• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರ ಘಟನೆ: ಹೃದಯಾಘಾತದಿಂದ ಮಹಿಳಾ ಅಪರಾಧಿ ಸತ್ತರೂ ಗಲ್ಲುಶಿಕ್ಷೆ ನಿಲ್ಲಿಸಲಿಲ್ಲ!

|
Google Oneindia Kannada News

ಟೆಹರಾನ್, ಫೆಬ್ರವರಿ 24: ಸಾಮಾನ್ಯವಾಗಿ ಗಲ್ಲುಶಿಕ್ಷೆ ಜಾರಿಗೊಳಿಸುವ ಮುನ್ನ ಅಪರಾಧಿಯ ಆರೋಗ್ಯ ಚೆನ್ನಾಗಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಅವರ ಕೊನೆಯ ಆಸೆ ಏನೆಂದು ತಿಳಿದು ಅದನ್ನು ಈಡೇರಿಸಲು ಪ್ರಯತ್ನಿಸಲಾಗುತ್ತದೆ. ಆದರೆ ಇರಾನ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿ ಗಲ್ಲಿಗೇರಬೇಕಿದ್ದ ಮಹಿಳಾ ಕೈದಿ ಶಿಕ್ಷೆ ಜಾರಿಗೂ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಆದರೂ ಗಲ್ಲುಶಿಕ್ಷೆ ಜಾರಿಯಾಗಿದೆ!

ಇರಾನ್‌ನ ಬೇಹುಗಾರಿಕಾ ಅಧಿಕಾರಿಯಾಗಿದ್ದ ಪತಿ ಅಲಿರೆಜಾ ಜಮಾನಿ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜಹ್ರಾ ಇಸ್ಮೈಲಿ ಎಂಬಾಕೆಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು. ತನಗೆ ಹಾಗೂ ಮಗಳಿಗೆ ಪತಿ ತೀವ್ರ ಕಿರುಕುಳ ನೀಡುತ್ತಿದ್ದರಿಂದ ಅದನ್ನು ಸಹಿಸಿಕೊಳ್ಳಲಾರದೆ ಆಕೆ, ಪತಿಯನ್ನು ಕೊಲೆ ಮಾಡಿದ್ದಳು.

 ಸ್ವಾತಂತ್ರ್ಯಾನಂತರ ಗಲ್ಲಿಗೇರಲಿರುವ ಮೊದಲ ಮಹಿಳಾ ಕೈದಿ; ಶಬನಂ ಹಿಂದಿನ ಕಥೆಯೇನು? ಸ್ವಾತಂತ್ರ್ಯಾನಂತರ ಗಲ್ಲಿಗೇರಲಿರುವ ಮೊದಲ ಮಹಿಳಾ ಕೈದಿ; ಶಬನಂ ಹಿಂದಿನ ಕಥೆಯೇನು?

ಎರಡು ಮಕ್ಕಳ ತಾಯಿ ಜಹ್ರಾಳನ್ನು ಇರಾನ್ ರಾಜಧಾನಿ ಟೆಹರಾನ್‌ನಿಂದ 20 ಮೈಲಿ ದೂರವಿರುವ ಕರಾಜ್ ಪಟ್ಟಣದ ರಜೈ ಶಹರ್ ಕಾರಾಗೃಹ ಎಂಬ ನಟೋರಿಯಸ್ ಜೈಲಿನಲ್ಲಿ ನೇಣಿಗೇರಿಸಬೇಕಿತ್ತು. ಆದರೆ ಆಕೆಯ ಮರಣದಂಡನೆ ಜಾರಿಯಾಗುವ ಮುನ್ನವೇ ಆಕೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಳು.

ಕಣ್ಣಮುಂದೆಯೇ 16 ಮಂದಿಗೆ ಗಲ್ಲು

ಕಣ್ಣಮುಂದೆಯೇ 16 ಮಂದಿಗೆ ಗಲ್ಲು

ಈ ಜೈಲಿನಲ್ಲಿ ಅನೇಕರಿಗೆ ಗಲ್ಲುಶಿಕ್ಷೆ ಜಾರಿಯಾಗುತ್ತಿತ್ತು. ನೇಣುಗಂಬದ ಎದುರು ಸುಮಾರು 16 ಮಂದಿ ಪುರುಷ ಅಪರಾಧಿಗಳು ಗಲ್ಲಿಗೇರಲು ಸರದಿಯಲ್ಲಿ ನಿಂತಿದ್ದರು. ತನ್ನ ಕಣ್ಣೆದುರೇ ಕೈದಿಗಳು ಕುಣಿಕೆಗೆ ಕೊರಳೊಡ್ಡಿ ವಿಲವಿಲ ಒದ್ದಾಡಿ ಸಾಯುವುದರನ್ನು ಕಂಡು ಬೆದರಿದ ಜಹ್ರಾ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ.

