ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಗೆ ಆಶ್ರಯ ನೀಡಿದ್ದೇಕೆ ಯುಎಇ!?

|
Google Oneindia Kannada News

ಕಾಬೂಲ್, ಆಗಸ್ಟ್ 18: "ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಕೈವಶವಾದ ಹಿನ್ನೆಲೆ ಮಾನವೀಯತೆ ನೆಲೆಗಟ್ಟಿನಲ್ಲಿ ಆ ದೇಶದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಅವರ ಕುಟುಂಬಕ್ಕೆ ಆಶ್ರಯ ನೀಡಲಾಗುತ್ತಿದೆ," ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ.

ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ಲಗ್ಗೆಯಿಟ್ಟ ತಾಲಿಬಾನ್ ಉಗ್ರರು ಅಲ್ಲಿಂದಲೇ ಸರ್ಕಾರಕ್ಕೆ ಸಂದೇಶ ರವಾನಿಸಿದರು. ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ತಾಲಿಬಾನ್ ಎಚ್ಚರಿಕೆ ನೀಡುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿತು. ತಾಲಿಬಾನ್ ಸಂಘಟನೆ ಕಾಬೂಲ್ ನಗರ ಪ್ರವೇಶಿಸುವ ಮೊದಲೇ ಮಾಜಿ ಅಧ್ಯಕ್ಷ ಅಶ್ರಫ್ ಘನಿ ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಹಿಬ್ ಜೊತೆ ದೇಶದಿಂದ ಹಾರಿ ಹೋಗಿದ್ದರು.

5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!5 ಕಾರಣಗಳ ಗುಟ್ಟು: ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡ ಯುಎಸ್ ಯಡವಟ್ಟು!

"ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಿರುವ ಬಗ್ಗೆ ದೃಢಪಡಿಸಬಹುದು" ಎಂದು ಸಚಿವಾಲಯ ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ಬುಧವಾರದವರೆಗೂ ಅಶ್ರಫ್ ಘನಿ ಎಲ್ಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳೇ ಸುದ್ದಿಯಾಗುತ್ತಿದ್ದವು. ಮೊದಲಿಗೆ ಓಮನ್, ತಜಕಿಸ್ತಾನ ಅಥವಾ ಉಜ್ಬೇಕಿಸ್ತಾನ್ ಗೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿತ್ತು. ಅಶ್ರಫ್ ಘನಿ ತಮ್ಮ ಪತ್ನಿಯಿರುವ ಲೆಬನಾನ್‌ಗೆ ಪರಾರಿಯಾಗಿದ್ದಾರೆ ಎಂದು ಕೆಲವರು ಊಹಿಸಿದ್ದರು.

ವಿದೇಶಿ ನಾಯಕರಿಗೆ ಅರಬ್ ಆಶ್ರಯ ನೀಡುತ್ತಿರುವುದು ಮೊದಲಲ್ಲ

ವಿದೇಶಿ ನಾಯಕರಿಗೆ ಅರಬ್ ಆಶ್ರಯ ನೀಡುತ್ತಿರುವುದು ಮೊದಲಲ್ಲ

ತೈಲ ನಿಕ್ಷೇಪಗಳನ್ನು ಹೊಂದಿರುವ ಶ್ರೀಮಂತ ಗಲ್ಫ್ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ ವಿದೇಶಗಳ ಮಾಜಿ ನಾಯಕರಿಗೆ ತನ್ನ ದೇಶದ ಬಾಗಿಲುಗಳನ್ನು ತೆರೆದಿರುವುದು ಇದೇ ಮೊದಲೇನಲ್ಲ. ಕಳೆದ 2017ರಲ್ಲಿ ದುಬೈನ ಎಮಿರೇಟ್, ಸ್ವದೇಶದಲ್ಲಿ 5 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ಥಾಯ್ ಮಾಜಿ ಪ್ರಧಾನಮಂತ್ರಿ ಯಿಂಗ್ಲಕ್ ಶಿನವತ್ರಾ ಅವರಿಗೆ ಆತಿಥ್ಯ ನೀಡಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಸ್ಪೇನ್ ರಾಜ ಜುವಾನ್ ಕಾರ್ಲೋಸ್ ಯುಎಇಗೆ ಸ್ವಯಂಪ್ರೇರಿತರಾಗಿ ಗಡಿಪಾರು ಆಗಿದ್ದರು. ಅಲ್ಲದೇ 2007ರಲ್ಲಿ ಹತ್ಯೆಯಾಗುವ ಮೊದಲು ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಬೆನಜೀರ್ ಭುಟ್ಟೋ ಎಂಟು ವರ್ಷಗಳ ಗಡಿಪಾರು ಅವಧಿಯಲ್ಲಿ ಇದೇ ಯುಎಇಯಲ್ಲಿ ವಾಸವಾಗಿದ್ದರು.

