿ ಇರುವುದಿಲ್ಲ. ಸಂಪುಟದಲ್ಲಿ ಇರುವುದು ಮಹಿಳೆಯರಿಗೆ ಅತ್ಯವಶ್ಯಕವಲ್ಲ, ಅವರು ಜನ್ಮ ನೀಡಬೇಕು. ಮಹಿಳಾ ಪ್ರತಿಭಟನಾಕಾರರು ಇಡೀ ಅಫ್ಘಾನಿಸ್ತಾನದ ಮಹಿಳೆಯರನ್ನು ಪ್ರತಿನಿಧಿಸುವಂತಿಲ್ಲ," ಎಂದು ಟೋಲೋ ಸುದ್ದಿ ಸಂಸ್ಥೆಗೆ ಹಶಿಮಿ ಹೇಳಿದ್ದಾರೆ.

ಈ ವೇಳೆ ಸಂದರ್ಶಕರು ಮಹಿಳೆಯರು ಸಮಾಜದಲ್ಲಿ ಅರ್ಧದಷ್ಟು ಪಾಲು ಹೊಂದಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಶಿಮಿ, "ಆದರೆ ಮಹಿಳೆಯರನ್ನು ಸಮಾಜದಲ್ಲಿ ಅರ್ಧ ಪಾಲು ಎಂದು ನಾವು ಪರಿಗಣಿಸುವಂತಿಲ್ಲ. ಮಹಿಳೆಯರು ಸಮಾಜದಲ್ಲಿ ಯಾವ ರೀತಿಯಲ್ಲಿ ಅರ್ಧದಷ್ಟಿದ್ದಾರೆ? ಅರ್ಧ ಎಂಬುದನ್ನು ಇಲ್ಲಿ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ನೀವು ಅವಳ ಹಕ್ಕುಗಳನ್ನು ಉಲ್ಲಂಘಿಸಿದರೆ, ಸಮಸ್ಯೆಯಲ್ಲ. ಕಳೆದ 20 ವರ್ಷಗಳಲ್ಲಿ, ಈ ಮಾಧ್ಯಮಗಳು, ಯುಎಸ್ ಮತ್ತು ಅಫ್ಘಾನಿಸ್ತಾನದಲ್ಲಿನ ಅದರ ಕೈಗೊಂಬೆ ಸರ್ಕಾರಗಳು ಏನೇ ಹೇಳಿದರೂ, ಅದು ಕಚೇರಿಗಳಲ್ಲಿ ವೇಶ್ಯಾವಾಟಿಕೆಯಲ್ಲದೆ ಮತ್ತೇನು?," ಎಂದು ಉತ್ತರಿಸಿದ್ದಾರೆ.

ನೀವು ಎಲ್ಲಾ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಸಾಧ್ಯವಿಲ್ಲ, ಎಂದು ಸಂದರ್ಶಕರು ಮಧ್ಯಪ್ರವೇಶಿಸಿದರು. "ನಾನು ಎಲ್ಲ ಮಹಿಳೆಯರ ಬಗ್ಗೆ ಮಾತನ್ನು ಹೇಳುತ್ತಿಲ್ಲ. ನಾಲ್ಕು ಮಹಿಳೆಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರೆ ಅವರು ಇಡೀ ಅಫ್ಘಾನಿಸ್ತಾನದ ಮಹಿಳೆಯರನ್ನು ಪ್ರತಿಬಿಂಬಿಸುವುದಿಲ್ಲ. ಅಫ್ಘಾನಿಸ್ತಾನದ ಮಹಿಳೆಯರೇ ಅಫ್ಘಾನಿಸ್ತಾನದ ಜನರಿಗೆ ಜನ್ಮ ನೀಡುತ್ತಾರೆ ಮತ್ತು ಇಸ್ಲಾಮಿಕ್ ನೈತಿಕತೆಯ ಬಗ್ಗೆ ಅವರಿಗೆ ಶಿಕ್ಷಣ ನೀಡುತ್ತಾರೆ," ಎಂದು ವಕ್ತಾರರು ಹೇಳಿದ್ದಾರೆ.

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ

ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ. 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್

ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದಾರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ. ಈ 33 ಸಚಿವರಲ್ಲಿ 17 ಮಂದಿ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡವರು ಎಂದು ಗೊತ್ತಾಗಿದೆ.

English summary
The comments by Taliban spokesperson Sayed Zekrullah Hashimi new Afghan government missing women ministers, have been widely shared on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X