ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಡಿತದ ಹೊಡೆದಾಟ: ಅಫ್ಘಾನ್ ಮೇಲೆ ಪ್ರಭಾವ ಬೀರಲು ಪಾಕಿಸ್ತಾನದಲ್ಲಿ ಕಿತ್ತಾಟ!?

|
Google Oneindia Kannada News

ಇಸ್ಲಮಾಬಾದ್, ಸೆಪ್ಟೆಂಬರ್ 22: ಕಾಬೂಲ್‌ನಲ್ಲಿ ತನ್ನ ಪ್ರಭಾವ ಬೀರುವುದಕ್ಕೆ ಮುಂದಾಗಿರುವ ಪಾಕಿಸ್ತಾನದ ಗುಪ್ತಚರ ಇಲಾಖೆ ಮತ್ತು ಸೇನೆಯ ನಡುವೆ ಪೈಪೋಟಿ ನಡೆಯುತ್ತಿದೆ. ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಮತ್ತು ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ನಡುವೆ ಜಟಾಪಟಿ ನಡೆದಿದೆ.

ಗುಪ್ತಚರ ಮೂಲಗಳ ಮಾಹಿತಿ ಪ್ರಕಾರ, ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ರನ್ನು ಹುದ್ದೆಯಿಂದ ತೆಗೆದು ಹಾಕಲು ಪಾಕಿಸ್ತಾನ ಸೇನೆ ಪ್ರಯತ್ನಿಸಿತ್ತು. ಆದರೆ ಬೇಹುಗಾರಿಕೆ ಸಂಸ್ಥೆಯ ಪ್ರಬಲ ಬೆಂಬಲದಿಂದಾಗಿ ಕಾರ್ಯ ಸಾಧನೆ ಆಗಲಿಲ್ಲ ಎಂದು ತಿಳಿದು ಬಂದಿದೆ.

ಪಾಕ್ ಒಂದೇ ಒಂದು ಬೇಡಿಕೆಯಿಂದ ಸಾರ್ಕ್ ಸದಸ್ಯ ರಾಷ್ಟ್ರಗಳ ಸಭೆ ರದ್ದು!ಪಾಕ್ ಒಂದೇ ಒಂದು ಬೇಡಿಕೆಯಿಂದ ಸಾರ್ಕ್ ಸದಸ್ಯ ರಾಷ್ಟ್ರಗಳ ಸಭೆ ರದ್ದು!

"ಅಫ್ಘಾನಿಸ್ತಾನದಲ್ಲಿ ಹಲವು ವರ್ಷಗಳಿಂದ ತಾಲಿಬಾನ್ ನಾಯಕರು ಮತ್ತು ಅವರ ಕಾರ್ಯಾಚರಣೆ ಬಗ್ಗೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ ನೋಡಿಕೊಳ್ಳುತ್ತಿತ್ತು. ಆದರೆ ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಪಾಕಿಸ್ತಾನದ ಸೇನೆಯು ಕಾಬೂಲ್ ಸರ್ಕಾರದ ಮೇಲೆ ತನ್ನ ಪ್ರಭಾವ ಬೀರುವುದಕ್ಕೆ ಮುಂದಾಗಿದೆ. ಇದನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ(ಐಎಸ್ಐ) ತೀವ್ರವಾಗಿ ವಿರೋಧಿಸುತ್ತಿದೆ," ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ತಾಲಿಬಾನ್ ಸರ್ಕಾರದೊಂದಿಗೆ ಐಎಸ್ಐ ನಂಟು

ತಾಲಿಬಾನ್ ಸರ್ಕಾರದೊಂದಿಗೆ ಐಎಸ್ಐ ನಂಟು

ಪಾಕಿಸ್ತಾನದ ಗುಪ್ತಚರ ಇಲಾಖೆಯು ಅಫ್ಘಾನಿಸ್ತಾನದ ಹೊಸ ತಾಲಿಬಾನ್ ಸರ್ಕಾರದಲ್ಲಿ ಪ್ರಬಲ ಸ್ಥಾನದಲ್ಲಿ ಗುರುತಿಸಿಕೊಂಡಿರುವ ನಾಯಕರು ಹಾಗೂ ಹಕ್ಕಾನಿ ಗುಂಪು ಸೇರಿದಂತೆ ವಿವಿಧ ಬಣಗಳೊಂದಿಗೆ ಪ್ರಬಲ ನಂಟು ಹೊಂದಿದೆ. ಅಫ್ಘಾನ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಮೂಲಗಳ ಪ್ರಕಾರ ಅಫ್ಘಾನಿಸ್ತಾನದಲ್ಲಿ ಐಎಸ್‌ಐ ಸೇನಾಧಿಕಾರಿಗಳು ಮತ್ತು ಇತರ ಪ್ರಮುಖ ನಾಯಕರನ್ನು ಹೊಂದಿದೆ.