ರಕ್ತಪಾತ ತಪ್ಪಿಸಲು ಅಫ್ಘಾನ್ ತೊರೆದ ಅಶ್ರಫ್ ಘನಿ

ರಕ್ತಪಾತ ತಪ್ಪಿಸಲು ಅಫ್ಘಾನ್ ತೊರೆದ ಅಶ್ರಫ್ ಘನಿ

"ತಾಲಿಬಾನ್ ಉಗ್ರರು ನನ್ನನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು. ಅವರು ಇಡೀ ಕಾಬೂಲ್ ಮತ್ತು ಕಾಬೂಲ್ ಜನತೆ ಮೇಲೆ ದಾಳಿ ನಡೆಸುವುದಕ್ಕಾಗಿ ಬಂದಿದ್ದರು. ಈಗಾಗಲೇ ಅಸಂಖ್ಯಾತ ಜನರು ಹುತಾತ್ಮರಾಗಿದ್ದು, ಅದು ಹಾಗೆ ಮುಂದುವರಿದಿದ್ದರೆ ಕಾಬೂಲ್ ನಗರದ ವಿನಾಶಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತಿತ್ತು. ಅದರಿಂದ 60 ಲಕ್ಷ ಜನಸಂಖ್ಯೆಯುಳ್ಳ ನಗದಲ್ಲಿ ಮಾನವ ದುರಂತವೊಂದು ನಡೆದು ಹೋಗುತ್ತಿತ್ತು. ಈ ರಕ್ತಪಾತವನ್ನು ತಡೆಯುವ ಉದ್ದೇಶದಿಂದ ಅಧಿಕಾರವನ್ನು ತ್ಯಜಿಸುವುದು ಉತ್ತಮ ಎನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೆನು," ಎಂದು ಅಶ್ರಫ್ ಘನಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಇತಿಹಾಸ

ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಇತಿಹಾಸ

ಶೈಕ್ಷಣಿಕ ತಕ್ಷ ಹಾಗೂ ಅರ್ಥಶಾಸ್ತ್ರಜ್ಞರಾದ ಅಶ್ರಫ್ ಘನಿ ಅಫ್ಘಾನಿಸ್ತಾನದ 14ನೇ ಅಧ್ಯಕ್ಷರಾಗಿದ್ದರು. 2014ರ ಸಪ್ಟೆಂಬರ್ 20ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2019ರ ಸಪ್ಟೆಂಬರ್ 28ರಂದು ಎರಡನೇ ಬಾರಿಗೆ ಅಫ್ಘಾನ್ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದರು. ಸುದೀರ್ಘ ಪ್ರಕ್ರಿಯೆಯ ನಂತರ ಕಳೆದ ಫೆಬ್ರವರಿ 2020ರಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗಿದ್ದು, ಕಳೆದ ವರ್ಷ ಮಾರ್ಚ್ 9ರಂದು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಶ್ರಫ್ ಘನಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಣದಿಂದ ಮಾನವಶಾಸ್ತ್ರಜ್ಞರಾಗಿದ್ದ ಅವರು ಈ ಹಿಂದೆ ಹಣಕಾಸು ಸಚಿವರಾಗಿ ಮತ್ತು ಕಾಬೂಲ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.

ಯುಎಸ್ ಸೇವೆ ಹಿಂತೆಗೆದುಕೊಂಡ 10 ದಿನಗಳಲ್ಲೇ ಅಟ್ಟಹಾಸ

ಯುಎಸ್ ಸೇವೆ ಹಿಂತೆಗೆದುಕೊಂಡ 10 ದಿನಗಳಲ್ಲೇ ಅಟ್ಟಹಾಸ

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.

ಅಫ್ಘಾನ್ ಮೇಲೆ ಅಮೆರಿಕಾ ಹಿಡಿತ ಸಾಧಿಸಿದ ಕಾಲ:

ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

Recommended Video

ತಾಲಿಬಾನ್ ಆಡಳಿತದ ನಿಯಮಗಳನ್ನು ಕೇಳಿದ್ರೆ ಎಂಥವರೂ ನಡುಗಿ ಹೋಗ್ತಾರೆ | Oneindia Kannada

English summary
Why UAE Welcomes Afghanistan Ex-President Ashraf Ghani and Family; Here Read the Answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X