• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿರಿಯಾ ಮೇಲೆ ಟರ್ಕಿ ವೈಮಾನಿಕ ದಾಳಿ: ಆಕ್ರಮಣಕ್ಕೆ ಕಾರಣ ಏನು?

|

ಇಸ್ತಾನ್‌ಬುಲ್, ಅಕ್ಟೋಬರ್ 10: ಉತ್ತರ ಸಿರಿಯಾದಲ್ಲಿ ಕುರ್ದಿಶ್ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ಟರ್ಕಿ ಸೇನಾ ಪಡೆಗಳು ದಾಳಿ ನಡೆಸುತ್ತಿವೆ. ಗಡಿ ಭಾಗದಲ್ಲಿ ವೈಮಾನಿಕ ದಾಳಿಗಳನ್ನು ನಡೆಸುತ್ತಿದ್ದು, ಬಾಂಬ್‌ಗಳನ್ನು ಸ್ಫೋಟಿಸುತ್ತಿದೆ.

ಸಿರಿಯಾ ಮೇಲಿನ ದಾಳಿಯ ಕುರಿತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಟ್ವಿಟ್ಟರ್‌ನಲ್ಲಿ ಘೋಷಣೆ ಹೊರಡಿಸಿದ್ದು, ಈ ಕಾರ್ಯಾಚರಣೆಯನ್ನು 'ಆಪರೇಷನ್ ಪೀಸ್ ಸ್ಪ್ರಿಂಗ್' ಎಂದು ಕರೆದುಕೊಂಡಿದ್ದಾರೆ.

ಟರ್ಕಿಯ ಗಡಿ ಭಾಗದ ಪಟ್ಟಣಗಳ ಮೇಲೆ ಸಿರಿಯಾ ಪ್ರತಿದಾಳಿ ನಡೆಸಿದ್ದು, ಮೋರ್ಟಾರ್ ಮತ್ತು ರಾಕೆಟ್‌ಗಳ ದಾಳಿಯಿಂದ ಒಂಬತ್ತು ತಿಂಗಳ ಮಗು ಸೇರಿದಂತೆ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.

ಟ್ರಂಪ್ ನಿಲುವಿಗೆ ಬೇಸರ: ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

ಟರ್ಕಿಯ ದಾಳಿಯಿಂದಾಗಿ ಈಶಾನ್ಯ ಸಿರಿಯಾದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಟರ್ಕಿಯ ಆಕ್ರಮಣ ಮುಂದುವರಿದರೆ ಮೂರು ಲಕ್ಷಕ್ಕೂ ಅಧಿಕ ಮಂದಿ ಆಶ್ರಯ ಕಳೆದುಕೊಳ್ಳಲಿದ್ದಾರೆ. ಈ ದಾಳಿಯಿಂದಾಗಿ 13 ಕುರ್ದಿಶ್ ಹೋರಾಟಗಾರರು ಜೀವ ಕಳೆದುಕೊಂಡಿದ್ದಾರೆ ಎಂದು ಸಿರಿಯಾ ರಾಷ್ಟ್ರೀಯ ಸೇನೆ ತಿಳಿಸಿದೆ.

ದಾಳಿಗೆ ಭಾರತದ ಖಂಡನೆ

ದಾಳಿಗೆ ಭಾರತದ ಖಂಡನೆ

ಟರ್ಕಿಯ ದಾಳಿಗೆ ಭಾರತ, ಅಮೆರಿಕ ಸೇರಿದಂತೆ ಅನೇಕ ದೇಶಗಳು ಖಂಡನೆ ವ್ಯಕ್ತಪಡಿಸಿವೆ. ಟರ್ಕಿಯು ಸಿರಿಯಾದ ಈಭಾಗದಲ್ಲಿ ಈಗಷ್ಟೇ ಸಾಧ್ಯವಾಗುತ್ತಿದ್ದ ಸ್ಥಿರತೆಯನ್ನು ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಹಾಳುಗೆಡವುತ್ತದೆ. ಈ ಆಕ್ರಮಣದಿಂದ ಅಪಾರ ಪ್ರಮಾಣದ ನಾಗರಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಟರ್ಕಿ ಈ ದಾಳಿಯನ್ನು ಕೂಡಲೇ ಸ್ಥಗಿತಗೊಳಿಸಿ ಸಿರಿಯಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಭಾರತ ಆಗ್ರಹಿಸಿದೆ.

