ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವನ್ನು ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವೇ?: ವಿಶ್ವ ಸಂಸ್ಥೆಯ ತಜ್ಞರು ಏನಂತಾರೆ?

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 28: ಕೊವಿಡ್ 19 ಒಂದು ಜಾಗತಿಕ ಪಿಡುಗಾಗಿ ಕಾಡುತ್ತಿದ್ದು ಅದನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದೇ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

Recommended Video

The accused Tajuddin had assaulted policeman again | Got shot for Leg | Stay Home Stay Safe

ಒಂದೊಮ್ಮೆ ಅಲ್ಲೋ ಇಲ್ಲೋ ಒಂದು ಪ್ರಕರಣಗಳು ಉಳಿದುಕೊಂಡು ಬಳಿಕ ಕ್ರಮೇಣವಾಗಿ ಮತ್ತೆ ವಿಶ್ವವನ್ನೇ ಆವರಿಸಿದರೆ ಏನು ಗತಿ ಎಂಬುದು ಒಂದು ಆತಂಕವಾಗಿದೆ.

ಅಂದು ಕೊರೊನಾ ಬಗ್ಗೆ ಎಚ್ಚರಿಸಿದ್ದ ನೊಬೆಲ್ ಪಡೆದ ವಿಜ್ಞಾನಿ ಇಂದು ಮತ್ತೆ ನುಡಿದ ಭವಿಷ್ಯಅಂದು ಕೊರೊನಾ ಬಗ್ಗೆ ಎಚ್ಚರಿಸಿದ್ದ ನೊಬೆಲ್ ಪಡೆದ ವಿಜ್ಞಾನಿ ಇಂದು ಮತ್ತೆ ನುಡಿದ ಭವಿಷ್ಯ

ಕೊರೊನಾ ವೈರಸ್ ಈಗಾಗಲೇ ವಿಶ್ವದ 18 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ. 190 ರಾಷ್ಟ್ರಗಳಲ್ಲಿ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ. ಭಾರತವು ಇನ್ನೂ ಪ್ರಾರಂಭಿಕ ಹಂತದಲ್ಲಿರುವುದರಿಂದ ಸುಲಭವಾಗಿ ಕೊರೊನಾವೈರಸ್‌ನಿಂದ ಮುಕ್ತಿ ಪಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹೊತ್ತಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಕೆಲವು ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ ಅದೇನೆಂದು ತಿಳಿಯಲು ಸುದ್ದಿ ಓದಿ...
ಡಾ. ಬ್ರೂಸ್ ಏಲ್‌ವಾರ್ಡ್ ಅವರು ಪೋಲಿಯೋ, ಎಬೋಲಾ ಹಾಗೂ ಇನ್ನಿತರೆ ರೋಗಗಳ ಜೊತೆಗೆ ಹೋರಾಡಿ 30 ವರ್ಷಗಳ ಅನುಭವವಿದೆ ಈಗ ಕೊರೊನಾ ವೈರಸ್‌ ಜೊತೆಗೆ ಸೆಣೆಸಾಟ ಆರಂಭಿಸಿದ್ದಾರೆ.

ಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯಕೊರಾನಾ: ಮುಂದಿನ 5 ದಿನ ಎಚ್ಚರ, ಬಾಲ ಜ್ಯೋತಿಷಿಯ ಬೆಚ್ಚಿಬೀಳುವ ಭವಿಷ್ಯ

ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಅವರಿಗೆ ಸೀನಿಯರ್ ಅಡ್ವೈಸರ್ ಆಗಿ ಬ್ರೂಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಕೊವಿಡ್ 19 ಮತ್ತಷ್ಟು ಹರಡುವುದೇ, ಈ ವೈರಸ್ 6 ತಿಂಗಳುಗಳ ಕಾಲ ಇರುವುದೇ, ಇದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವೇ?, ಯುವಕರು ಏನು ಮಾಡಬೇಕು, ಲಾಕ್‌ಡೌನ್ ಮಾಡಿದ ಬಳಿಕ ರಾಷ್ಟ್ರಗಳ ಮೊದಲ ಆದ್ಯತೆ ಏನಾಗಿರಬೇಕು ಇವೆಲ್ಲಕ್ಕೂ ಉತ್ತರ ನೀಡಿದ್ದಾರೆ.

ಕೊವಿಡ್ 19 ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದೇ?

ಕೊವಿಡ್ 19 ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹರಡುವುದೇ?

