ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಗೆ ತಾಲಿಬಾನ್ ಖಾನ್ ಎಂಬ ಅಡ್ಡಹೆಸರು ಏಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 26: ಮಾಜಿ ಕ್ರಿಕೆಟರ್, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಸದ್ಯಕ್ಕೆ ಪಿಟಿಐ ಪಕ್ಷಕ್ಕೆ ಆರಂಭಿಕ ಮುನ್ನಡೆ ಸಿಕ್ಕಿದೆ.

ಇಮ್ರಾನ್ ಕೂಡಾ ಸ್ಪರ್ಧಿಸಿರುವ ಎಲ್ಲಾ ಕಡೆ ಮುನ್ನಡೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇಮ್ರಾನ್ ಅವರನ್ನು ತಾಲಿಬಾನ್ ಖಾನ್ ಎಂದು ಅಡ್ಡ ಹೆಸರಿನಿಂದ ಏಕೆ ಕರೆಯಲಾಗುತ್ತದೆ? ಇಲ್ಲಿ ತಿಳಿಯಿರಿ...

ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್ ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್

ಇನ್ನೊಂದೆಡೆ ಭ್ರಷ್ಟಾಚಾರ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿರುವ ಮಾಜಿ ಪ್ರಧಾನಿ ನವಾಜ್ ಷರೀಫ್​ರ ಪಿಎಂಎಲ್-ಎನ್ ಪಕ್ಷ ಹಾಗೂ ಬಿಲಾವಲ್ ಭುಟ್ಟೊ ನಾಯಕತ್ವದ ಪಿಪಿಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಇಮ್ರಾನ್ ಖಾನ್ ಪ್ರಧಾನಿ ಪಟ್ಟಕ್ಕೇರಿದರೆ. ಭಾರತಕ್ಕೆ ಲಾಭಕ್ಕಿಂತ ಆತಂಕವೇ ಹೆಚ್ಚು ಎನ್ನಬಹುದು. 1996ರಲ್ಲಿ ಆರಂಭವಾದ ರಾಜಕೀಯ ಪಕ್ಷವು ಇಸ್ಲಾಂ ಮೂಲಭೂತವಾದವನ್ನು ತನ್ನ ಪ್ರಮುಖ ಧ್ಯೇಯವನ್ನಾಗಿಸಿಕೊಂಡಿದೆ.

ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ! ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಅನುಭವಿಸುತ್ತಿರುವ ಮುಜುಗರ, ಹಿನ್ನಡೆಗೆ ದೆಹಲಿಯೇ ಸಂಚುಕೋರ ಇನ್ನೊಮ್ಮೆ ಇಮ್ರಾನ್ ಆರೋಪಿಸಿದ್ದರು. ಜತೆಗೆ ಪಾಕಿಸ್ತಾನದ ಚುನಾವಣೆಯಲ್ಲಿ ಪ್ರಧಾನಿ ಆಯ್ಕೆ ಮಾಡುವುದರಲ್ಲಿ ಮಹತ್ವದ ಪಾತ್ರವಹಿಸುವ ಪಾಕ್ ಸೇನೆ ಜತೆ ಇಮ್ರಾನ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಪಾಕ್ ಸೇನೆ ಜತೆ ಇಮ್ರಾನ್ ಉತ್ತಮ ಬಾಂಧವ್

ಪಾಕ್ ಸೇನೆ ಜತೆ ಇಮ್ರಾನ್ ಉತ್ತಮ ಬಾಂಧವ್

ವರ್ಷಗಳು ಕಳೆದಂತೆ ಇಮ್ರಾನ್ ಅವರು ಇಮ್ರಾನ್ ಅವರು ತಾಲಿಬಾನಿಗಳ ತತ್ವಕ್ಕೆ ಮನಸೋತಿರುವುದು ಕಂಡು ಬಂದಿದೆ. 2013ರ ಡ್ರೋನ್ ದಾಳಿಯಲ್ಲಿ ವಾಲಿ ಉರ್ ರಹ್ಮಾನ್ ಮೃತರಾದ ಬಳಿಕ ಅವರನ್ನು ಶಾಂತಿ ಪ್ರತಿಪಾದಕ ಎಂದು ಇಮ್ರಾನ್ ಹೊಗಳಿ, ಟ್ವೀಟ್ ಮಾಡಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಅನುಭವಿಸುತ್ತಿರುವ ಮುಜುಗರ, ಹಿನ್ನಡೆಗೆ ದೆಹಲಿಯೇ ಸಂಚುಕೋರ ಇನ್ನೊಮ್ಮೆ ಇಮ್ರಾನ್ ಆರೋಪಿಸಿದ್ದರು. ಜತೆಗೆ ಪಾಕಿಸ್ತಾನದ ಚುನಾವಣೆಯಲ್ಲಿ ಪ್ರಧಾನಿ ಆಯ್ಕೆ ಮಾಡುವುದರಲ್ಲಿ ಮಹತ್ವದ ಪಾತ್ರವಹಿಸುವ ಪಾಕ್ ಸೇನೆ ಜತೆ ಇಮ್ರಾನ್ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್ ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್

