• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ರಾನ್ಸ್ ಚರ್ಚ್ ಬಳಿ ದಾಳಿಕೋರನಿಂದ ಮಹಿಳೆಯ ಶಿರಚ್ಛೇದ

|

ನೈಸ್, ಅಕ್ಟೋಬರ್ 29: ಫ್ರಾನ್ಸ್‌ನ ನೈಸ್‌ ಚರ್ಚ್ ಬಳಿ ದುಷ್ಕರ್ಮಿಗಳು ಮಹಿಳೆಯ ಶಿರಚ್ಛೇದ ಮಾಡಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಭಯೋತ್ಪಾದಕರ ಕೃತ್ಯ ಎಂದು ಹೇಳಲಾಗುತ್ತಿದೆ. ಮೃಯರ್ ಕ್ರಿಶ್ಚಿಯನ್ ಎಟ್ರೋಸಿ ಅವರು ನೀಡಿರುವ ಮಾಹಿತಿ ಪ್ರಕಾರ ನಗರದ ನೊಟ್ರೆ ಡೇಮ್ ಚರ್ಚ್ ಬಳಿ ಘಟನೆ ನಡೆದಿದೆ, ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Fact Check: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಮೇಲೆ ಮೊಟ್ಟೆ ಎಸೆದಿದ್ದು ನಿಜವೇ?

ಒಟ್ಟು ಮೂರು ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ.ಮಹಿಳೆಯೊಬ್ಬರ ತಲೆಯನ್ನು ಕತ್ತರಿಸಲಾಗಿದೆ. ಈ ದಾಳಿಯ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸ್ಥಳವು ನಗರದ ಪ್ರಮುಖ ಶಾಪಿಂಗ್ ಮಾರ್ಗವಾದ ನೈಸ್‌ನ ಜೀನ್ ಮೆಡಿಸಿನ್ ಅವೆನ್ಯೂದಲ್ಲಿದೆ. ಪೊಲೀಸರು ಚರ್ಚ್ ಸುತ್ತ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ನೈಸ್ ದಾಳಿ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಕೆಲವು ದಿನಗಳ ಹಿಂದೆ ಶಾಲೆಯಲ್ಲಿ ಪ್ರೊಫೆಟ್ ಮೊಹಮ್ಮದ್ ಕುರಿತು ವ್ಯಂಗ್ಯ ಚಿತ್ರ ಚಿತ್ರಿಸಿದ್ದಕ್ಕೆ ಶಿಕ್ಷಕರೊಬ್ಬರ ಶಿರಚ್ಛೇದ ಮಾಡಲಾಗಿತ್ತು.

ಹಾಗೆಯೇ ಕಳೆದ ಕೆಲವು ಸಮಯದ ಹಿಂದೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೊನ್ ಕೂಡ ಪ್ರೊ.ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು.

English summary
A woman was beheaded by an attacker with a knife who also killed two other people at a church in the French city of Nice on Thursday, police said, in an incident the city's mayor described as terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X