ಈಗ ಚೀನಾವನ್ನೇ ನೋಡಿ ಜನವರಿ ಮೊದಲ ವಾರದಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಯಿತು. ತಕ್ಷಣವೇ ಅದನ್ನು ಗಂಭೀರವಾಗಿ ತೆಗೆದುಕೊಂಡು ಹಲವು ಆಸ್ಪತ್ರೆಗಳನ್ನು ತೆರೆದು ಒಬ್ಬೊಬ್ಬರ ಮೇಲೂ ನಿಗಾ ಇಟ್ಟು ಮಾರ್ಚ್ ಕಳೆಯುವುದರೊಳಗಾಗಿ ಮೂರೇ ತಿಂಗಳಿನಲ್ಲಿ ಮತ್ತೆ ಹಳೆಯ ಸ್ಥಿತಿಗೆ ಮರಳಿದೆ. ಹೀಗೆ ಎಲ್ಲಾ ರಾಷ್ಟ್ರಗಳು ಕ್ರಮ ಕೈಗೊಂಡರೆ ವೈರಸ್ ಹರಡುವುದನ್ನು ತಡೆಗಟ್ಟುವುದು ಕಷ್ಟವೇನಲ್ಲ ಎಂದು ಬ್ರೂಸ್ ಅಭಿಪ್ರಾಯಪಟ್ಟಿದ್ದಾರೆ.

ಯುರೋಪ್, ಅಮೆರಿಕ, ಇಟಲಿಯಲ್ಲಿ ವೈರಸ್ ಹೆಚ್ಚುತ್ತಿದೆ

ಯುರೋಪ್, ಅಮೆರಿಕ, ಇಟಲಿಯಲ್ಲಿ ವೈರಸ್ ಹೆಚ್ಚುತ್ತಿದೆ

ಯುರೋಪ್, ಅಮೆರಿಕ, ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ರಾಷ್ಟ್ರಗಳಲ್ಲಿ ವೈರಸ್‌ನ್ನು ಬೇಗ ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ ಮೂರ್ನಾಲ್ಕು ತಿಂಗಳುಗಳೇ ಬೇಕಾಗಬಹುದು.

ಆಫ್ರಿಕಾ, ಭಾರತದಲ್ಲಿ ಈಗ ಆರಂಭ

ಆಫ್ರಿಕಾ, ಭಾರತದಲ್ಲಿ ಈಗ ಆರಂಭ

ಆಫ್ರಿಕಾ ಹಾಗೂ ಭಾರತದ ಕೆಲವು ಪ್ರಧೇಶಗಳಲ್ಲಿ ಕೊರೊನಾ ವೈರಸ್ ರುದ್ರನರ್ತನ ಈಗ ಆರಂಭವಾಗಿದೆ. ಆದರೆ ಈ ಹಂತದಲ್ಲಿಯೇ ವೈರಸ್‌ನ್ನು ನಿಯಂತ್ರಿಸಿದರೆ ಖಂಡಿತವಾಗಿಯೂ ಒಂದೇ ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ.

ಲಾಕ್‌ಡೌನ್ ಮಾಡಿದ ಬಳಿಕ ರಾಷ್ಟ್ರಗಳ ಮೊದಲ ಆದ್ಯತೆ ಏನಾಗಿರಬೇಕು?

ಲಾಕ್‌ಡೌನ್ ಮಾಡಿದ ಬಳಿಕ ರಾಷ್ಟ್ರಗಳ ಮೊದಲ ಆದ್ಯತೆ ಏನಾಗಿರಬೇಕು?

ದೇಶವನ್ನು ಲಾಕ್‌ಡೌನ್ ಮಾಡಿದ ಬಳಿಕ ಮೊದಲ ಆದ್ಯತೆ ತಪಾಸಣೆ, ಸೋಂಕಿತರು, ಶಂಕಿತರು ಎಲ್ಲರ ತಪಾಸಣೆ ಮಾಡಬೇಕು. ದೃಢಪಡುತ್ತಿದ್ದಂತೆ ಅವರನ್ನು ಐಸೋಲೇಷನ್‌ನಲ್ಲಿರಿಸಬೇಕು. ಹಾಗೆಯೇ ಶಂಕಿತರನ್ನು ಗೃಹಬಂಧನದಲ್ಲಿರಿಸಬೇಕು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಲು ಬಿಡಲೇಬಾರದು.

ಕೊವಿಡ್ 19 ಅಂತ್ಯಕಾಣುತ್ತಾ?

ಕೊವಿಡ್ 19 ಅಂತ್ಯಕಾಣುತ್ತಾ?

