ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ಗಡಿಯಲ್ಲಿ ಭಾರೀ ಕಾಳ್ಗಿಚ್ಚು, ಮಾರ್ಗಗಳು ಬಂದ್

|
Google Oneindia Kannada News

ಅಮೆರಿಕದ ಪಶ್ಚಿಮ ಭಾಗದಲ್ಲಿ ಭಾರೀ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕ್ಯಾಲಿಫೋರ್ನಿಯಾದ ಗಡಿಯಾದ ಒರೆಗಾನ್ ದಕ್ಷಿಣದ I 5 ಅನ್ನು ದಾಟಿ ಕಾಳ್ಗಿಚ್ಚು ಹಬ್ಬಿದೆ. ಈ ಪ್ರದೇಶದ ದಕ್ಷಿಣ ಭಾಗದ ಮಾರ್ಗಗಳನ್ನು ಮುಚ್ಚಲಾಗಿದೆ.

ಒರೆಗಾನ್ ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, ಒರೆಗಾನ್, ಆಶ್ ಲ್ಯಾಂಡ್ ನ ದಕ್ಷಿಣ ಭಾಗದ ಮಾರ್ಗಗಳು ಇನ್ನೂ ಕೆಲ ಕಾಲ ಮುಚ್ಚಿರಲಿವೆ. ಎಷ್ಟು ಸಮಯ ಮುಚ್ಚಿರಲಿವೆ ಎಂಬ ಬಗ್ಗೆ ತಿಳಿಸಿಲ್ಲ. ಒರೆಗಾನ್ ನಿಂದ ಕ್ಯಾಲಿಫೋರ್ನಿಯಾಕ್ಕೆ ತಲುಪಬೇಕಾದ ವಾಹನ ಪ್ರಯಾಣಿಕರು ಒರೆಗಾನ್ 58 ಅಥವಾ 140ರ ಮೂಲಕ ಯುಎಸ್ 97 ತಲುಪುವಂತೆ ಸೂಚಿಸಲಾಗಿದೆ.

ಈ ಕಾಳ್ಗಿಚ್ಚನ್ನು ಕ್ಲಮಥಾನ್ ಎಂದು ಕರೆಯಲಾಗಿದ್ದು, ಗುರುವಾರ ಮಧ್ಯಾಹ್ನದಿಂದ ಆರಂಭವಾಗಿದೆ. ಇದರಿಂದ ಕ್ಯಾಲಿಫೋರ್ನಿಯಾದ ಹಾರ್ನ್ ಬ್ರೂಕ್ ನಿಂದ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಈ ಕಾಳ್ಗಿಚ್ಚಿನಿಂದ ಇಪ್ಪತ್ತು ಚದರ ಕಿಲೋಮೀಟರ್ ವ್ಯಾಪ್ತಿಯಷ್ಟು ಸುಟ್ಟು ಹೋಗಿದೆ. ಹಲವು ಬಗೆಯಲ್ಲಿ ಹಾನಿಯಾಗಿದೆ.

Wild fire near Oregon-California border

ಜನರಿಗೆ ಹಾಗೂ ಆಸ್ತಿಗೆ ಹಾನಿಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಕ್ಯಾಲಿಫೋರ್ನಿಯಾದ ಗವರ್ನರ್ ಜೆರಿ ಬ್ರೌನ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

English summary
Authorities say a fire that jumped across Interstate 5 south of the Oregon border in California has closed the southbound lanes in that area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X