• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.21 ರಂದು ಮಾತೃಭಾಷಾ ದಿನ ಆಚರಿಸಲು ಕಾರಣವೇನು?

|

ಭಾಷೆ ಭಾವುಕತೆಗೆ ಸಂಬಂಧಿಸಿದ ವಿಷಯ. ಅದಕ್ಕಾಗಿ ಪ್ರಾಣ ಕೊಟ್ಟವರಿದ್ದಾರೆ. ಬಾಂಗ್ಲಾದೇಶೀಯರು ತಮ್ಮ ಮಾತೃಭಾಷೆಗಾಗಿ ಹೋರಾಡಿದ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹತ್ವದ ದಿನದ ನೆನಪಿಗಾಗಿ ಪ್ರತಿ ವರ್ಷ ಫೆ.21 ನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. 1999 ರಲ್ಲಿ ಈ ದಿನವನ್ನು ಯುನೆಸ್ಕೋ ಗುರುತಿಸಿದೆ.

ಆಧುನೀಕರಣ, ಜಾಗತೀಕರಣದ ಗಾಳಿಯಲ್ಲಿ ಇಂಗ್ಲಿಷ್ ಎಂಬ ವ್ಯಾವಹಾರಿಕ ಭಾಷೆಯಲ್ಲಿ ಪರಿಣಿತ ಪಡೆವ ತವಕದಲ್ಲಿ, ಅನಿವಾರ್ಯತೆಯಲ್ಲಿ ಮಾತೃಭಾಷೆಯನ್ನು ಅರಿವಿದ್ದೋ, ಇಲ್ಲದೆಯೋ ಕಡೆಗಣಿಸುತ್ತಿರುವ ಕಾಲ ಇದು.

ಭಾರತದಲ್ಲಿ 19,500ಕ್ಕೂ ಅಧಿಕ ಆಡುಭಾಷೆಗಳು : ಗಣತಿ ವರದಿ ಭಾರತದಲ್ಲಿ 19,500ಕ್ಕೂ ಅಧಿಕ ಆಡುಭಾಷೆಗಳು : ಗಣತಿ ವರದಿ

ಮಾತೃಭಾಷೆ ಎಂಬುದು ನಮ್ಮ ಅಸ್ಮಿತೆಯ ಸಂಕೇತವೆನ್ನಿಸಿದ್ದರೂ, ಆ ಭಾಷೆಯಲ್ಲಿ ಹತ್ತು ಜನರ ಮುಂದೆ ತಲೆಯೆತ್ತಿ ಮಾತನಾಡಲೂ ಕೀಳರಿಮೆ ಅನುಭವಿಸುವ ಸಮಯ. ಇಂಥ ಸಂದರ್ಭದಲ್ಲಿ ಮಾತೃಭಾಷಾ ದಿನ ಅಗತ್ಯ ಮತ್ತು ಅದರ ಆಚರಣೆಯ ಉದ್ದೇಶಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಮಾತೃಭಾಷಾ ದಿನ ಆಚರಿಸುವುದೇಕೆ?

ಮಾತೃಭಾಷಾ ದಿನ ಆಚರಿಸುವುದೇಕೆ?