ಐಸಿಸ್ ಮತ್ತೆ ಬಲಗೊಳ್ಳುವ ಅಪಾಯ

ಐಸಿಸ್ ಮತ್ತೆ ಬಲಗೊಳ್ಳುವ ಅಪಾಯ

ಟರ್ಕಿ ಬುಧವಾರ ಗಡಿ ಭಾಗದ ಪಟ್ಟಣ ರಾಸ್ ಅಲ್ ಐನ್ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಈ ಆಕ್ರಮಣ ಆರಂಭಿಸಿದೆ. ವಿವಿಧ ದೇಶಗಳ ಪಡೆಗಳು ಸಿರಿಯಾದಲ್ಲಿ ಪ್ರಬಲವಾಗಿದ್ದ ಐಸಿಸ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದವು. ಈಗ ಕುರ್ದಿಶ್ ಪಡೆಗಳ ಮೇಲೆ ಟರ್ಕಿ ನಡೆಸುತ್ತಿರುವ ದಾಳಿಗಳು ಸಿರಿಯಾವನ್ನು ದುರ್ಬಲಗೊಳಿಸುವುದರಿಂದ ಅಲ್ಲಿ ಮತ್ತೆ ಐಸಿಸ್ ಬಲಗೊಳ್ಳುವ ಅಪಾಯವಿದೆ. ಟರ್ಕಿಯ ದಾಳಿಯು ಜಾಗತಿಕವಾಗಿ ಆತಂಕ ಮೂಡಿಸಲು ಇದು ಪ್ರಮುಖ ಕಾರಣವಾಗಿದೆ.

ದಾಳಿಗೆ ಎರಡು ಕಾರಣಗಳು

ದಾಳಿಗೆ ಎರಡು ಕಾರಣಗಳು

ಈಶಾನ್ಯ ಸಿರಿಯಾದಲ್ಲಿ ಟರ್ಕಿ ಎರಡು ಗುರಿಗಳನ್ನು ಹೊಂದಿದೆ. ತನ್ನ ಗಡಿಯಲ್ಲಿ ತನಗೆ ಭದ್ರತೆಯ ಬೆದರಿಕೆಯಂತೆ ಗೋಚರಿಸಿರುವ ಕುರ್ದಿಶ್ ವೈಪಿಜಿ ಸೇನಾ ಪಡೆಗಳನ್ನು ಅಲ್ಲಿಂದ ದೂರ ಓಡಿಸುವುದು. ಮತ್ತೊಂದು, ಟರ್ಕಿಯಲ್ಲಿ ಪ್ರಸ್ತುತ ಒತ್ತೆಯಾಳಾಗಿರುವ ಎರಡು ಮಿಲಿಯನ್ ಸಿರಿಯಾದ ನಿರಾಶ್ರಿತರನ್ನು ಸಿರಿಯಾದೊಳಗೆ ಇರಿಸಲು ಸಾಕಷ್ಟು ಸ್ಥಳಾವಕಾಶ ಪಡೆದುಕೊಳ್ಳುವುದು.

ಸಿರಿಯಾದ ಪ್ರದೇಶದಲ್ಲಿ 20 ಮೈಲಿಗಳವರೆಗೆ 'ಸೇಫ್ ಝೋನ್' ಸೃಷ್ಟಿಸಲು ಜಂಟಿ ಕಾರ್ಯಾಚರಣೆ ನಡೆಸುವ ಸಂಬಂಧ ಅಮೆರಿಕದ ಮನವೊಲಿಸಲು ಟರ್ಕಿ ಪ್ರಯತ್ನಿಸುತ್ತಾ ಬಂದಿದೆ. ಆದರೆ ಟರ್ಕಿಯ ಬೇಡಿಕೆಗೆ ಸಮ್ಮತಿಸದ ಅಮೆರಿಕ ಅದಕ್ಕೆ ನಿರಂತರ ಎಚ್ಚರಿಕೆಗಳನ್ನು ನೀಡುತ್ತಾ ಬಂದಿತ್ತು. ಅಮೆರಿಕದ ಪಡೆಗಳು ಸಿರಿಯಾದಿಂದ ಹೊರಹೋಗುತ್ತಿದ್ದಂತೆಯೇ ಏಕಪಕ್ಷೀಯವಾಗಿ ಟರ್ಕಿ ಸಿರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದೆ.

