ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದೈತೆ ಮಾರಿ ಹಬ್ಬ! ತಾಲಿಬಾನ್ ಉಗ್ರರ ಬುಡಕ್ಕೆ ಬಾಂಬ್ ಪಕ್ಕಾ!

|
Google Oneindia Kannada News

ಒಂದು ಹಂತದಲ್ಲಿ ಜಗತ್ತನ್ನೇ ಆವರಿಸಿಕೊಳ್ಳಲು ಉಗ್ರರು ಕುತಂತ್ರ ರೂಪಿಸಿದ್ದಾರೆ. ಅದ್ರಲ್ಲೂ ಈ ತಾಲಿಬಾನ್ ಎಂಬ ಕಿರಾತಕರ ಗುಂಪು ಇದೆಯಲ್ಲಾ, ಅದು ತುಂಬಾ ತುಂಬಾನೇ ಡೇಂಜರಸ್. ಯುವಕರ ಬ್ರೈನ್ ವಾಶ್ ಮಾಡಿ, ಅವರನ್ನ ತಮ್ಮ ಗುಂಪಿಗೆ ಸೇರಿಸಿಕೊಳ್ಳುವಲ್ಲಿ ಇದೇ ತಾಲಿಬಾನಿ ಗ್ಯಾಂಗ್ ಸಿಕ್ಕಾಪಟ್ಟೆ ಪಳಗಿದೆ. ಇದೇ ಕಾರಣಕ್ಕೆ ಅಫ್ಘಾನಿಸ್ತಾನ ಹರಿದು, ಹಂಚಿ ಹೋಳಾಗುವ ಭೀತಿ ಎದುರಾಗಿದೆ. ಆದರೆ ಅದು ಅಷ್ಟು ಸುಲಭವಲ್ಲ ಅನ್ನೋದನ್ನು ನಾವು ತಿಳಿಯಬೇಕು.

ಅಫ್ಘಾನಿಸ್ತಾನ ಎಲ್ಲಾ ಸಂಕಷ್ಟಗಳ ನಡುವೆ ಪಳಗಿರುವ ನಾಡು, ಈ ನಾಡಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ಒಮ್ಮೆ ಸೋತರೆ ಮತ್ತೊಮ್ಮೆ ಎದ್ದು ನಿಂತು ಗುದ್ದುವ ತಾಕತ್ತೂ ಇದೆ. ಅತ್ತ ಅಮೆರಿಕ ತನ್ನೆಲ್ಲಾ ಕೆಲಸಗಳಿಗೆ ಅಫ್ಘಾನಿಸ್ತಾನವನ್ನೇ ಉಪಯೋಗಿಸಿಕೊಂಡು, ಇದೀಗ ದಿಢೀರ್ ಗೂಡು ಬಿಟ್ಟು ಹೊರಟಿರುವ ಹಿನ್ನೆಲೆಯಲ್ಲಿ ಹೊಸ ಚಿಂತನೆ ಶುರುವಾಗಿದೆ. ಅಂದಹಾಗೆ ಈ ರಣತಂತ್ರ ತಾಲಿಬಾನ್ ಗ್ಯಾಂಗ್‌ ಬುಡಕ್ಕೆ ಬಾಂಬ್ ಇಡೋದು ಗ್ಯಾರಂಟಿ. ಯಾವುದಪ್ಪಾ ಆ ರಣತಂತ್ರ ಅನ್ನೋದನ್ನ ಮುಂದೆ ಓದೋಣ.

ಮುಳ್ಳಿಂದಲೇ ಮುಳ್ಳು ತೆಗೆಯಬೇಕು!

ಮುಳ್ಳಿಂದಲೇ ಮುಳ್ಳು ತೆಗೆಯಬೇಕು!