ಸೇಡು ತೀರಿಸಿಕೊಂಡ ಅಪರಾಧಿಯ ಅತ್ತೆ

ಸೇಡು ತೀರಿಸಿಕೊಂಡ ಅಪರಾಧಿಯ ಅತ್ತೆ

'ಆಕೆ ಸತ್ತಿರುವುದು ಖಚಿತವಾದರೂ ಜೈಲಿನ ಅಧಿಕಾರಿಗಳು ಗಲ್ಲಿಗೇರಿಸುವ ಶಿಕ್ಷೆಯ ತೀರ್ಪನ್ನು ಮಾತ್ರ ಜಾರಿಗೊಳಿಸಲೇಬೇಕೆಂದು ಆಕೆಯ ದೇಹವನ್ನು ವಧಾಸ್ಥಾನಕ್ಕೆ ಹೊತ್ತು ತಂದಿದ್ದಾರೆ. ಬಳಿಕ ನೇಣಿಗೇರಿಸಿದ್ದಾರೆ. ಅವರು ಆಕೆಯ ಜೀವರಹಿತ ದೇಹವನ್ನು ನೇಣಿಗೇರಿಸಿದರು. ಆಕೆಯನ್ನು ನೇಣಿಗೆ ಏರಿಸಲು ಬಳಸಿದ್ದ ಕುರ್ಚಿಯನ್ನು ಒದೆಯುವ ಮೂಲಕ ಕೋಪ ತಣಿಸಿಕೊಳ್ಳುವ ಆಕೆಯ ಪತಿಯ ತಾಯಿಯ ಹಕ್ಕನ್ನು ಈಡೇರಿಸಲಾಗಿದೆ' ಎಂದು ಜಹ್ರಾ ಪರ ವಕೀಲರು ತಿಳಿಸಿದ್ದಾರೆ.

ಮಾನವಹಕ್ಕುಗಳ ಸಂಘಟನೆಯಗಳ ಖಂಡನೆ

ಮಾನವಹಕ್ಕುಗಳ ಸಂಘಟನೆಯಗಳ ಖಂಡನೆ

ಅಪರಾಧಿ ಹೃದಯಾಘಾತದಿಂದ ಸತ್ತಿರುವುದು ಖಚಿತವಾಗಿದ್ದರೂ ನೇಣಿಗೇರಿಸಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ. ಈ ಕೃತ್ಯ ನಿಜಕ್ಕೂ ಅತ್ಯಂತ ಹೇಯವಾಗಿದೆ ಎಂದು ಮಾನವಹಕ್ಕುಗಳ ಕಾರ್ಯಕರ್ತರು ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದಾರೆ.

ಚಿಕ್ಕಮಕ್ಕಳಿಗೂ ಗಲ್ಲು

ಚಿಕ್ಕಮಕ್ಕಳಿಗೂ ಗಲ್ಲು

ಖಿಸಾಸ್ ಷರಿಯಾ ಕಾನೂನು (ಕಣ್ಣಿಗೆ ಕಣ್ಣು) ಪ್ರಕಾರ ಸಂತ್ರಸ್ತರು ಅಥವಾ ಸಂತ್ರಸ್ತರ ಕುಟುಂಬವರಿಗೆ ನ್ಯಾಯಕ್ಕಾಗಿ ಪ್ರತೀಕಾರ ತೆಗೆದುಕೊಳ್ಳುವ ಹಕ್ಕಿದೆ. ಒಂದು ದಿನದಲ್ಲಿ ಒಮ್ಮೆಲೆ 17 ಮಂದಿಯನ್ನು ಮರಣದಂಡನೆಗೆ ಒಳಪಡಿಸುವ ಸಾಮೂಹಿಕ ಗಲ್ಲುಶಿಕ್ಷೆ ಇರಾನ್‌ನಲ್ಲಿ ಹೊಸತಲ್ಲ. ಗಲ್ಲುಶಿಕ್ಷೆ ಜಾರಿಯಲ್ಲಿ ಚೀನಾ ನಂತರದ ಸ್ಥಾನದಲ್ಲಿ ಇರಾನ್ ಇದೆ. ಕೇವಲ 12 ವರ್ಷದ ಪುಟ್ಟ ಮಕ್ಕಳನ್ನೂ ಗಲ್ಲುಶಿಕ್ಷೆಗೆ ಗುರಿಪಡಿಸಿದ ಉದಾಹರಣೆಗಳಿವೆ. ಸಲಿಂಗಕಾಮ, ವಿವಾಹೇತರ ಲೈಂಗಿಕ ಸಂಬಂಧ, ಮಾದಕವಸ್ತು ಸಾಗಾಣಿಕೆ, ಆಲ್ಕೋಹಾಲ್ ಸೇವನೆಯ ಅಪರಾಧಗಳು ಕೂಡ ಗಲ್ಲುಶಿಕ್ಷೆಗೆ ಅರ್ಹವಾಗುತ್ತವೆ.

English summary
A Iranian woman who was convicted of killing her husband was hanged despite died by heart attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X