ನೀವು ಎಷ್ಟು ಬೇಗ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರೋ, ಜನರಿಗೆ ವೈರಸ್ ಕುರಿತು ಜಾಗೃತಿ ಮೂಡುತ್ತದೋ ಅಷ್ಟು ಬೇಗ ರೋಗ ಗುಣವಾಗುತ್ತದೆ. ಜನರು ರೋಗವನ್ನು ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ. ನಮ್ಮ ಬಳಿ ವಾಕ್ಸಿನ್ ಇದ್ದು ಅದರ ವಿರುದ್ಧ ಖಂಡಿತವಾಗಿಯೂ ಹೋರಾಟ ನಡೆಸುತ್ತೇವೆ. ಎಲ್ಲವೂ ಶೀಘ್ರವಾಗಿ ನಮ್ಮ ಹಿಡಿತಕ್ಕೆ ಬರಲಿದೆ ಎಂದು ಬ್ರೂಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುವಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ

ಯುವಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ

ದೇಶವೇ ಲಾಕ್‌ಡೌನ್ ಆಗಿದ್ದರೂ ಯುವಕರು ಬೈಕ್, ಕಾರು ತೆಗೆದುಕೊಂಡು ಊರಿಂದ ಊರಿಗೆ ಸುತ್ತಾಟ ನಡೆಸುತ್ತಿದ್ದಾರೆ. ಆದರೆ ಅವರಿಗೆ ಕಡಿಮೆ ವಯಸ್ಸು ಕೊರೊನಾ ವೈರಸ್ ಬಂದರೂ ಶೀಘ್ರ ಗುಣಮುಖರಾಗುತ್ತಾರೆ ಆದರೆ ಅವರ ಪೋಷಕರು, ಅಜ್ಜ-ಅಜ್ಜಿಯ ಪರಿಸ್ಥಿತಿ ಏನಾಗಬೇಕು ಮನೆಯಲ್ಲಿ ಮಕ್ಕಳಿದ್ದರೆ ಅವರ ಗತಿ ಏನು ಎಂಬುದನ್ನು ಯುವಕರು ಯೋಚಿಸಲೇಬೇಕಾಗಿದೆ.

ಯಾವ ದೇಶಗಳು ದುರ್ಬಲ ಸ್ಥಿತಿಯಲ್ಲಿವೆ

ಯಾವ ದೇಶಗಳು ದುರ್ಬಲ ಸ್ಥಿತಿಯಲ್ಲಿವೆ

ಕಡಿಮೆ ಆದಾಯವಿರುವ ರಾಷ್ಟ್ರಗಳಿಗೆ ಕೊರೊನಾ ವೈರಸ್ ತಲೆನೋವಾಗಿ ಪರಿಣಮಿಸಿದೆ. ಆಫ್ರಿಕಾ ರೀತಿ ಸಾಕಷ್ಟು ರಾಷ್ಟ್ರಗಳಲ್ಲಿ ಚಿಕಿತ್ಸೆ ನೀಡಲು ಕೂಡ ಸಾಧ್ಯವಿಲ್ಲ.

ಕೊವಿಡ್ 19 ಕಣ್ಮರೆಯಾಗುವುದೇ?

ಕೊವಿಡ್ 19 ಕಣ್ಮರೆಯಾಗುವುದೇ?

ಕೊರೊನಾ ವೈರಸ್‌ನ್ನು ತಡೆಗಟ್ಟುವುದು ಆಯಾ ದೇಶಗಳ ಕೈಯಲ್ಲಿದೆ. ಮೊದಲೆರೆಡು ಹಂತಗಳಲ್ಲಿ ತೀರಾ ಎಚ್ಚರಿಕೆಯಿಂದ ಇದ್ದು, ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸಿದರೆ ಖಂಡಿತವಾಗಿಯೂ ಕೊರೊನಾವನ್ನು ದೂರ ಮಾಡಬಹುದು. ಈಗ ಚೀನಾದಲ್ಲಿ ಕಳೆದ ಎರಡು ತಿಂಗಳ ಹಿಂದೆ ಹೇಗಿತ್ತೋ ಪರಿಸ್ಥಿತಿ ಈಗಲೂ ಹಾಗೆಯೇ ಇದೆ. ಜನರ ಬದುಕು ಸಹಜ ಸ್ಥಿತಿಯತ್ತ ಮರಳುತ್ತಿದೆ. ಹಾಗೆಯೇ ಎಲ್ಲಾ ದೇಶಗಳಲ್ಲಿಯೂ ಮುಂಜಾಗ್ರತಾ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ, ಸರ್ಕಾರ ಕೈಗೊಳ್ಳುವ ಕ್ರಮವನ್ನು ಜನರು ಪಾಲಿಸಿದರೆ ಶೀಘ್ರವಾಗಿ ದೇಶ ಕೊವಿಡ್ 19 ಮುಕ್ತ ದೇಶವಾಗಬಹುದು.

English summary
Dr. Bruce Aylward Said that COVID-19 Ever Disappear From India,Indian subcontinent can see that it’s just beginning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X