ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲು, ಮಳೆ, ಚಳಿ ಕೊರೊನಾ ವೈರಸ್‌ ಮೇಲೆ ಪರಿಣಾಮ ಬೀರದು

|
Google Oneindia Kannada News

ಬೆಂಗಳೂರು, ಮೇ 9: ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಇದ್ಯಾವುದೂ ಕೂಡಕೊವಿಡ್ 19 ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೆನಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಜರ್ನಲ್‌ ಈ ಸಂಶೋಧನಾ ವರದಿ ಬಿತ್ತರಿಸಿದೆ.

ಕೊವಿಡ್ ಮಳೆಗಾಲ, ಚಳಿಗಾಲದಲ್ಲಿ ತೀವ್ರವಾಗುತ್ತದೆ, ಬೇಸಗೆಯಲ್ಲಿ ದುರ್ಬಲವಾಗುತ್ತದೆ ಎಂಬ ವಾದ ಚಾಲ್ತಿಯಲ್ಲಿತ್ತು. ಆದರೆ, ವಿಜ್ಞಾನಿಗಳ ಸಂಶೋಧನೆ ಈ ವಾದಕ್ಕೆ ಉಲ್ಟಾ ಫ‌ಲಿತಾಂಶ ನೀಡಿದೆ. ಮಳೆ, ಬಿಸಿಲು, ಚಳಿ- ಋತುವಿನ ಈ ಯಾವ ಬದಲಾವಣೆಗಳೂ ಕೊರೊನಾ ವೈರಾಣು ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಚಳಿ, ಮಳೆಗೆ ಕೊವಿಡ್ ಹೆಚ್ಚುತ್ತೆ ಅಂದುಕೊಂಡಿದ್ದೆವು. ಆದರೆ, ನಮಗೆ ಸಿಕ್ಕಿರುವ ಫ‌ಲಿತಾಂಶ ಅಚ್ಚರಿ ತಂದಿದೆ. ಮರು ಅಧ್ಯಯನ ನಡೆಸಿದಾಗಲೂ, ಇದೇ ಫ‌ಲಿತಾಂಶವೇ ಬಂದಿದೆ.

Neither Summer rainy Nor Cold Affect The Coronavirus

ಕೊವಿಡ್ ನಿಯಂತ್ರಿಸಲು ಸಾಮಾಜಿಕ ಅಂತರ, ಶಾಲೆಗಳನ್ನು ಮುಚ್ಚುವಿಕೆ, ಕಡಿಮೆ ಜನರ ಸಂಚಾರ ಇವು ಮಾತ್ರವೇ ಪರಿಣಾಮಕಾರಿ ಎಂಬುದು ತಿಳಿದುಬಂತು ಎಂದು ಟೊರಾಂಟೊ ವಿವಿಯ ತಜ್ಞ ಪೀಟರ್‌ ಜ್ಯುನಿ ಹೇಳಿದ್ದಾರೆ.

ಸೆಕೆ, ಸೆಕೆ: ಕರ್ನಾಟಕ, ದೆಹಲಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶಸೆಕೆ, ಸೆಕೆ: ಕರ್ನಾಟಕ, ದೆಹಲಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶ

ಹೌದು, ಜಗತ್ತಿನ 144 ಭೌಗೋಳಿಕ ಪ್ರದೇಶಗಳ ಅಕ್ಷಾಂಶ, ತಾಪಮಾನ, ತೇವಾಂಶ, ಶಾಲೆ ಮುಚ್ಚುವಿಕೆ, ಸಾಮಾಜಿಕ ಅಂತರ- ಇತ್ಯಾದಿಗಳನ್ನು ಆಧರಿಸಿ ಸಂಶೋಧನೆ ನಡೆಸಲಾಗಿತ್ತು.

ಮಾರ್ಚ್‌ 20 ಮತ್ತು ಮಾರ್ಚ್‌ 27- ಇವೆರಡು ದಿನಗಳಲ್ಲಿ ಪತ್ತೆಯಾದ ಪ್ರಕರಣಗಳನ್ನು ತಜ್ಞರು ಪರಿಗಣಿಸಿದ್ದರು. ಅದರಂತೆ, ಚಳಿ, ಮಳೆ, ಬಿಸಿಲುಗಳು ಕೊರೊನಾ ಹರಡುವಿಕೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

English summary
Temperature And Latitude do not appear to be associated with the spread of coronavirus .according to a study of many countries published in CMAJ (Canadian Medical Association Journal), but school closures and other public health measures are having a positive effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X