ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟಮಿನ್ ಡಿ ಸಿಗಲ್ಲ ಅಂತ ಬುರ್ಖಾ ನಿಷೇಧ ಸರಿಯಾ?

ಬುರ್ಖಾ ಹಾಗೂ ಮುಖ ಮುಚ್ಚುವ ಬಟ್ಟೆ ಧರಿಸುವುದರಿಂದ ದೇಹಕ್ಕೆ ಸೂರ್ಯನ ಕಿರಣಗಳು ಬೀಳದೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂಬ ವಾದವನ್ ಮುಂದಿಟ್ಟು ಬ್ರಿಟನ್ನಿನ ಇಂಡಿಪೆಂಡೆನ್ಸ್ ಪಕ್ ಬುರ್ಖಾಗೆ ನಿಷೇಧ ಹೇರುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.

By Sachhidananda Acharya
|
Google Oneindia Kannada News

ಲಂಡನ್, ಮೇ 27: ನಾವು ಅಧಿಕಾರಕ್ಕೆ ಬಂದರೆ ಬುರ್ಖಾಗೆ ನಿಷೇಧ ಹೇರಲಾಗುವುದು ಎಂದು ಬ್ರಿಟನ್ನಿನ ಬಲಪಂಥೀಯ ಪಕ್ಷ ಇಂಡಿಪೆಂಡೆನ್ಸ್ ಪಾರ್ಟಿ ಹೇಳಿದೆ. ಇದಕ್ಕೆ ಪಕ್ಷ ನೀಡಿರುವ ಕಾರಣ ವಿಚಿತ್ರವಾಗಿದೆ.

ಬುರ್ಖಾ ಹಾಗೂ ಮುಖ ಮುಚ್ಚುವ ಬಟ್ಟೆ ಧರಿಸುವುದರಿಂದ ದೇಹಕ್ಕೆ ಸೂರ್ಯನ ಕಿರಣಗಳು ಬೀಳದೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂಬ ವಾದವನ್ನು ಈ ಪಕ್ಷ ತನ್ನ ಪ್ರನಾಳಿಕೆಯ ಜತೆಗೆ ಹೂಡಿದೆ.

ಇದರ ಜತೆಗೆ ಮುಖವನ್ನು ಬಟ್ಟೆಗಳಿಂದ ಮುಚ್ಚಿದರೆ ಗುರುತು ಸಿಗುವುದಿಲ್ಲ. ಇದರಿಂದ ಸಮಾಲೋಚನೆ ಕಷ್ಟವಾಗುತ್ತದೆ. ದೌರ್ಜನ್ಯಗಳನ್ನು ಪತ್ತೆ ಹಚ್ಚುವುದು ತ್ರಾಸದಾಯಕವಾಗುತ್ತದೆ ಎಂದೂ ಅದು ನಿಷೇಧಕ್ಕೆ ಸಮಜಾಯಿಷಿ ನೀಡಿದೆ.

Will Ban Burqa As It Prevents Vitamin D, Says UK’s Independence Party Manifesto

ಪ್ರಮುಖ ಪಕ್ಷಗಳ ಜತೆ ಪೌಲ್ ನಟ್ಟಲ್ ನೇತೃತ್ವದ ಇಂಡಿಪೆಂಡೆನ್ಸ್ ಪಕ್ಷ ಅಖಾಡಕ್ಕಿಳಿದಿದ್ದು ಈ ಪ್ರಣಾಳಿಯನ್ನು ಬಿಡುಗಡೆ ಮಾಡಿದೆ.
ಬುರ್ಖಾ ಬ್ಯಾನ್ ಮಾಡುವ ಮೂಲಕ, ನಾವು ಮಹಿಳೆಯರಿಗೆ ಅವಕಾಶಗಳನ್ನು ತೆರಯುತ್ತಿದ್ದೇವೆ. ಇದರಿಂದ ಅವರು ಜೀವನದಲ್ಲಿ ಮತ್ತು ಉದ್ಯೋಗದ ಸ್ಥಳಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು ಎಂದು ಪಕ್ಷ ಹೇಳಿದೆ.

ಇಷ್ಟು ಮಾತ್ರವಲ್ಲ ಜನರ ನಡತೆ ನೋಡಿ ದೇಶಕ್ಕೆ ಪ್ರವೇಶ ನೀಡಬೇಕು. ಆಗ ದ್ವಿತೀಯ ದರ್ಜೆ ನಾಗರೀಕರು ದೇಶ ಪ್ರವೇಶಿಸುವುಲ್ಲ. ನಮ್ಮಒಟ್ಟು ಉದ್ದೇಶ ಬ್ರಿಟನ್ನಿನ ಮೌಲ್ಯಗಳನ್ನು ಕಾಪಾಡುವುದು ಎಂದು ಅದು ಪ್ರಣಾಳಿಕೆಯಲ್ಲಿ ಹೇಳಿದೆ.

English summary
The UK Independence Party (UKIP) has pledged in its general election manifesto to ban the burqas in public places, citing a reason that they prevent intake of essential vitamin D from sunlight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X