ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಸ್ಥಳದಲ್ಲೇ ಗುಂಡು ಹಾರಿಸಿ ಪತ್ರಕರ್ತೆ ಮೀನಾ ಹತ್ಯೆ

|
Google Oneindia Kannada News

ಕಾಬೂಲ್, ಮೇ 12: 'ನನಗೆ ಜೀವ ಬೆದರಿಕೆ ಇದೆ' ಎಂದು ಪತ್ರಕರ್ತೆ, ರಾಜಕೀಯ ಸಲಹೆಗಾರ್ತಿ ಮೀನಾ ಮಂಗಲ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದರು. ಆದರೆ, ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಕಾಬೂಲಿನ ಆಗ್ನೇಯ ಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಹಾಡಹಗಲೇ ಮೀನಾ ಮಂಗಲ್ ಅವರ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಬಾಲಾಕೋಟ್ ನಲ್ಲಿ ಸತ್ತ ಉಗ್ರರ ಸಂಖ್ಯೆ 130ರಿಂದ 170 ಲೆಕ್ಕ ತೆರೆದಿಟ್ಟ ಇಟಲಿ ಪತ್ರಕರ್ತೆ ಮರೀನೋಬಾಲಾಕೋಟ್ ನಲ್ಲಿ ಸತ್ತ ಉಗ್ರರ ಸಂಖ್ಯೆ 130ರಿಂದ 170 ಲೆಕ್ಕ ತೆರೆದಿಟ್ಟ ಇಟಲಿ ಪತ್ರಕರ್ತೆ ಮರೀನೋ

ಮೀನಾ ಮಂಗಲ್ ಸ್ಥಳೀಯ ಟಿವಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆಫ್ಘಾನಿಸ್ತಾನ ಸಂಸತ್ತಿನಲ್ಲಿ ಸಾಂಸ್ಕೃತಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Woman journalist and political adviser shot dead in Kabul

ತಮ್ಮ ಜೀವಕ್ಕೆ ಅಪಾಯವಿದೆ, ರಕ್ಷಣೆ ಬೇಕು ಎಂದು ಮೇ 03ರಂದು ಮೀನಾ ಕೋರಿದ್ದರು. ಆದರೆ, ಸರಿಯಾದ ಭದ್ರತೆ ಸಿಕ್ಕಿರಲಿಲ್ಲ ಎಂದು ಅಫ್ಘಾನಿಸ್ತಾನದ ಮಾನವ ಹಕ್ಕುಗಳ ವಕೀಲರು, ಮಹಿಳಾ ಹಕ್ಕುಗಳ ಅಭಿಯಾನ ನಡೆಸಿರುವ ವಝ್ಮಾ ಫ್ರೊಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮೀನಾ ಅವರನ್ನು ಕಿಡ್ನಾಪ್ ಮಾಡಿದ್ದ ಗುಂಪಿನಿಂದಲೇ ಅವರ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೀನಾ ಅವರ ತಾಯಿ ಕೂಡಾ ಇದೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದ ಪಾಷ್ತೋ ಭಾಷೆಯ ಸುದ್ದಿ ವಾಹಿನಿ ತೊಲೋ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಷಂಶಾದ್ ಟಿವಿಯಲ್ಲೂ ಇದ್ದರು. ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು.

English summary
Afghan woman journalist and political adviser Mina Mangal has been gunned down in Kabul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X