ಯುಎಸ್ ವಿರುದ್ಧ ದಾಳಿಗೆ ಪಾಕ್ ನೆಲೆ ಬಳಕೆ

ಯುಎಸ್ ವಿರುದ್ಧ ದಾಳಿಗೆ ಪಾಕ್ ನೆಲೆ ಬಳಕೆ

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವುದಕ್ಕೂ ಪೂರ್ವದಲ್ಲಿ ತಾಲಿಬಾನಿಗಳಿಗೆ ಪಾಕಿಸ್ತಾನವು ಈ ಹಿಂದಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಯುನೈಟೆಡ್ ಸ್ಟೇಟ್ಸ್ ವಿರುದ್ಧ ಹೋರಾಡುವುದಕ್ಕೆ ತಾಲಿಬಾನಿಗಳು ಪಾಕ್ ನೆಲವನ್ನು ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಹೆಚ್ಚಿನ ತಾಲಿಬಾನ್ ಬಣಗಳು ಮತ್ತು ಅದರ ನಾಯಕರು ಪೇಶಾವರ್ ಮತ್ತು ಕ್ವೆಟ್ಟಾದಲ್ಲಿ ಐಎಸ್‌ಐ ಸುರಕ್ಷಿತ ನೆಲೆಗಳನ್ನು ಬಳಸಿಕೊಂಡು ಯುಎಸ್ ವಿರುದ್ಧ ದಾಳಿ ನಡೆಸಿದ್ದರು ಎಂದು ದೂಷಿಸಲಾಗುತ್ತಿದೆ.

ಪಾಕ್ ಸೇನಾ ಮುಖ್ಯಸ್ಥರಿಗಿಂತ ಐಎಸ್ಐ ಪ್ರಬಲ

ಪಾಕ್ ಸೇನಾ ಮುಖ್ಯಸ್ಥರಿಗಿಂತ ಐಎಸ್ಐ ಪ್ರಬಲ

ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಪ್ರಯತ್ನಿಸಿದ್ದರು. ಆದರೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಗೊತ್ತಾಗಿದೆ. ಆ ಮೂಲ ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗಿಂತ ಐಎಸ್ಐ ಮುಖ್ಯಸ್ಥರು ಹೆಚ್ಚು ಪ್ರಭಾವಶಾಲಿ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ಅಫ್ಘಾನಿಸ್ತಾನದ ಹೊಸ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಲು ಮುಂದಾದ ಪಾಕಿಸ್ತಾನದ ಪ್ರಯತ್ನವು ತಾಲಿಬಾನಿಗಳೊಂದಿಗೆ ಬಿರುಕು ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.

ಅಫ್ಘಾನ್ ಸರ್ಕಾರದೊಂದಿಗೆ ಪಾಲು ಬಯಸುತ್ತಿರುವ ಐಎಸ್ಐ

ಅಫ್ಘಾನ್ ಸರ್ಕಾರದೊಂದಿಗೆ ಪಾಲು ಬಯಸುತ್ತಿರುವ ಐಎಸ್ಐ

ಪಾಕಿಸ್ತಾನದ ಐಎಸ್‌ಐನಿಂದಾಗಿ ತಾಲಿಬಾನ್‌ಗಳು ವಿದೇಶಗಳೊಂದಿಗಿನ ಸಂಪರ್ಕದ ಕುರಿತಾಗಿ ತೆಗೆದುಕೊಳ್ಳಬೇಕಾದ ಪ್ರತಿಯೊಂದು ನಿರ್ಧಾರದಲ್ಲೂ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಇನ್ನೊಂದು ದಿಕ್ಕಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅಫ್ಘಾನಿಸ್ತಾನ ಪಡೆಯುವ ಆರ್ಥಿಕ ಸಹಾಯದಲ್ಲಿ ಐಎಸ್ಐ ಪಾಲು ಬಯಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ಯಾವಾಗಲೂ ತನ್ನ ಬಿ ಟೀಮ್ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದೆ. ಭಾರತವನ್ನು ಮಿಲಿಟರಿಯೊಂದಿಗೆ ವ್ಯವಹರಿಸುವಾಗ ಅದನ್ನು ಕಾರ್ಯತಂತ್ರದ ಆಳವನ್ನು ಬಳಸಲು ಯಾವಾಗಲೂ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

English summary
Why Strong Fight Between Pak Army and ISI chiefs over Hold on Afghanistan Govt: Here Read the Reason Behind This.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X