ಅಂದಹಾಗೆ ಇಡೀ ಅಫ್ಘಾನಿಸ್ತಾನ ಒಂದೇ ಆಗಿದ್ದರೂ ಅಲ್ಲಿ ಹತ್ತಾರು ಜನಾಂಗಗಳು ಸಾವಿರಾರು ವರ್ಷಗಳಿಂದ ಅದೇ ಜಾಗದಲ್ಲಿ ಬದುಕು ಕಟ್ಟಿಕೊಂಡಿವೆ. ಹೀಗಾಗಿ ತಾಲಿಬಾನ್ ಉಗ್ರರಿಗೆ ಸಹಜವಾಗಿ ವಿರೋಧಿ ಪಡೆಗಳೂ ಇವೆ. ಸಂದಿಗ್ಧ ಸಂದರ್ಭದಲ್ಲಿ ವಿರೋಧಿ ಪಡೆಗಳನ್ನ ಬಳಸಿಕೊಂಡು ತಾಲಿಬಾನ್ ಹತ್ತಿಕ್ಕಲು ಮಾಸ್ಟರ್ ಪ್ಲ್ಯಾನ್ ನಡೆದಿದೆ. 'ಮುಳ್ಳನ್ನ ಮುಳ್ಳಿಂದ ತೆಗೆಯಬೇಕು' ಎಂಬಂತೆ ತಾಲಿಬಾನ್ ವಿರುದ್ಧ ಅವರದ್ದೇ ವಿರೋಧಿ ಪಡೆಯ ಸಹಾಯ ಪಡೆಯಲು ಸ್ಕೆಚ್ ರೆಡಿಯಾಗಿದೆ. ಹಿಂದೆ ರಷ್ಯಾ ಆಕ್ರಮಣ ಹಾಗೂ ತಾಲಿಬಾನ್ ಆಂತರಿಕ ಕಲಹ ನಡೆದಾಗ ತಾಲಿಬಾನ್ ವಿರುದ್ಧ ಇದ್ದ ಬೆಟಾಲಿಯನ್‌ನ ಮತ್ತೆ ಒಗ್ಗೂಡಿಸುವ ಕಾರ್ಯಕ್ಕೆ ಚಾಲನೆ ಸಿಗುತ್ತಿದೆ.

ಬುಡಕಟ್ಟು ಜನರೇ ಶಕ್ತಿ!

ಬುಡಕಟ್ಟು ಜನರೇ ಶಕ್ತಿ!

ಅಮೆರಿಕ ಯಾವುದೇ ಮುನ್ಸೂಚನೆ ನೀಡದೆ ಅಫ್ಘಾನ್ ಬಿಟ್ಟು ಓಡಿ ಹೋಗಿದೆ. ಇದಕ್ಕೆ ಕಾರಣ ಹಲವಾರು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನ ಸರ್ಕಾರ ಉಗ್ರರ ಎದುರು ಮಂಡಿ ಊರುವ ಸ್ಥಿತಿ ಎದುರಾಗಿದೆ. ಅಫ್ಘಾನಿಸ್ತಾನದ ಒಟ್ಟು 421 ಜಿಲ್ಲಾ ಕೇಂದ್ರಗಳ ಪೈಕಿ 3/1ರಷ್ಟು ಜಾಗ ತಾಲಿಬಾನ್ ಗ್ಯಾಂಗ್ ಕೈಸೇರಿದೆ. ಉಗ್ರ ಪಡೆ ವಶಕ್ಕೆ ಪಡೆದಿರುವ ಜಾಗಗಳೆಲ್ಲಾ ಪ್ರಮುಖವಾದ ಪ್ರದೇಶಗಳು. ಇಂತಹ ಸಂದರ್ಭದಲ್ಲಿ ತಾಲಿಬಾನ್‌ನ ವಿರುದ್ಧ ಹೋರಾಡಲು ಅಫ್ಘಾನ್ ಸೈನಿಕರ ಕೈಯಲ್ಲಿ ಆಗುತ್ತಿಲ್ಲ. ತಮ್ಮ ಗನ್, ಬಾಂಬ್ ಎಲ್ಲವನ್ನೂ ಉಗ್ರರಿಗೆ ಕೊಟ್ಟು ಜೀವ ಬಿಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತಾಲಿಬಾನ್ ವಿರುದ್ಧ ಹೋರಾಡಲು ಅಫ್ಘಾನಿಸ್ತಾನ ಅದೇ ತಾಲಿಬಾನ್ ವಿರೋಧಿಗಳನ್ನೇ ನಂಬಿಕೊಂಡಿದೆ. ಅದರಲ್ಲೂ ಬುಡಕಟ್ಟು ಜನಾಂಗದ ಯುವ ಸಮೂಹ ಉಗ್ರರ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಅಮೆರಿಕ ಓಡಿ ಹೋಯ್ತಾ?

