ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್‌ನಲ್ಲಿ ಅನೇಕ ಮಕ್ಕಳು ಕೋವಿಡ್‌ಗೆ ಬಲಿಯಾಗುತ್ತಿರುವುದೇಕೆ?

|
Google Oneindia Kannada News

ಬ್ರೆಸೆಲಿಯಾ, ಜೂ. 05: ಬ್ರೆಜಿಲ್‌ನಲ್ಲಿ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹಾಗೆಯೇ ಮಕ್ಕಳಲ್ಲಿ ಅಂಗವೈಕಲ್ಯದ ಸಮಸ್ಯೆಗಳೂ ಕಂಡು ಬರುತ್ತಿದೆ. 2007 ಮತ್ತು 2008 ರಲ್ಲಿ ಬ್ರೆಜಿಲ್‌ನಲ್ಲಿ ಡೆಂಗ್ಯೂ ಸಾಂಕ್ರಾಮಿಕ ರೋಗ ಪತ್ತೆಯಾದಾಗ ಸಾವಿನ ಪ್ರಮಾಣದಲ್ಲಿ ಅರ್ಧದಷ್ಟು ಮಕ್ಕಳೇ ಆಗಿದ್ದರು. 2015 ರಲ್ಲಿ ಗರ್ಭಿಣಿಯರಲ್ಲಿ ಸೋಂಕು ಕಂಡು ಬಂದ ಸಂದರ್ಭದಲ್ಲಿ 1,600 ಕ್ಕೂ ಹೆಚ್ಚು ನವಜಾತ ಬ್ರೆಜಿಲಿಯನ್ ಶಿಶುಗಳು ಅಂಗವೈಫಲ್ಯದೊಂದಿಗೆ ಜನಿಸಿದವು. ಈಗ ಕೊರೊನಾ ವೈರಸ್‌ ಸೋಂಕಿನ ಸಂದರ್ಭದಲ್ಲೂ ಬ್ರೆಜಿಲ್‌ನಲ್ಲಿ ವಿಶೇಷವಾಗಿ ಬಡ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಮಕ್ಕಳ ಮೇಲೆಯೇ ಈ ಸೋಂಕು ಪರಿಣಾಮ ಬೀರುತ್ತಿದೆ.

ಬ್ರೆಜಿಲ್‌ನಲ್ಲಿ ಕೊರೊನಾ ಹೆಚ್ಚಾಗಿ ಬ್ರೆಜಿಲಿಯನ್ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರೇತರ ಸಂಸ್ಥೆಯಾದ ವೈಟಲ್ ಸ್ಟ್ರಾಟಜೀಸ್‌ನ ಡಾ. ಫಾತಿಮಾ ಮರಿನ್ಹೋ ಮಾಡಿದ ಸಂಶೋಧನೆಯ ಪ್ರಕಾರ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,200 ಕ್ಕೂ ಹೆಚ್ಚು ಮಕ್ಕಳು ಕೋವಿಡ್ -19 ರಿಂದ ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನ ಒಟ್ಟು ಕೊರೊನಾ ಸಾವು ಪ್ರಕರಣಗಳು 4,67,000 ಆಗಿದ್ದು ಈ ಪೈಕಿ ಮಕ್ಕಳ ಸಾವು ಶೇ. 0.5 ಪ್ರತಿಶತಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದೆ. ಆದರೆ ಕೊರೊನಾದಿಂದ ಮಕ್ಕಳು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಎಂಬ ನಿಜಾಂಶವನ್ನು ಅಲ್ಲಗಳೆಯುವಂತಿಲ್ಲ.

ಈ ಪುಣ್ಯಾತ್ಮನ ಆಡಳಿತದಲ್ಲಿ ಬ್ರೆಜಿಲ್ ಇನ್ನೂ ಏನೇನ್ ನೋಡಬೇಕೋ..! ಈ ಪುಣ್ಯಾತ್ಮನ ಆಡಳಿತದಲ್ಲಿ ಬ್ರೆಜಿಲ್ ಇನ್ನೂ ಏನೇನ್ ನೋಡಬೇಕೋ..!