1947 ರಲ್ಲಿ ಸ್ವಾತಂತ್ರ್ಯಾನಂತರ ದೇಶ ವಿಭಜನೆಯಾದಾಗ ಈಗಿನ ಬಾಂಗ್ಲಾದೇಶವೂ ಪಾಕಿಸ್ತಾನಕ್ಕೆ ಸೇರಿತ್ತು. ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಎಲ್ಲಾ ರಾಜಕೀಯ ಮತ್ತು ವ್ಯಾವಹಾರಿಕ ಕೇಂದ್ರಗಳೂ ಪಶ್ಚಿಮ ಪಾಕಿಸ್ತಾನ(ಇಂದಿನ ಪಾಕಿಸ್ತಾನ)ದಲ್ಲೇ ಇದ್ದಿದ್ದರಿಂದ ಪೂರ್ವ ಪಾಕಿಸ್ತಾನದ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿತ್ತು. ಅಷ್ಟೇ ಅಲ್ಲ, ಪೂರ್ವ ಪಾಕಿಸ್ತಾನದ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿತ್ತು. 1952 ರಲ್ಲಿ ಉರ್ದು ಭಾಷೆಯನ್ನೇ ಪ್ರತಿಯೊಬ್ಬರೂ ಮಾತನಾಡಬೇಕು, ಬೇರೆ ಭಾಷೆಯನ್ನು ಮಾತನಾಡುವಂತಿಲ್ಲ ಎಂದು ಕಡ್ಡಾಯ ನಿಯಮವನ್ನು ಸರ್ಕಾರ ಹೊರಡಿಸಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿದ್ದವರಲ್ಲಿ ಉರ್ದು ಮಾತೃಭಾಷೆಯವರು ತೀರಾ ಕಡಿಮೆ, ಅವರಲ್ಲಿ ಬಂಗಾಳಿ ಮಾತನಾಡುವವರೇ ಹೆಚ್ಚಿದ್ದರು. ಅವರಿಗೆ ಮಾತೃಭಾಷೆಯಾದ ಬಂಗಾಳಿಯನ್ನು ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಕ್ಕೆ ಇಷ್ಟವಿರಲಿಲ್ಲ. ಆದ್ದರಿಂದ ಉರ್ದುವನ್ನು ಒಪ್ಪಿಕೊಳ್ಳಲು ಒಲ್ಲೆ ಎಂದ ಬಾಂಗ್ಲಾದೇಶಿಯರ ಮೇಲೆ ಆಕ್ರಮಣ ಮಾಡಲಾಯ್ತು. ಈ ಪ್ರತಿಭಟನೆ ಸಂದರ್ಭದಲ್ಲಿ ಹಲವರು ಸಾವಿಗೀಡಾದರು. ಅವರ ತ್ಯಾಗದ ಪ್ರತೀಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ

ಟ್ವಿಟ್ಟರ್ ನಲ್ಲಿ ಟ್ರೆಂಡ್

ಮಾತೃಭಾಷಾ ದಿನ ಎಂಬುದು ಟ್ವಿಟ್ಟರ್ ನಲ್ಲೂ ಟ್ರೆಂಡಿಂಗ್ ಆಗಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಪ್ರಮುಖ ಮುಖಂಡರು ಮಾತೃಭಾಷಾ ದಿನಕ್ಕೆ ಶುಭ ಹಾರೈಸಿದ್ದಾರೆ.

"ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು. ನಮ್ಮ ಮಾತೃಭಾಷೆಯ ಬಗ್ಗೆ ಪ್ರಚಾರ ಮಾಡುತ್ತಲೇ, ಅದನ್ನು ಉಳಿಸಿಕೊಳ್ಳುತ್ತಲೇ ಭಾಷಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಒತ್ತು ನೀಡೋಣ. "

ಅಶೋಕ್ ಗೆಹ್ಲೋಟ್

ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು. ಈ ದಿನ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಮಾತೃಭಾಷೆಗೂ ಪ್ರಚಾರ ನೀಡೋಣ ಎಂದಿದ್ದಾರೆ ಅಶೋಕ್ ಗೆಹ್ಲೋಟ್.

ಮತ್ತೊಬ್ಬರ ಉಚ್ಚಾರಣೆಯನ್ನು ಅಣಕಿಸುವುದು ಬೇಡ!

ನಾವು ಮಾತೃಭಾಷಾ ದಿನವನ್ನು ಆಚರಿಸುತ್ತೇವೆ, ಹಾಗೆಯೇ ಮತ್ತೊಬ್ಬರ ಉಚ್ಚಾರಣೆಯನ್ನು ಆಡಿಕೊಳ್ಳುತ್ತೇವೆ. ಯಾವ ಭಾಷೆಯನ್ನೂ ತಾರತಮ್ಯ ಮಾಡದೆ ಎಲ್ಲ ಭಾಷೆಯನ್ನೂ ಗೌರವದಿಂದ ಕಾಣುವುದು ಮುಖ್ಯ. ಪೂರ್ವಗ್ರಹದಿಂದ ಹೊರಬರೋಣ ಎಂದಿದ್ದಾರೆ ಉಶ್ಮಾ ಪುರೋಹಿತ್.

English summary
International Mother Language Day (IMLD) is a worldwide annual observance held on 21 February to promote awareness of linguisticand cultural diversity and promote multilingualism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X