ಪಾಕಿಸ್ತಾನದಲ್ಲಿ ತಾಲಿಬಾನ್ ಕಚೇರಿ ಏಕೆ ಆರಂಭಿಸಬಾರದು

ಪಾಕಿಸ್ತಾನದಲ್ಲಿ ತಾಲಿಬಾನ್ ಕಚೇರಿ ಏಕೆ ಆರಂಭಿಸಬಾರದು

ಕತಾರ್ ನಲ್ಲಿ ಅಫ್ಘಾನ್ ತಾಲಿಬಾನಿಗಳ ಕಚೇರಿ ಆರಂಭಿಸಲು ಯುಎಸ್ ನಿಂದ ಅನುಮತಿ ಸಿಗುವುದಾದರೆ, ಪಾಕಿಸ್ತಾನದಲ್ಲಿ ತಾಲಿಬಾನ್ ಕಚೇರಿ ಏಕೆ ಆರಂಭಿಸಬಾರದು ಎಂದು ಇಮ್ರಾನ್ ಪ್ರಶ್ನಿಸಿದ್ದರು.

2014ರಲ್ಲಿ ತಾಲಿಬಾನ್ ನಾಯಕ ಹಕಿಮುಲ್ಲಾ ಮೆಹ್ಸೂದ್ ಅವರು ಡ್ರೋನ್ ದಾಳಿಯಲ್ಲಿ ಮೃತರಾದ ಬಳಿಕ, ತೀವ್ರವಾಗಿ ಖಂಡಿಸಿದ್ದ ಇಮ್ರಾನ್, ಶಾಂತಿ ಪ್ರಕ್ರಿಯೆಗೆ ಯಾವಾಗಲೂ ಅಡ್ಡಿಯಾಗುತ್ತದೆ ಎಂದಿದ್ದರು.

ತಾಲಿಬಾನಿ ಉಗ್ರರನ್ನು ಉತ್ಪಾದಿಸುವ ಕಾರ್ಖಾನೆ ಎಂದೇ ಕರೆಯಲ್ಪಡುವ ಸಾಮಿ ಉಲ್ ಹಕ್ ಮದ್ರಾಸಗೆ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದಿಂದ ಸುಮಾರು 550 ಮಿಲಿಯನ್ ಪಿಕೆಎಫ್ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದನ್ನು ಮರೆಯುವಂತಿಲ್ಲ.

ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಇಮ್ರಾನ್ ಮುಂದೆ

ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಇಮ್ರಾನ್ ಮುಂದೆ

ಚುನಾವಣಾ ಪೂರ್ವ ಸಮೀಕ್ಷೆಯಂತೆ ಷರೀಫ್ ಅವರ ಪಿಎಂಎಲ್- ಎನ್ ಗಿಂತ ಇಮ್ರಾನ್ ಖಾನ್ ಅವರ ಪಿಟಿಐ ಅಲ್ಪಮತಗಳ ಮುನ್ನಡೆ ಪಡೆಯುವ ನಿರೀಕ್ಷೆಯಿದೆ. ಅದರಲ್ಲೂ ಪ್ರಧಾನಿ ಹುದ್ದೆಗೆ ರಹದಾರಿ ತೋರಿಸಬಲ್ಲ ಪಂಜಾಬ್ ಪ್ರಾಂತ್ಯದಲ್ಲಿ ಶೇ 14ರಷ್ಟು ಅಧಿಕ ಮಂದಿ ಪಿಟಿಐ ಪರ ನಿಂತಿದ್ದಾರೆ.

ಪಿಟಿಐ ಪರ ಶೇ 29ರಷ್ಟು ಮತಗಳು ಬಂದಿದ್ದು, ಪಿಎಂಎಲ್ ಎನ್ ಗೆ ಶೇ 25ರಷ್ಟು ಮತಗಳು ಸಿಕ್ಕಿವೆ. ಬಿಲಾವಲ್ ಭುಟ್ಟೋ ಅವರ ಪಾಕಿಸ್ತಾನದ ಪೀಪಲ್ಸ್ ಪಾರ್ಟಿಗೆ ಶೇ20ರಷ್ಟು ಮತಗಳು ಬಂದಿತ್ತು.

ಫಜ್ಲುರ್ ರೆಹ್ಮಾನ್ ನೆರವು ಆಗತ್ಯ

ಫಜ್ಲುರ್ ರೆಹ್ಮಾನ್ ನೆರವು ಆಗತ್ಯ

ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ. ಇಮ್ರಾನ್ ಅವರು ಬಹುಮತ ಗಳಿಸಲು ವಿಫಲರಾದರೂ ಮೈತ್ರಿ ಸರ್ಕಾರ ಸ್ಥಾಪಿಸಬಹುದು. ಇದಕ್ಕೆ ಮಜ್ಲೀಸ್ ಎ ಅಮ್ಮಲ್ ನ ಫಜ್ಲುರ್ ರೆಹ್ಮಾನ್ ನೆರವು ಆಗತ್ಯ. ಈತ ಕೂಡಾ ತಾಲಿಬಾನಿಗಳ ಬೆಂಬಲಿತ.

English summary
Imran Khan is at a touching distance and is set to become the Prime Minister of Pakistan. A man who started off on a positive note, over the years has earned the nickname Taliban Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X