ಅಮೆರಿಕ ಓಡಿ ಹೋಯ್ತಾ?

ಅಮೆರಿಕ ತಪ್ಪು ನಿರ್ಧಾರ ಕೈಗೊಂಡಿದೆ ಎಂಬ ಆಕ್ರೋಶ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಅಫ್ಘಾನ್ ನೆಲದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಅಮೆರಿಕ ನಿರ್ಧಾರಕ್ಕೆ ಬೇಸರ ವ್ಯಕ್ತವಾಗಿದೆ. ಅದರಲ್ಲೂ ಅಫ್ಘಾನ್ ಅಧ್ಯಕ್ಷ ಸೇರಿದಂತೆ ಸೇನಾಧಿಕಾರಿಗಳು ಅಮೆರಿಕ ಮಿಲಿಟರಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈಗಲೂ ಅಂತಹದ್ದೇ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದೆ ಅಮೆರಿಕ ಸೇನೆ ಬಗ್ರಾಮ್ ವಾಯು ನೆಲೆಯಿಂದ ಹೊರ ನಡೆದಿತ್ತು. ಆದರೆ ಹೊರ ಹೋಗುವ ಮೊದಲು ಅಮೆರಿಕ ಸೇನೆ ಸುಳಿವು ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಮೆರಿಕ ರಾತ್ರೋರಾತ್ರಿ ಎಸ್ಕೇಪ್ ಆಗಿದೆ ಅಂತಾ ಅಫ್ಘಾನ್ ಸೇನಾಧಿಕಾರಿಗಳು ಆರೋಪಿಸಿದ್ದಾರೆ. ಇದು ಬರೀ ಒಂದು ಜಾಗದ ಕಥೆಯಲ್ಲ, ಅಮೆರಿಕ ಬಿಟ್ಟು ಹೊರಟಿರುವ ಪ್ರತಿಯೊಂದು ಸೇನಾ ನೆಲೆಯ ಕಥೆಯೂ ಇದೇ ಆಗಿದೆ.

ಆತಂಕಕ್ಕೆ ಕಾರಣ ಏನು?

ಆತಂಕಕ್ಕೆ ಕಾರಣ ಏನು?

ಅಮೆರಿಕ ತೊರೆದು ಹೋಗಿರುವ ಬಗ್ರಾಮ್ ಏರ್ ಬೇಸ್‌ ಕೇವಲ ಸೇನಾ ನೆಲೆಯಾಗಿಲ್ಲ. ಬದಲಾಗಿ ಉಗ್ರರಿಗೆ ಅಂತಾ ನಿರ್ಮಿಸಿರುವ ಜೈಲು ಕೂಡ ಇಲ್ಲೇ ಇದೆ. ಹಾಗೇ ಸುಮಾರು 5 ಸಾವಿರ ತಾಲಿಬಾನ್ ಉಗ್ರರು ಜೈಲಿನ ಒಳಗಿದ್ದಾರೆ. ಆದರೆ ಏಕಾಏಕಿ ಅಮೆರಿಕ ಸೇನೆ ಯಾವುದೇ ಸುಳಿವನ್ನ ನೀಡದೆ ಬಗ್ರಾಮ್ ಬೇಸ್‌ ಬಿಟ್ಟೋಗಿದೆ. ಇದು ಸಹಜವಾಗಿ ಅಫ್ಘಾನಿಸ್ತಾನ ಸೇನೆ ಹಾಗೂ ಸರ್ಕಾರದ ಕಣ್ಣು ಕೆಂಪಗಾಗಿಸಿದೆ. ಅವರು ಓಡಿ ಹೋಗಿದ್ದಾರೆ ಅಂತಾ ಅಫ್ಘಾನ್ ಸೇನಾಧಿಕಾರಿಗಳು ಅಮೆರಿಕ ಸೇನೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

English summary
Afghan government planning to use Taliban enemies to control the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X