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದಾಗಿ ಸುಮಾರು 6,00,000 ಮಂದಿ ಸಾವನ್ನಪ್ಪಿದ್ದಾರೆ ಎಂದು ವರಿದಯಾಗಿದೆ, ಆದರೆ ಅವುಗಳಲ್ಲಿ 113 ಮಂದಿ ಮಾತ್ರ 5 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಆದರೆ ಬ್ರೆಜಿಲ್‌ನಲ್ಲಿ 900 ಕ್ಕಿಂತ ಹೆಚ್ಚು 5 ವರ್ಷದೊಳಗಿನ ಮಕ್ಕಳು ಸಾವನ್ನಪ್ಪಿದ್ದಾರೆ.

 ಮಕ್ಕಳ ಸಾವಿನ ಪ್ರಮಾಣ ಅಧಿಕ

ಮಕ್ಕಳ ಸಾವಿನ ಪ್ರಮಾಣ ಅಧಿಕ

ಸಾವೊ ಪಾಲೊ ರಾಜ್ಯದಲ್ಲಿ ಹದಿಹರೆಯದವರು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ವೈರಸ್‌ ಸೋಂಕು ಕಂಡು ಬರುತ್ತಿದ್ದು, ಇದು ಬ್ರೆಜಿಲ್‌ನ ಜನಸಂಖ್ಯೆಯ ಶೇಕಡಾ 20 ಕ್ಕಿಂತ ಹೆಚ್ಚಾಗಿದೆ. ಹದಿಹರೆಯದವರು ಮತ್ತು ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಹಾಗೂ ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣವು ಅಧಿಕವಾಗುತ್ತಿದ್ದು ಇದು 2020 ರ ಅಂತ್ಯದವರಗೆ ವರದಿಯಾದ ಪ್ರಮಾಣಕ್ಕಿಂತ ಭಾರೀ ಅಧಿಕವಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾದ ಮಕ್ಕಳಲ್ಲಿ ಅರ್ಧದಷ್ಟು ಅಂದರೆ 900 ಕ್ಕಿಂತ ಹೆಚ್ಚು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು ಅದರಲ್ಲೂ ನವಜಾತ ಶಿಶುಗಳೇ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.

ಅಷ್ಟಕ್ಕೂ ಮಕ್ಕಳು ಸಾಯುತ್ತಿರುವುದು ಏಕೆ?

ಅಷ್ಟಕ್ಕೂ ಮಕ್ಕಳು ಸಾಯುತ್ತಿರುವುದು ಏಕೆ?

ಕಳೆದ ವರ್ಷ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಲೇ ಬ್ರೆಜಿಲ್‌ನಲ್ಲಿ ವಯಸ್ಕರಿಗಿಂತ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಬ್ರೆಜಿಲ್‌ನಲ್ಲಿ ಅನೇಕ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪ್ರಸ್ತುತ ರೂಪಾಂತರಿ ಕೊರೊನಾವಾಗಿದ್ದು ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ಗಾಮಾ ಎಂದು ಕರೆಯಾಗುವ ಈ ರೂಪಾಂತರಿ ಕೊರೊನಾ ಹೆಚ್ಚು ಮಕ್ಕಳ ಮೇಲೆ ಪ್ರಭಾವ ಬೀರುವಂತದ್ದು ಆಗಿದ್ದು, ಇದರಿಂದಾಗಿ ಮಕ್ಕಳು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ಬ್ರೆಜಿಲ್: ಒಂದೇ ದಿನ ಕೊರೊನಾ ಸೋಂಕಿಗೆ 3774 ಮಂದಿ ಬಲಿ!ಬ್ರೆಜಿಲ್: ಒಂದೇ ದಿನ ಕೊರೊನಾ ಸೋಂಕಿಗೆ 3774 ಮಂದಿ ಬಲಿ!

