ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿಯಿಂದ ಹೊಸ ವೈರಸ್: ಅಮೆರಿಕ,ಕೆನಡಾದಲ್ಲಿ ಈರುಳ್ಳಿ ಬ್ಯಾನ್

|
Google Oneindia Kannada News

ಅಮೆರಿಕ ಹಾಗೂ ಕೆನಡಾದಲ್ಲಿ ಈರುಳ್ಳಿಯನ್ನು ನಿಷೇಧಿಸಲಾಗಿದೆ. ಅದರ ಜೊತೆ ಸಾಕಷ್ಟು ಆತಂಕವನ್ನೂ ಸೃಷ್ಟಿ ಮಾಡಿದೆ.

ಎರಡೂ ದೇಶಗಳಲ್ಲಿನ ಆರೋಗ್ಯ ಸಂಸ್ಥೆಗಳು ಕ್ಯಾಲಿಫೋರ್ನಿಯಾ ಮೂಲದ ಥಾಮ್ಸನ್ ಇಂಟರ್‌ನ್ಯಾಷನಲ್ ಇಂಕ್ ಸರಬರಾಜು ಮಾಡುತ್ತಿರುವ ಈರುಳ್ಳಿಯಿಂದ ಸಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇದ್ದು, ನಿಷೇಧ ಹೇರಿದೆ. ಆ ಈರುಳ್ಳಿಯಿಂದ ಹರಡುವ ಸೋಂಕು ಯಾವುದು, ಈರುಳ್ಳಿಯಿಂದ ಸೋಂಕು ಹರಡುತ್ತಾ ಎಂಬುದನ್ನು ತಿಳಿಯೋಣ..

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ? ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

ಈ ಈರುಳ್ಳಿ ಕುರಿತು ರೆಸ್ಟೋರೆಂಟ್, ರೀಟೇಲರ್ಸ್, ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ಇರಿಸಲಾಗಿದೆ. ಈರುಳ್ಳಿಯನ್ನು ತಿನ್ನಬೇಡಿ, ಖರೀದಿಸಬೇಕು, ಮಾರಾಟ ಮಾಡಬೇಡಿ ಎಂದು ಹೇಳಲಾಗಿದೆ. ಈ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಆಹಾರ ಸೇವಿಸಿ ಐದರಿಂದ ಆರು ದಿನಗಳಲ್ಲಿ ಲಕ್ಷಣಗಳು ಗೋಚರಿಸುತ್ತವೆ.

ಸಲ್ಮೋನೆಲೋಸಿಸ್ ಎಂದರೇನು?

ಸಲ್ಮೋನೆಲೋಸಿಸ್ ಎಂದರೇನು?

ಈ ಸಲ್ಮೇನೆಲೋಸಿಸ್ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಪ್ರಾಣಿಗಳಲ್ಲಿರುತ್ತದೆ. ಅದು ಮನುಷ್ಯನ ದೇಹಕ್ಕೆ ಬಂದಾಗ ಸೆಲ್ಮೋನೆಲೋಸಿಸ್ ಎಂದು ಕರೆಸಿಕೊಳ್ಳುತ್ತದೆ. ಇದು ಕರುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅತಿಸಾರ, ಹೊಟ್ಟೆನೋವು, ಮಲ ಮತ್ತು ವಾಂತಿಯಲ್ಲಿ ರಕ್ತಸ್ರಾವವಾಗಬಹುದು. ಈ ಲಕ್ಷಣಗಳು 2ರಿಂದ 7 ದಿನಗಳ ಕಾಲ ಇರುತ್ತದೆ.

ಸಾಮಾನ್ಯ ಸ್ಥಿತಿಗೆ ಬರಲು ತಿಂಗಳುಗಳೇ ಬೇಕು

ಸಾಮಾನ್ಯ ಸ್ಥಿತಿಗೆ ಬರಲು ತಿಂಗಳುಗಳೇ ಬೇಕು

ಈ ಸೊಂಕಿನಿಂದ ಮನುಷ್ಯನಿಗೆ ಅಶಕ್ತತೆ ಉಂಟಾಗುತ್ತದೆ. ಇದರ ಲಕ್ಷಣ ವಾರಗಳ ಮಟ್ಟಿಗೆ ಇದ್ದರೂ ಕೂಡ ಅದರಿಂದ ಸುಧಾರಿಸಿಕೊಳ್ಳಲು ತಿಂಗಳುಗಳೇ ಹಿಡಿಯುತ್ತದೆ. ಸಾಕಷ್ಟು ಪ್ರಕರಣಗಳಲ್ಲಿ ಈ ಸೋಂಕು ಕರುಳಿನ ಮೂಲಕ ರಕ್ತಕ್ಕೆ ಸೇರುತ್ತದೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

ಯಾವ ವಯಸ್ಸಿನವರಿಗೆ ಹೆಚ್ಚು ಅಪಾಕಾರಿ

ಯಾವ ವಯಸ್ಸಿನವರಿಗೆ ಹೆಚ್ಚು ಅಪಾಕಾರಿ

ಇದು ಮಕ್ಕಳ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಲಿದೆ. ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೊಂದರೆಯುಂಟಾಗಲಿದೆ. ಆದರೆ ಶೇ.1ಕ್ಕಿಂತಲೂ ಕಡಿಮೆ ಮಂದಿಗೆ ಸೋಂಕು ತಗುಲಿದೆ.

ಈ ಸೋಂಕು ಹರಡುವುದು ಹೇಗೆ?

ಈ ಸೋಂಕು ಹರಡುವುದು ಹೇಗೆ?

ಸಲ್ಮೋನೆಲ್ಲಾ ವೈರಸ್ ನೀರು ಹಾಗೂ ಆಹಾರದ ಮೂಲಕ ಮಾನವನ ಶರೀರವನ್ನು ಸೇರುತ್ತದೆ. ಈ ಪ್ರಕರಣದಲ್ಲಿ ಈ ವೈರಸ್ ಈರುಳ್ಳಿಯಿಂದ ಬಂದಿದೆ ಎಂದು ಹೇಳಲಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಮಂಡಳಿಯು ಆಗಸ್ಟ್ 1 ರಂದು ಈ ಕುರಿತು ಎಚ್ಚರಿಕೆ ನೀಡಿತ್ತು. ಕೆಂಪು, ಹಳದಿ, ಬಿಳಿ ಹಾಗೂ ಸಿಹಿ ಈರುಳ್ಳಿಯನ್ನು ಮೇ ತಿಂಗಳಿನಿಂದ ಕ್ಯಾಲಿಫೋರ್ನಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

English summary
Onions have become a cause of concern in the United States and Canada. Over the past week, health agencies in both countries have put out alerts asking its citizens to discard onions supplied by California-based Thomson International Inc, linking a salmonella bacteria infection with the bulb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X