ಇನ್ನಷ್ಟು ವಿಸ್ತರಿಸುವ ಬಯಕೆ

ಇನ್ನಷ್ಟು ವಿಸ್ತರಿಸುವ ಬಯಕೆ

ಟರ್ಕಿ ಅಧ್ಯಕ್ಷ ಎರ್ಡೋಗನ್ ಇತ್ತೀಚೆಗೆ ಮಾತನಾಡುವ ವೇಳೆ ಸಿರಿಯಾದೊಳಗಿನ ಸುರಕ್ಷಿತ ವಲಯವನ್ನು ಉದ್ದೇಶಿತ ರಖ್ಖಾ ಮತ್ತು ಡೀರ್ ಅಲ್-ಝೋರ್ ನಗರಗಳನ್ನೂ ದಾಟಿ ಇನ್ನಷ್ಟು ವಿಸ್ತರಿಸುವ ಬಗ್ಗೆ ಹೇಳಿದ್ದರು. ಇದರಿಂದ ಸಿರಿಯಾದ ಮತ್ತಷ್ಟು ನಿರಾಶ್ರಿತರನ್ನು ಅಲ್ಲಿ ಇರಿಸಲು ಸ್ಥಳ ಸಿಗುತ್ತದೆ ಎಂದಿದ್ದರು.

ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಪಡೆಗಳು (ಎಸ್‌ಡಿಎಫ್) ಉತ್ತರ ಮತ್ತು ಪೂರ್ವ ಸಿರಿಯಾಗಳಲ್ಲಿ ತನ್ನ ನಿಯಂತ್ರಣ ಸಾಧಿಸಲು ಹಲವು ವರ್ಷಗಳ ಕಾಲ ಹೋರಾಟ ನಡೆಸಿದೆ. ಇದಕ್ಕೆ ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸಿದ ಅಮೆರಿಕದ ಪಡೆಗಳು ನೆರವಾಗಿದ್ದವು. ಸಿರಿಯನ್ ಯುದ್ಧದಲ್ಲಿ ಗೆಲುವು ಕಂಡ ಕುರ್ದಿಶ್ ಮತ್ತು ಅದರ ಮಿತ್ರ ಪಡೆಗಳು ತಮ್ಮದೇ ಸ್ವಾಯತ್ತ ಆಡಳಿತ ಸಂಸ್ಥೆ ಹೊಂದಲು ಬಯಸಿದ್ದವು.

ಕುರ್ದಿಶ್ ಪಡೆಯ ನಿಯಂತ್ರಣ

ಕುರ್ದಿಶ್ ಪಡೆಯ ನಿಯಂತ್ರಣ

ಅಮೆರಿಕವು ತನ್ನ ಸೇನೆಯನ್ನು ಇಲ್ಲಿಂದ ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಂಡಿರುವುದು ಟರ್ಕಿಗೆ ನೆರವಾಗಿದೆ. ಜತೆಗೆ ಐಸಿಸ್ ಮತ್ತೆ ತಲೆ ಎತ್ತಲು ಹಾಗೂ ಇರಾನಿಯನ್-ರಷ್ಯನ್ ಬೆಂಬಲಿತ ಸರ್ಕಾರಿ ಪಡೆಗಳು ಇಲ್ಲಿ ಹಿಡಿತ ಸಾಧಿಸುವ ಪ್ರಯತ್ನವೂ ನಡೆಯಬಹುದು.

ಈಶಾನ್ಯ ಸಿರಿಯಾ ಗಡಿ ಭಾಗವು ಪ್ರಸ್ತುತ ಕುರ್ದಿಶ್ ಪಡೆಗಳ ನಿಯಂತ್ರಣದಲ್ಲಿದೆ. ಪೂರ್ವದಲ್ಲಿ ಯುಫ್ರೇಟಸ್ ನದಿಯಿಂದ ಪೂರ್ವದ ಇರಾಕ್ ಗಡಿವರೆಗಿನ 480 ಕಿ.ಮೀ. ವರೆಗೆ ಪ್ರಾಬಲ್ಯ ಹೊಂದಿದೆ. ಟರ್ಕಿಯ ದಾಳಿಯ ಕ್ರಮಗಳಿಗೆ ಅದರ ಮಿತ್ರ ರಾಷ್ಟ್ರಗಳಾದ ರಷ್ಯಾ ಮತ್ತು ಇರಾನ್ ಕೂಡ ಸಂಪೂರ್ಣ ಬೆಂಬಲ ನೀಡಿಲ್ಲ. ಗಡಿಯಲ್ಲಿ ಕುರ್ದಿಶ್ ಪಡೆಗಳು ದುರ್ಬಲವಾದರೆ ಸಿರಿಯಾದಲ್ಲಿ ಐಸಿಸ್ ಸಂಘಟನೆ ಮತ್ತೆ ತಲೆಎತ್ತುತ್ತದೆ. ಇದು ಜಾಗತಿಕ ಮಟ್ಟದಲ್ಲಿ ಕಳವಳ ಉಂಟುಮಾಡಿದೆ.

English summary
Turkey on Wednesday has started attacks on Kurdish forces controlled border regions of Syria. Why Turkey is attacking syria? What are the reasons for it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more