ಗಾಮಾ ಅನಿಯಂತ್ರಿತ ಹರಡುವಿಕೆ

ಗಾಮಾ ಅನಿಯಂತ್ರಿತ ಹರಡುವಿಕೆ

ಸಹಜವಾಗಿ, ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳವು ಎಲ್ಲಾ ವಯೋಮಾನದವರಲ್ಲಿ ಗಾಮಾ ಅನಿಯಂತ್ರಿತ ಹರಡುವಿಕೆಯ ಕಾರಣದಿಂದಾಗಿದೆ. ಕೋವಿಡ್ -19 ಒಳಗಾಗುವ ಗರ್ಭಿಣಿಯರು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಮತ್ತು ಅಕಾಲಿಕ ಜನನವಾಗುತ್ತಿದೆ. ಇದರಿಂದಾಗಿ ಜನಿಸುವ ಮಗು ಬೆಳೆದಿರುವುದಿಲ್ಲ. ನವಜಾತ ಶಿಶುಗಳಿಗೂ ವೈರಸ್‌ ಇರುತ್ತದೆ ಎಂದು ವೈಟಲ್ ಸ್ಟ್ರಾಟಜೀಸ್‌ನ ಡಾ. ಫಾತಿಮಾ ಮರಿನ್ಹೋ ಮಾಡಿದ ಸಂಶೋಧನೆ ತಿಳಿಸಿದೆ.

ಭಾರತದ ಭಾರತದ "ಕೋವ್ಯಾಕ್ಸಿನ್" ಲಸಿಕೆ ತಿರಸ್ಕರಿಸಿದ ಬ್ರೆಜಿಲ್; ಕಾರಣವೇನು?

ಕೋವಿಡ್ -19 ಬಿಕ್ಕಟ್ಟಿಗೆ ಕಾರಣವಾದ ಸರ್ಕಾರದ ವೈಫಲ್ಯ

ಕೋವಿಡ್ -19 ಬಿಕ್ಕಟ್ಟಿಗೆ ಕಾರಣವಾದ ಸರ್ಕಾರದ ವೈಫಲ್ಯ

ಕರೋನವೈರಸ್ ಹರಡುವುದನ್ನು ತಡೆಯಲು ಸರ್ಕಾರವು ಸಾಕಷ್ಟು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾದ ಪರಿಣಾಮ, ಮತ್ತು ಲಸಿಕೆಗಳ ಅಸಮರ್ಪಕ ಪೂರೈಕೆಯ ಪರಿಣಾಮವೇ ಬ್ರೆಜಿಲ್‌ನಲ್ಲಿ ಕೋವಿಡ್ -19 ಬಿಕ್ಕಟ್ಟು ಸೃಷ್ಟಿಸಿದೆ. ಬ್ರೆಜಿಲ್‌ನಲ್ಲಿ ಹೆಚ್ಚು ಹರಡುವ ರೂಪಾಂತರಗಳು ತನ್ನ ಕಬಂದ ಬಾಹು ಚಾಚುತ್ತಿರುವಂತೆಯೇ ದಕ್ಷಿಣ ಅಮೆರಿಕಾದಲ್ಲಿ ಮಾತ್ರವಲ್ಲದೆ ಭಾರತ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲೂ ಇದೇ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಸರ್ಕಾರಗಳು ದಿಟ್ಟ ಕ್ರಮ ಕೈಗೊಳ್ಳದ ಹೊರತಾಗಿ ಮಕ್ಕಳು ಹೇಗೆ ಬದುಕುತ್ತಾರೆ ಎಂದು ಬ್ರೆಜಿಲ್‌ನಲ್ಲಿ ಪ್ರಕಟವಾದ ವರದಿಯೊಂದು ವಿವರಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Why so many childrens in Brazil dying due to Covid-19? read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X