ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿಯ ಜೀವವನ್ನೇ ತೆಗೆದ 'ಆಂಗ್ರಿ ಎಮೋಜಿ', ಏನಿದು ಘಟನೆ?

|
Google Oneindia Kannada News

ಲಂಡನ್, ಸೆಪ್ಟೆಂಬರ್ 20: ಮೊಬೈಲ್‌ನಲ್ಲಿರುವ 'ಎಮೋಜಿ' ಯುವತಿಯ ಜೀವವನ್ನೇ ಬಲಿಪಡೆದಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ.

ತಾಯಿ ತನ್ನ ಮಕ್ಕಳ ಖುಷಿಗೋಸ್ಕರ ಒಬ್ಬತಿ ಏನನ್ನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಆದರೆ ಇಲ್ಲೊಬ್ಬ ತಾಯಿಗೆ ತಾನು ಕಳಿಸುವ ಈ ಎಮೋಜಿಯಿಂದ ಮಗಳ ಸಾವನ್ನು ನೋಡಬೇಕಾಗುತ್ತದೆ ಎಂದು ಕಲ್ಪಿಸಿಕೊಂಡಿರಲಿಲ್ಲ.

ಇಂಗ್ಲೆಂಡಿನ ಒಬ್ಬ ಮಹಿಳೆ ತನ್ನ ತಾಯಿಯಿಂದ ಬಂದ ಸಿಟ್ಟಿನ ಎಮೋಜಿಯನ್ನು ನೋಡಿ ಇಹಲೋಕ ತ್ಯಜಿಸಿದ್ದಾಳೆ. ಹೆತ್ತ ತಾಯಿ ಇಲ್ಲಿಯವರೆಗೆ ನೀಡಿದ್ದ ಮಮತೆ, ವಾತ್ಸಲ್ಯವನ್ನೇ ಮರೆತು ಕೇವಲ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಮಹತ್ವ ನೀಡಿದ್ದಾಳೆ.

Woman Whose Mother Accidentally Sent Her Angry Emojis

ಇಗ್ಲೆಂಡಿ 33 ವರ್ಷದ ಶಬೀನಾ ಮಿಯಾ, ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿಸಾಯಂಕಾಲ ವೀಕ್ಷಿಸಿದ್ದ ಸರ್ಕಸ್ ನ ಕೆಲವೊಂದು ವಿಡಿಯೋಗಳನ್ನು ಹಾಕಿದ್ದಳು. ಆಕೆಯ ತಾಯಿ ಏಂಜೆಲಾ ಮಿಯಾ,ಈ ವಿಡಿಯೋಗಳಿಗೆ ಪ್ರತ್ಯುತ್ತರವಾಗಿ ಲೈಕ್ ಬಟನ್ ಒತ್ತುವ ಬದಲು, ತನ್ನ ಐ ಪ್ಯಾಡ್‌ನ ದೋಷದಿಂದಾಗಿ ನೂರಾರು ಸಿಟ್ಟಿನ ಇಮೋಜಿಗಳನ್ನು ಕಳುಹಿಸಿದ್ದರು.

ಈ ಪ್ರತಿಕ್ರಿಯೆಯಿಂದ ಅಸಮಾಧಾನಗೊಂಡ ಶಬೀನಾ ತನ್ನ ತಾಯಿಯ ಅಕೌಂಟನ್ನೇ ಬ್ಲಾಕ್ ಮಾಡಿದಳು. ಜೊತೆಗೆ ಅಮ್ಮೊಂದಿಗೆ ಮಾತನಾಡುವುದಕ್ಕೂ ನಿರಾಕರಿಸಿದಳು. ಏಂಜೆಲಾ ಮಿಯಾ ಮಗಳೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅದು ವಾದಕ್ಕೆ ತಿರುಗಿತು. ಮರುದಿನ ಬೆಳಗ್ಗೆ ಏಂಜೆಲಾಗೆ ಶಬೀನಾ ಶವವಾಗಿ ಸಿಕ್ಕಿದ್ದಾರೆ.

ಮರಣೋತ್ತರ ಪರೀಕ್ಷೆಗಳಿಂದ ಶಬೀನಾ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮಗಳು ಖಿನ್ನತೆ ಮತ್ತು ಮಧುಮೇಹದಿಂದ ಬಳಲುತ್ತಿದ್ದಳು ಎಂದು ತಾಯಿ ಏಂಜೆಲಾ ತಿಳಿಸಿದ್ದಾರೆ.

English summary
A woman who was battling severe anxiety died from heart failure in a drug related death, an inquest heard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X